ವಿಷಯಕ್ಕೆ ಹೋಗು

ಷರ್ವುಡ್ ಆಂಡರ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಷರ್ವುಡ್ ಆಂಡರ್ಸನ್
ಷರ್ವುಡ್ ಆಂಡರ್ಸನ್ 1933ರಲ್ಲಿ
ಜನನ(೧೮೭೬-೦೯-೧೩)೧೩ ಸೆಪ್ಟೆಂಬರ್ ೧೮೭೬
Camden, Ohio, United States
ಮರಣMarch 8, 1941(1941-03-08) (aged 64)
Colón, Panama
ವೃತ್ತಿಲೇಖಕ
ಪ್ರಮುಖ ಕೆಲಸ(ಗಳು)Winesburg, Ohio
ಬಾಳ ಸಂಗಾತಿCornelia Pratt Lane (1904–1916)
Tennessee Claflin Mitchell (1916–1924)
Elizabeth Prall (1924–1932)
Eleanor Copenhaver (1933–1941)

ಪ್ರಭಾವಗಳು


ಸಹಿ


ಷರ್ವುಡ್ ಆಂಡರ್ಸನ್ (ಸೆಪ್ಟೆಂಬರ್ 13, 1876 – ಮಾರ್ಚ್ 8, 1941) . ಅಮೆರಿಕದ ಬರೆಹಗಾರ,ಸಣ್ಣ ಕಥೆಗಾರ.

ಆರಂಭಿಕ ಜೀವನ

[ಬದಲಾಯಿಸಿ]

ಷರ್ವುಡ್ ಆಂಡರ್ಸನ್ ಸೆಪ್ಟೆಂಬರ್ 13, 1876ರಲ್ಲಿ ಓಹಿಯೋದ ಕಾಮ್ಡೆನ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದನು. ೧೮೭೦ರಲ್ಲಿ ಈ ಹಳ್ಳಿಯ ಜನಸಂಖ್ಯೆ ಕೇವಲ ೬೫೦.[].ಆದರೆ ಆಂಡರ್ಸನ್ ಚಿಕ್ಕವನಿದ್ದಾಗಲೇ ಇವನ ಹೆತ್ತವರು ಈ ಹಳ್ಳಿಯನ್ನು ತೊರೆದರು.ಹಲವಾರು ಸ್ಥಳಗಳ ನಂತರೆ ೧೮೮೪ರಲ್ಲಿ ಕ್ಲೈಡ್ ಎಂಬಲ್ಲಿ ಈ ಕುಟುಂಬ ನೆಲೆಸಿತು[][].ಕಡು ಬಡತನದಿಂದಾಗಿ ಷರ್ವುಡ್ ಬಾಲ್ಯದಲ್ಲಿಯೇ ಸಂಪಾದನೆಗೆ ತೊಡಗಬೇಕಾಯಿತು.ಇದರಿಂದಾಗಿ ಇವನ ವಿದ್ಯಾಭ್ಯಾಸಕ್ಕೆ ತೊಡಕುಂಟಾಯಿತು.ಸ್ಪ್ಯಾನಿಷ್ ಅಮೆರಿಕನ್ ಯುದ್ಧದಲ್ಲಿ ಪಾಲುಗೊಂಡು ಅನಂತರ ಕೆಲಕಾಲ ಬಣ್ಣದ ಕಾರ್ಖಾನೆಯೊಂದರ ವ್ಯವಸ್ಥಾಪಕನಾಗಿ ಕೆಲಸ ಮಾಡಿದ.

ಸಾಹಿತ್ಯ ರಚನೆ

[ಬದಲಾಯಿಸಿ]

ವಿಂಡಿ ಮೆಕ್ ಫರ್‍ಸನ್ಸ್ ಸನ್ (1916), ಮಾರ್ಚಿಂಗ್ ಮೆನ್ (1917) ಮೊದಲಾದ ಕಾದಂಬರಿಗಳನ್ನು ಬರೆದರೂ ವೈನ್ಸ್‍ಬರ್ಗ್ ಓಹಿಯೊ ಎಂಬ ಕಥಾಸಂಕಲನ ಪ್ರಕಟವಾದ ಮೇಲೆ ಪ್ರಸಿದ್ಧನಾದ. ಪೂರ್‍ವೈಟ್ (1920), ಡಾರ್ಕ್ ಲಾಫ್ಟರ್ (1925), ಪರ್‍ಹ್ಯಾಪ್ಸ್ ವಿಮೆನ್(1931) ಮೊದಲಾದ ಕಾದಂಬರಿಗಳು ಯಂತ್ರಗಳ ಆಗಮನದಿಂದ ನಗರ ಜೀವನದ ನೈರ್ಮಲ್ಯ ಕದಡಿದುದನ್ನೂ ಅವುಗಳನ್ನು ಅವಲಂಬಿಸಿ ಬಿಳಿಯರ ಬದುಕು ಪಕ್ವಹೀನವಾಗುತ್ತಿರುವುದನ್ನು ಅವುಗಳಿಂದ ಪಾರಾಗುವ ಬಗ್ಗೆ ಯಾವುದೆಂಬುದನ್ನೂ ಚಿತ್ರಿಸುತ್ತವೆ. ದಿ ಟ್ರಯಂಫ್ ಆಫ್ ದಿ ಎಗ್ (1921), ಹಾರ್ಸಸ್ ಅಂಡ್ ಮೆನ್ (1923), ಡೆತ್ ಇನ್ ದಿ ವುಡ್ಸ್ (1933)- ಇವು ಆತನ ಕೆಲವು ಕಥಾ ಸಂಗ್ರಹಗಳು. ಹೋಮ್‍ಟೌನ್ ಎಂಬ ಪ್ರಬಂಧ ಸಂಕಲನ ಮರಣಾನಂತರ ಪ್ರಕಟವಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. Rideout (2006), 20. For connection between Tar and Caledonia, also see Anderson (1942), 14-16
  2. Rideout (2006), 34
  3. Townsend (1987), 14. The chapter about Anderson's early life is called "Jobby".


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: