ಯೂರಿಪ್ಟರಿಡ
ಯೂರಿಪ್ಟರಿಡ | |
---|---|
ಕಾರ್ಲ್ಸ್‌ರೂಹ, ಜರ್ಮನಿಯಲ್ಲಿನ ನೈಸರ್ಗಿಕ ಇತಿಹಾಸದ ರಾಜ್ಯ ಸಂಗ್ರಹಾಲಯದಲ್ಲಿ ಇರುವ ಯೂರಿಪ್ಟೆರಸ್ ರೆಮಿಪೆಸ್‌ನ ಪಳೆಯುಳಿಕೆ ಮಾದರಿ | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಆರ್ಥ್ರೊಪೋಡಾ |
ಉಪವಿಭಾಗ: | ಚೆಲಿಸರೇಟಾ |
ಏಕಮೂಲ ವರ್ಗ: | ಸ್ಲೀರೊಫ಼ೊರೇಟಾ |
ಗಣ: | †ಯೂರಿಪ್ಟರಿಡ Burmeister, 1843 |
ಉಪಗಣಗಳು | |
ತಿಳಿದಿರದ ಸಂಬಂಧ
| |
Synonyms | |
ಯೂರಿಪ್ಟರಿಡ ಎಂಬುದು ಆರ್ತ್ರಾಪೊಡ ವಿಭಾಗದ ಅರ‍್ಯಾಕ್ನಿಡ ವರ್ಗಕ್ಕೆ ಸೇರಿದ ಗತವಂಶಿ ಜೀವಿಗಳ ಗಣ. ಸೈಲ್ಯೂರಿಯನ್ ಕಾಲದಲ್ಲಿ ಇವು ಜೀವಿಸಿದ್ದುವೆನ್ನಲಾಗಿದೆ. ತಮ್ಮ ದೇಹದಲ್ಲಿರುವ ಖಂಡಗಳ ಸಂಖ್ಯೆಯಲ್ಲೂ ಜೋಡಣೆಯಲ್ಲೂ ಇವು ಆಧುನಿಕ ಚೇಳುಗಳನ್ನು ಹೋಲುತ್ತವಾದರೂ ಚೇಳುಗಳು ನೆಲದ ಮೇಲೆ ಮತ್ತು ಒಳಗೆ ವಾಸಿಸುವಂಥವು. ಈ ಗುಂಪಿನ ಜೀವಿಗಳು ಜಲವಾಸಿಗಳಾಗಿದ್ದವು.
ಈ ಗಣದಲ್ಲಿ ಯೂರಿಪ್ಟರಸ್, ಟೆರಿಗೋಟಸ್, ಸ್ಲಿಮೋನಿಯ ಮತ್ತು ಸೈಲನ್ಯೂರ ಎಂಬ ಮುಖ್ಯ ಜಾತಿಗಳುಂಟು. ಆರ್ತ್ರಾಪೊಡ ಗುಂಪಿನ ಇತರ ಪ್ರಾಣಿಗಳಿಗೆ ಹೋಲಿಸಿದರೆ ಈ ಗಣದ ಸದಸ್ಯಗಳೇ ಅತ್ಯಂತ ದೊಡ್ಡ ಗಾತ್ರವೆನ್ನಲಾಗಿದೆ. ಟೆರಿಗೋಟಸ್ ಸು 2 ಮೀ ಉದ್ದವಿತ್ತಲೆನ್ನಲಾಗಿದೆ.
ದೇಹರಚನೆ
[ಬದಲಾಯಿಸಿ]ದೇಹ ಅನೇಕ ಉಂಗುರ/ಖಂಡಗಳಿಂದ ರಚಿತವಾಗಿದ್ದು ಪ್ರೋಸೋಮ (ತಲೆ), ಮೀಸೊಸೋಮಾ (ಎದೆ) ಮತ್ತು ಮೆಟಸೋಮ (ಕಿಬ್ಬೊಟ್ಟೆ) ಎಂಬ ಮೂರು ಪ್ರಧಾನ ಭಾಗಗಳನ್ನು ಪಡೆದಿದೆ.[೧][೨] ತಲೆಯಲ್ಲಿ ಬಾಯಿ, ಸಂಯುಕ್ತ ಹಾಗೂ ಸರಳ ರೀತಿಯ ಕಣ್ಣು, ಆಹಾರವನ್ನು ಹಿಡಿಯಲು ಅನುಕೂಲವಾಗುವ ಚೆಲಿಸೆರಿ, ಕಾಲುಗಳು ಮತ್ತು ಈಜಲು ಅನುಕೂಲವಾಗಿರುವ ದೋಣಿ ಹುಟ್ಟಿನಂಥ ರಚನೆಗಳಿವೆ.[೨] ಎದೆ ಭಾಗದಲ್ಲಿ ಜನನೇಂದ್ರಿಯ ಮತ್ತು ಎಲೆಯಾಕಾರದ ಕಿವಿರುಗಳಿವೆ.
ಕಿಬ್ಬೊಟ್ಟೆ ಉದ್ದಬಾಲದಂತೆ ಇದ್ದು ತುದಿಯಲ್ಲಿ ಟೆಲ್ಸನ್ ಎಂಬ ಕೊಂಡಿಯನ್ನು ಪಡೆದಿದೆ. ಯೂರಿಪ್ಟರಿಸ್ ಮತ್ತು ಟೆರಿಗೋಟಸ್ ಜಾತಿಯ ಪ್ರಾಣಿಗಳಲ್ಲಿ ಟೆಲ್ಸನ್ ಈಜುವುದಕ್ಕೂ ಸಮುದ್ರ ತಳದ ಮಣ್ಣನ್ನು ಕೊರೆಯುವುದಕ್ಕೂ ಸಹಾಯಕವಾಗಿತ್ತು.
ಈ ಗುಂಪಿನ ಪ್ರಾಣಿಗಳು ಚೇಳುಗಳ ಪೂರ್ವಜಗಳಾಗಿದ್ದು ಇವುಗಳಿಂದ ಚೇಳುಗಳು ವಿಕಾಸಗೊಂಡವೆನ್ನಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Størmer 1955, p. 23.
- ↑ ೨.೦ ೨.೧ Braddy & Dunlop 1997, pp. 437–439.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Eurypterids.co.uk – An online resource of eurypterid data and research
- eurypterid.net