ಶಾಕಂಭರಿ
ಶಾಕಂಭರಿ | |
---|---|
ಪೋಷಣೆಯ ದೇವತೆ[೧] | |
ದೇವನಾಗರಿ | शाकम्भरी |
ಹಬ್ಬಗಳು | ನವರಾತ್ರಿ, ದುರ್ಗಾ ಪೂಜೆ, ದುರ್ಗಾಷ್ಟಮಿ, ಲಕ್ಷ್ಮೀ ಪೂಜೆ |
ಶಾಕಂಭರಿ ( ಸಂಸ್ಕೃತ : शाकम्भरी), ಶತಾಕ್ಷಿ ಎಂದೂ ಕರೆಯುತ್ತಾರೆ. ಅವಳು ಮಹಾದೇವಿಯ ಅವತಾರವೆಂದು ಪರಿಗಣಿಸಲ್ಪಟ್ಟಿದ್ದಾಳೆ ಮತ್ತು ಹಿಂದೂ ಧರ್ಮದಲ್ಲಿ ಲಕ್ಷ್ಮಿ ಮತ್ತು ದುರ್ಗಾ ಇಬ್ಬರೊಂದಿಗೆ ಗುರುತಿಸಿಕೊಂಡಿದ್ದಾಳೆ. [೨] ದುಷ್ಟ ಅಸುರ ದುರ್ಗಮಾಸುರನು ಋಷಿಗಳು ವೇದಗಳನ್ನು ಮರೆತು ಭೂಮಿಯನ್ನು ಪೋಷಣೆಯಿಂದ ವಂಚಿತಗೊಳಿಸಿದ ನಂತರ, ದೇವಿಯು ಮಾನವರಿಗೆ ಮತ್ತು ದೇವತೆಗಳಿಗೆ ಅವರ ಶಕ್ತಿಯನ್ನು ಪುನಃಸ್ಥಾಪಿಸಲು ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಅರ್ಪಿಸವಲ್ಲಿಕಾಣಿಸಿಕೊಂಡಿದಾಳೆ. [೩]
ವ್ಯುತ್ಪತ್ತಿ
[ಬದಲಾಯಿಸಿ]ಶಾಕಂಭರಿ ಎಂಬ ಪದದ ಅರ್ಥ 'ತರಕಾರಿಗಳನ್ನು ಹೊರುವವಳು'. ಈ ಪದವು ಎರಡು ಪದಗಳಿಂದ ಹುಟ್ಟಿಕೊಂಡಿದೆ (ಸಂಸ್ಕೃತ: शाक) ಇದರರ್ಥ 'ತರಕಾರಿ/ಸಸ್ಯಾಹಾರಿ ಆಹಾರ' ಮತ್ತು ಭರೀ (ಸಂಸ್ಕೃತ: भरी) ಇದರರ್ಥ 'ಧಾರಿ/ಧಾರಕ/ಧರಿಸುವವರು', ಇದು ಅಂತಿಮವಾಗಿ ಭೃ (ಸಂಸ್ಕೃತ:भृ) ಅಂದರೆ 'ಹೊರಲು/ಧರಿಸಲು/ಪೋಷಿಸಲು'. [೪]
ದಂತಕಥೆ
[ಬದಲಾಯಿಸಿ]ಅಸುರ ದುರ್ಗಮಾಸುರನು ಭೂಮಿಯನ್ನು ಬರ ಮತ್ತು ಕೊರತೆಯಲ್ಲಿ ಮುಳುಗಿಸಲು ಪ್ರಯತ್ನಿಸಿದ ಹಾಗೂ ಭೂಮಿಯ ಮೇಲೆ ಒಂದು ಶತಮಾನದ ದುಃಖವನ್ನು ಅನುಭವಿಸಿದ ನಂತರ, ಅಸುರನು ವೇದಗಳನ್ನು ಮರೆತುಬಿಡುವಂತೆ ಮಾಡಿ ಋಷಿಗಳು ಅಂತಿಮವಾಗಿ ಲಕ್ಷ್ಮಿ ದೇವಿಯನ್ನು ನೆನಪಿಸಿಕೊಳುತ್ತಾರೆ. ಆಗ ಅವಳು ಕತ್ತಲೆಯಲ್ಲಿ ಲೋಕಗಳ ಮೇಲೆ ಕಾಣಿಸಿಕೊಂಡಳು- ನೀಲಿ ರೂಪವನ್ನು ಹೊಂದಿ, ಋಷಿಗಳ ಮೇಲೆ ತನ್ನ ನೂರು ಕಣ್ಣುಗಳನ್ನು ಹಾಕಿದಳು. ಋಷಿಗಳು ಈಶ್ವರಿ ಸ್ತೋತ್ರಗಳನ್ನು ಸ್ತುತಿಸಿದಾಗ, ನಾಲ್ಕು ಕೈಗಳ ದೇವಿಯು ಕಮಲ, ಬಾಣಗಳು, ದೊಡ್ಡ ಬಿಲ್ಲು ಮತ್ತು ತರಕಾರಿಗಳು, ಹಣ್ಣುಗಳು, ಹೂವು ಮತ್ತು ಬೇರುಗಳನ್ನು ಹೊಂದಿರುವಂತೆ ಕಾಣಿಸಿಕೊಂಡಳು. ದೇವಿ ಭಾಗವತ ಪುರಾಣದ ಪ್ರಕಾರ, ಜನರ ದುಃಖವನ್ನು ನೋಡಿ, ಅವಳು ತನ್ನ ಕಣ್ಣುಗಳಿಂದ ನಿರಂತರ ಕಣ್ಣೀರನ್ನು ಸುರಿಸುತ್ತಾಳೆ. ಆ ಕಣ್ಣೀರನ್ನು ನದಿಗಳಲ್ಲಿ ಹರಿಯುತ್ತಾಳೆ ಮತ್ತು ಔಷಧಗಳನ್ನು ಅರ್ಪಿಸಿದಳು. [೫] ಲಕ್ಷ್ಮಿಯು ತನ್ನ ಕಾರ್ಯವನ್ನು ಇಂದ್ರನೊಂದಿಗೆ ಲಕ್ಷ್ಮೀ ತಂತ್ರದಲ್ಲಿ ಹಂಚಿಕೊಳ್ಳುತ್ತಾಳೆ . [೬] ಓ ಸಕ್ರನೇ, ಮನುಷ್ಯರು ನನ್ನನ್ನು ನೂರು ಕಣ್ಣುಗಳ (ದೇವತೆ) ಎಂದು ಕೊಂಡಾಡುತ್ತಾರೆ ಮತ್ತು ನಾನು ಇಡೀ ಜಗತ್ತನ್ನು ನನ್ನ ಸ್ವಂತ ದೇಹದಿಂದ ಹೊರಸೂಸುವ ಮತ್ತು (ನನ್ನ ಸಾರ: ದ್ವಿಸ್ತೈಃ) ತುಂಬಿದ ಅದ್ಭುತವಾದ ಜೀವ-ಪೋಷಕ ಸಸ್ಯಗಳಿಂದ ಪೋಷಿಸುತ್ತೇನೆ. ಆಗ, ವಾಸವಾ, ದೇವತೆಗಳು ನನ್ನನ್ನು ಶಾಕಂಭರಿ (ಸಸ್ಯವರ್ಗದ ಶಾಕಾರ) ಎಂದು ಪೂಜಿಸುತ್ತಾರೆ. — ಲಕ್ಷ್ಮಿ ತಂತ್ರ, ಅಧ್ಯಾಯ ೯
ಹೆಚ್ಚಿನ ಓದುವಿಕೆ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Gazetteer of the Bombay Presidency. Printed at the Government Central Press. 1884.
- ↑ SINHA, N. (1991).
- ↑ www.wisdomlib.org (2018-05-22). "Shakambhari, Śākambharī, Śākaṃbharī: 12 definitions". www.wisdomlib.org (in ಇಂಗ್ಲಿಷ್). Retrieved 2022-09-23.
- ↑ Thirugnanam (December 2012). Devi Mahatmyam English Transliteration. Retrieved 2022-09-18.
- ↑ www.wisdomlib.org (2013-05-15). "On the glory of the Śatakṣi Devī [Chapter 28]". www.wisdomlib.org (in ಇಂಗ್ಲಿಷ್). Retrieved 2022-09-23.
- ↑ Lakshmi Tantra A Pancharatra Text Sanjukta Gupta. pp. 51–52.