ವಿಷಯಕ್ಕೆ ಹೋಗು

ಸರಬರಾಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೂರೈಕೆ ವಕ್ರರೇಖೆ

ಅರ್ಥಶಾಸ್ತ್ರದಲ್ಲಿ, ಸರಬರಾಜು (ಪೂರೈಕೆ) ಎಂದರೆ ವ್ಯವಹಾರ ಸಂಸ್ಥೆಗಳು, ಉತ್ಪಾದಕರು, ಕಾರ್ಮಿಕರು, ಹಣಕಾಸು ಸ್ವತ್ತುಗಳನ್ನು ಒದಗಿಸುವವರು ಅಥವಾ ಇತರ ಆರ್ಥಿಕ ದಳ್ಳಾಳಿಗಳು ಮಾರುಕಟ್ಟೆ ಅಥವಾ ಮಾರುಕಟ್ಟೆಯಲ್ಲಿನ ಮತ್ತೊಬ್ಬ ಮಧ್ಯವರ್ತಿಗೆ ನೇರವಾಗಿ ಒದಗಿಸಲು ಇಚ್ಚಿಸುವ ಮತ್ತು ಕೊಡಬಲ್ಲ ಸಂಪನ್ಮೂಲದ ಪ್ರಮಾಣ. ಸರಬರಾಜು ಚಲಾವಣೆ, ಸಮಯ, ಕಚ್ಚಾವಸ್ತುಗಳು ಅಥವಾ ಮತ್ತೊಬ್ಬ ದಳ್ಳಾಳಿಗೆ ನೀಡಬಹುದಾದ ಯಾವುದೇ ಇತರ ವಿರಳ ಅಥವಾ ಅಮೂಲ್ಯ ವಸ್ತುವಿನ ರೂಪದಲ್ಲಿರಬಹುದು.[] ಇದು ಹಲವುವೇಳೆ ಸಾಕಷ್ಟು ಅಮೂರ್ತವಾಗಿರುತ್ತದೆ. ಉದಾಹರಣೆಗೆ ಸಮಯದ ವಿಷಯದಲ್ಲಿ, ಸರಬರಾಜನ್ನು ಒಬ್ಬ ದಳ್ಳಾಳಿಯಿಂದ ಮತ್ತೊಬ್ಬನಿಗೆ ವರ್ಗಾಯಿಸಲಾಗುವುದಿಲ್ಲ, ಆದರೆ ಮೊದಲೆನೆಯವನು ಏನಾದರೂ ಮಾಡುವುದರಲ್ಲಿ ಸಮಯ ಕಳೆದಿದ್ದಕ್ಕೆ ಪ್ರತಿಯಾಗಿ ಒಬ್ಬ ಮಧ್ಯವರ್ತಿಯು ಯಾವುದೋ ಬೇರೆ ಸಂಪನ್ಮೂಲವನ್ನು ಒದಗಿಸಬಹುದು. ಸರಬರಾಜನ್ನು ಹಲವುವೇಳೆ ಗ್ರಾಫ್‍ನ ಮೇಲೆ ಪೂರೈಕೆ ವಕ್ರರೇಖೆಯಾಗಿ ಚಿತ್ರಿಸಲಾಗುತ್ತದೆ. ಇದರಲ್ಲಿ ಒದಗಿಸಲಾದ ಪರಿಮಾಣವನ್ನು (ಅವಲಂಬಿ ಚರ) ಅಡ್ಡಡ್ಡವಾಗಿ ಗುರುತಿಸಲಾಗುತ್ತದೆ ಮತ್ತು ಬೆಲೆಯನ್ನು (ಸ್ವತಂತ್ರ ಚರ) ಲಂಬವಾಗಿ ಗುರುತಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಸರಬರಾಜು&oldid=967954" ಇಂದ ಪಡೆಯಲ್ಪಟ್ಟಿದೆ