ಮೆರಿಲ್ ಲಿಂಚ್
Merrill Lynch & Co. | |
ಸಂಸ್ಥೆಯ ಪ್ರಕಾರ | Subsidiary |
---|---|
ಸ್ಥಾಪನೆ | 1914 (as Charles E. Merrill & Co.) |
ಸಂಸ್ಥಾಪಕ(ರು) | Charles E. Merrill Edmund C. Lynch |
ಮುಖ್ಯ ಕಾರ್ಯಾಲಯ | New York City, USA |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Brian T. Moynihan President & CEO[೧] |
ಉದ್ಯಮ | Finance and Insurance |
ಉತ್ಪನ್ನ | Financial Services Investment Banking Investment management |
ಉದ್ಯೋಗಿಗಳು | 60,000 (2008) |
ಪೋಷಕ ಸಂಸ್ಥೆ | Bank of America |
ಜಾಲತಾಣ | ML.com |
ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ [೨] - ಎನ್ನುವುದು ಬ್ಯಾಂಕ್ ಆಫ್ ಅಮೇರಿಕಾದ ಇನ್ವೆಸ್ಟಮೆಂಟ್ ಬ್ಯಾಂಕಿಂಗ್ ಮತ್ತು ಸಂಪತ್ತು ನಿರ್ವಹಣೆಯ (ವೆಲ್ತ್ ಮ್ಯಾನೇಜ್ಮೆಂಟ್) ವಿಭಾಗ. ಸುಮಾರು 20,000 ಕ್ಕೂ ಹೆಚ್ಚು ಬ್ರೋಕರ್ಗಳನ್ನು (ಏಜೆಂಟರು) ಮತ್ತು $2.2 ಲಕ್ಷ ಕೋಟಿಗಳಷ್ಟು ಮೌಲ್ಯದ ಗ್ರಾಹಕರ ಆಸ್ತಿಯನ್ನು ಹೊಂದಿರುವ ಇದು ಪ್ರಪಂಚದ ಅತಿ ದೊಡ್ಡ ಬ್ರೋಕರಿಜ್ ಸಂಸ್ಥೆ. (ಬ್ರೋಕರಿಜ್ ಸಂಸ್ಥೆ: ಮಾರುವವ ಮತ್ತು ಖರೀದಿಸುವವನ ನಡುವೆ ದಳ್ಳಾಳಿಯಾಗಿ ಕೆಲಸ ನಿರ್ವಹಿಸುವ ಸಂಸ್ಥೆ) [೩] ಇದನ್ನು ಮುಂಚೆ Merrill Lynch & Co., Inc.(ಮೆರಿಲ್ ಲಿಂಚ್ & ಕಂ.,) ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಇತ್ತೀಚಿನ 2009ಕ್ಕೂ ಮುಂಚೆ ಈ ಸಂಸ್ಥೆಯು ಸಾರ್ವಜನಿಕ ಒಡೆತನಕ್ಕೆ ಒಳಪಟ್ಟಿತು. ಇದು ನ್ಯೂಯಾರ್ಕ್ ಷೇರು ಮಾರುಕಟ್ಟೆಯಲ್ಲಿ (ಸ್ಟಾಕ್ ಎಕ್ಸ್ಚೇಂಚ್) MER ಎನ್ನುವ ಚಿನ್ಹೆಯಡಿಯಲ್ಲಿ ವಹಿವಾಟು ನೆಡಸುತ್ತಿತ್ತು. 2008ರ ಆರ್ಥಿಕ ಬಿಕ್ಕಟಿನ ಸಂದರ್ಭದಲ್ಲಿ ಹಣಕಾಸಿನ ಮುಕ್ಕಟ್ಟಿನಲ್ಲಿದ ಈ ಸಂಸ್ಥೆಯನ್ನು ಬ್ಯಾಂಕ್ ಆಫ್ ಅಮೇರಿಕಾ ಪಡೆಯಿತು. ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಅಮೇರಿಕಾ ಹೊಸದಾಗಿ ಪಡೆದಿದ್ದ ಸಂಸ್ಥೆಯೊಂದಿಗೆ ಅದರ ಜಾಗತಿಕ ಬ್ಯಾಂಕಿಂಗ್ ಮತ್ತು ಸಂಪತ್ತು ನಿರ್ವಹಣೆಯ ವಿಭಾಗವನ್ನು ವಿಲೀನ ಮಾಡಿತು.
ಈ ಲೇಖನ ಮೆರಿಲ್ ಲಿಂಚಿನ ಇತಿಹಾಸ ಹಾಗು ಪ್ರಸ್ತುತ ಒಂದು ಬ್ಯಾಂಕಿನ ಅಂಗಸಂಸ್ಥೆಯಾಗಿ ಇದರ ಕಾರ್ಯನಿರ್ವಹಣೆಯ (ವಹಿವಾಟಿನ)ಕುರಿತಂತೆ ಇದೆ. ಮೆರಿಲ್ ಲಿಂಚ್ ಕ್ಯಾಪಿಟಲ್ ಮಾರ್ಕೆಟ್ಸ್ ಸೇವೆಗಳನ್ನು , ಇನ್ವೆಸ್ಟಮೆಂಟ್ ಬ್ಯಾಂಕಿಂಗ್, ಸಂಪತ್ತು ನಿರ್ವಹಣೆ, ಅಸ್ತಿ ನಿರ್ವಹಣೆ, ಇನ್ಷ್ಯುರೆನ್ಸ್(ವಿಮೆ), ಬ್ಯಾಂಕಿಂಗ್ ಮತ್ತು ಇತರ ವಾಣಿಜ್ಯ ಸೇವೆಗಳನ್ನು ಪ್ರಪಂಚದಾದ್ಯಂತ ನೀಡುತ್ತದೆ. ಮೆರಿಲ್ ಲಿಂಚ್ ನ ಮುಖ್ಯ ಕಛೇರಿ ನ್ಯೂಯಾರ್ಕ್ ನಗರದಲ್ಲಿದೆ. ಇದು ಮ್ಯಾನ್ಹ್ಯಾಟನಿನ ಫೋರ್ ವರ್ಲ್ಡ್ ಫೈನ್ಯಾನ್ಷಿಯಲ್ ಸೆಂಟರ್ಎನ್ನುವ 34 ಬಹು ಅಂತಸ್ತಿನ ಕಟ್ಟಡದಲ್ಲಿದೆ.
ಇತಿಹಾಸ
[ಬದಲಾಯಿಸಿ]ಈ ಕಂಪನಿಯನ್ನು ಜನವರಿ 6, 1914 ರಂದು ಚಾರ್ಲ್ಸ್ ಇ. ಮೆರಿಲ್ ಮತ್ತು ಆತನ ಕಂಪನಿ(ಸಂಗಡಿಗರು) ನ್ಯೂಯಾರ್ಕ್ ನಗರದ 7, ವಾಲ್ ಸ್ಟ್ರೀಟ್ ನಲ್ಲಿ ವಹಿವಾಟು ಆರಂಭಿಸುವುದರೊಂದಿಗೆ ಪ್ರಾರಂಭವಾಯಿತು. ಇದಾದ ಕೆಲವು ತಿಂಗಳ ಬಳಿಕ, ಮೆರಿಲ್ ಜೊತೆಗೆ ಆತನ ಸ್ನೇಹಿತ ಎಡಮಂಡ್ ಸಿ. ಲಿಂಚ್ ಸೇರಿಕೊಂಡ, ಹಾಗು ಇದರ ಹೆಸರನ್ನು ಮೆರಿಲ್, ಲಿಂಚ್ & ಕಂ ಎಂದು ಅಧಿಕೃತವಾಗಿ ಬದಲಾಯಿಸಲಾಯಿತು. ಆ ದಿನಗಳಲ್ಲಿ, ಸಂಸ್ಥೆಯ ಹೆಸರಿನಲ್ಲಿ ಮೆರಿಲ್ ಮತ್ತು ಲಿಂಚ್ ನಡುವೆ ಒಂದು ಅಲ್ಪವಿರಾಮ(ಕಾಮ) ಇತ್ತು.[೪] ಈ ಸಂಸ್ಥೆಗೆ ವಿನ್ತ್ರಾಫ್ .ಹೆಚ್. ಸ್ಮಿತ್ 1916ರಲ್ಲಿ ಸೇರಿಕೊಂಡ.
ಮೆರಿಲ್,ಲಿಂಚ್ ಅಂಡ್ ಕಂ.ಆರಂಭವಾದ ಮೊದಲ ಕೆಲವು ವರ್ಷಗಳಲ್ಲಿ ಹಲವಾರು ಯಶಸ್ವಿ ಯೋಜನೆಗಳಲ್ಲಿ ಹಣ ತೊಡಗಿಸಿತು. ಈ ಕಂಪನಿ 1921ರಲ್ಲಿ ಪಾಥೆ ಎಕ್ಸೆಚೇಂಚ್ ಯನ್ನು ಖರೀದಿಸಿತು. ಇದು ನಂತರ RKO (ಆರ್.ಕೆ.ಒ.) ಪಿಕ್ಚರ್ಸ್ ಎಂದಾಯಿತು. ಈ ಸಂಸ್ಥೆ 1926 ರಲ್ಲಿ ,ಸೇಫ್ ವೆ ಎನ್ನುವ ಕಿರಾಣಿ (ದಿನಸಿ, ಗ್ರೋಸರಿ) ಅಂಗಡಿಯ ನಿಯಂತ್ರಣ ವ್ಯವಸ್ಥೆಯನ್ನು ಖರೀದಿಸಿವುದರೊಂದಿಗೆ ಆ ಕಾಲಕ್ಕೆ ಬಹಳ ಮಹತ್ವಪೂರ್ಣವೆನ್ನಿಸಿಕೊಂಡ ಆರ್ಥಿಕ ಹೂಡಿಕೆಯನ್ನು ಮಾಡಿತು. ನಂತರ, 1930ರ ಮೊದಲ ಕೆಲವು ವರ್ಷದಲ್ಲಿಯೇ ಈ ಚಿಕ್ಕ ಕಿರಾಣಿ ಅಂಗಡಿಯನ್ನು ದೇಶದಲ್ಲಿಯೆ ಮೂರನೇ ದೊಡ್ಡ ಕಿರಾಣಿ ಅಂಗಡಿಗಳ ಸರಣಿಯನ್ನಾಗಿಸಿತು. ಈ ಹೂಡಿಕೆಯ ನಂತರ, ಇನ್ವೆಸ್ಟಮೆಂಟ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಂಪನಿ ತನ್ನನು ಹೆಚ್ಚು ತೊಡಗಿಸಿಕೊಳ್ಳುವ ಸಲವಾಗಿ ಅದರ ರೀಟೈಲ್ ಬ್ರೋಕರೇಜ್ ಸೇವೆಯನ್ನು ಇ.ಎ.ಪಿಯರ್ಸ್ ಗೆ ವರ್ಗಾಯಿಸಿತು.
1940ರಲ್ಲಿ ಈ ಸಂಸ್ಥೆ, ಇ.ಎ. ಪಿಯರ್ಸ್ & ಕಂ. ಮತ್ತು ಕಾಸಾಟ್ & ಕಂ. ಎನ್ನುವ ಸಂಸ್ಥೆಗಳೊಂದಿಗೆ ವಿಲೀನಗೊಂಡು ಸ್ವಲ್ಪ ಕಾಲ ಮೆರಿಲ್ ಲಿಂಚ್, ಇ.ಎ. ಪಿಯರ್ಸ್, ಅಂಡ್ ಕಾಸಾಟ್ (Merrill Lynch, E. A. Pierce, and Cassatt) ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿತ್ತು.[೫] ಈ ಕಂಪನಿ 1941ರಲ್ಲಿ ತನ್ನ ವಾರ್ಷಿಕ ಹಣಕಾಸಿನ (ಆರ್ಥಿಕ) ವರದಿಯನ್ನು ಪ್ರಕಟಿಸಿತು. ಈ ರೀತಿ ಮಾಡಿದ ವಾಲ್ ಸ್ಟ್ರೀಟ್ ನ ಮೊದಲ ಕಂಪನಿಯಾಯಿತು. ಇದರ ಜೊತೆಯಲ್ಲಿ 1941ರಲ್ಲಿಯೆ, ಫೆನ್ನರ್ ಮತ್ತು ಬಿಯಾನ್ ಈ ಸಂಸ್ಥೆಯನ್ನು ಸೇರಿದರು, ಹೀಗಾಗಿ ಸಂಸ್ಥೆಯ ಹೆಸರು ಮೆರಿಲ್, ಲಿಂಚ್, ಪಿಯರ್ಸ್, ಫೆನ್ನರ್ ಅಂಡ್ ಬಿಯಾನ್ ಎಂದಾಯಿತು. ಎಡಮಂಡ್ ಲಿಂಚ್ 1952 ರಲ್ಲಿ ನಿಧನಹೊಂದಿದ ಮೇಲೆ ಈ ಕಂಪನಿಯ ಹೆಸರನ್ನು ಮೆರಿಲ್ ಲಿಂಚ್ ಅಂಡ್ ಕಂ. ಎಂಬ ಕಾನೂನು ಬದ್ಧವಾದ ಅಧಿಕೃತ ಸಂಸ್ಥೆಯಾಯಿತು. ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅದರ ಡಿಸೆಂಬರ್ 31, 1957 ಪತ್ತಿಕೆಯಲ್ಲಿ ಈ ಹೆಸರನ್ನು "ಆಮೇರಿಕಾದ ಸಂಸ್ಕೃತಿಯ ಒಂದು ಭಾಗವೆಂದು" (ಎ ಸೋನೋರಸ್ ಬಿಟ್ ಆಫ್ ಅಮೇರಿಕಾನಾ) ಬಣ್ಣಿಸಿತು, ಹಾಗು ಮುಂದುವರೆದು "[ಈ] ಹೆಸರನ್ನು ಹದಿನಾರು ವರ್ಷಗಳಿಂದ ಜನಪ್ರಿಯ ಮಾಡಿದ ಬಳಿಕ, ಮೆರಿಲ್ ಲಿಂಚ್, ಪಿಯರ್ಸ್, ಫೆನ್ನರ್ ಮತ್ತು ಬಿಯಾನ್, ಇದನ್ನು ಬದಲಾಯಿಸುವ ನಿರ್ಧಾರ ಮಾಡಿದ್ದಾರೆ, ಹೀಗೆ ಮಾಡುವುದರೊಂದಿಗೆ ಅವರು ಬ್ರೋಕರೇಜ್ ಸಂಸ್ಥೆಯೊಂದನ್ನು ಅಮೇರಿಕಾದ ಸಂಸ್ಕೃತಿಯ ಭಾಗವನ್ನಾಗಿ ಮಾಡಿದ ವ್ಯಕ್ತಿಗೆ ಗೌರವ ನೀಡುತ್ತಿದ್ದಾರೆ,". (ಈ ಸಂಸ್ಥೆಯನ್ನು 1940ರಿಂದ ನಡೆಸುತ್ತಿದದ್ದು ವಿನ್ತ್ರಾಫ್ .ಹೆಚ್. ಸ್ಮಿತ್). ಈ ವಿಲೀನದಿಂದಾಗಿ ಈ ಕಂಪನಿಯು ಪ್ರಪಂಚದ ಅತಿ ದೊಡ್ಡ ಸೆಕ್ಯೂರಿಟಿಸ್ ವ್ಯಾಪಾರ ಸಂಸ್ಡೆಯಾಯಿತು. ಇದಕ್ಕೆ 98 ನಗರಗಳಲ್ಲಿ ಕಛೇರಿಗಳನ್ನು, 28 ಷೇರು ಮಾರುಕಟ್ಟೆಯಲ್ಲಿ ಸದಸ್ಯತ್ವ ಹೊಂದಿತ್ತು. (ಸೆಕ್ಯೂರಿಟಿಸ್ ವ್ಯಾಪಾರ ಸಂಸ್ಥೆ: ಯಾವುದಾದರೂ ವಸ್ತುವನ್ನು ಒತ್ತೆಯಾಗಿಟ್ಟಿಕೊಂಡು ಸಾಲ ಕೊಡುವ ಸಂಸ್ಥೆ).
ಮಾರ್ಚಿ 1, 1958ರಂದು, ಸಂಸ್ಥೆಯ ಆರ್ಥಿಕ ವರ್ಷ ಪ್ರಾರಂಭವಾಗುತ್ತಿದ್ದ ಹಾಗೆ, ಈ ಸಂಸ್ಥೆ ಹೆಸರು ಮೆರಿಲ್ ಲಿಂಚ್,ಪಿಯರ್ಸ್, ಫೆನ್ನರ್, & ಸ್ಮಿತ್ ಎಂದು ಬದಲಾಯಿತು. ಇದು ನ್ಯೂಯಾರ್ಕ ಷೇರು ಮಾರುಕಟ್ಟೆಯ ನ ಸದಸ್ಯನಾಯಿತು (ಬಿಗ್ ಬೋರ್ಡ್ ಮೆಂಬರ್).[೬]
ಮೆರಿಲ್ ಲಿಂಚ್, ಅದರ ಬ್ರೋಕರೇಜ್ ಜಾಲದಿಂದಾಗಿ (2006ರ ವೇಳೆಗೆ 15,000 ಅಧಿಕವಾಗಿ)ಪ್ರಾಮುಖ್ಯತೆ ಪಡೆಯಿತು.[೭] ಈ ಸಂಸ್ಥೆಯನ್ನು ಕೆಲವೊಮ್ಮೆ "ತಂಡಂರಿಂಗ್ ಹರ್ಡ್" ಎಂದು ಕೂಡ ಕರೆಯಲಾಗುತ್ತದೆ. ಇದು ತಾನು ಅಂಡರ್ರೋಟ್ ಮಾಡುತ್ತಿದ್ದ ಸೆಕ್ಯೂರಿಟಿಗಳನ್ನು ನೇರವಾಗಿ ಪ್ಲೇಸ್ ಮಾಡುತ್ತಿತ್ತು.[೮] (ಅಂಡರೈಟರ್: ಆರ್ಥಿಕ ನೆರವು ಅಥವಾ ಸಾಲಕ್ಕೆ ಒತ್ತಾಸೆಯಾಗಿ ನಿಲ್ಲುವ ಸಂಸ್ಥೆ; ಸಾಮಾನ್ಯಾವಾಗಿ ಸಾಲವನ್ನು ಯಾವುದಾದರೂ ವಸ್ತುವಿನ ಆಧಾರವಾಗಿ ಸಾಲ ಕೊಡಲಾಗುತ್ತದೆ). ಇದಕ್ಕೆ ವ್ಯತಿರಿಕ್ತವಾಗಿ, ಮಾರ್ಗನ್ ಸ್ಟಾನ್ಲಿ ಯಂತಹ, ವಾಲ್ ಸ್ಟ್ರೀಟ್ ನ ಹಲವಾರು ಸಂಸ್ಥೆಗಳು ಅವರ ಅಂಡರ್ವ್ರೈಟ್ ಮಾಡಿದಂತಹ ಸೆಕ್ಯುರಿಟಿಗಳನ್ನು ಪ್ಲೇಸ್ ಮಾಡಲು ಸ್ವತಂತ್ರವಾಗಿದ್ದ ಬ್ರೋಕರ್ ತಂಡಗಳ ಮೇಲೆ ಅವಲಂಬಿತರಾಗಿದ್ದವು.[೯] 1970ರ ತನಕ, ಈ ಸಂಸ್ಥೆಯನ್ನು ವಾಲ್ ಸ್ಟ್ರೀಟಿನ "ಕಾಥೋಲಿಕ್" ಸಂಸ್ಥೆಯೆಂದು ಕರೆಯಲಾಗುತ್ತಿತ್ತು.[೧೦] ಈ ಸಂಸ್ಥೆ 1971ರಲ್ಲಿ ಸಾರ್ವಜನಿಕ ವ್ಯಾಪಾರ ಸಂಸ್ಥೆಯಾಗಿ, US$1.8 ಲಕ್ಷಕೋಟಿ ಯಷ್ಟು ಗ್ರಾಹಕರ ಆಸ್ತಿಯನ್ನು, ಪ್ರಪಂಚದಾದ್ಯಂತ 40ದೇಶಗಳಲ್ಲಿ ವಹಿವಾಟನ್ನು ನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಯಾಯಿತು. 1978ರಲ್ಲಿ ಈ ಸಂಸ್ಥೆ ಅದರ ಸೆಕ್ಯೂರಿಟಿ ಅಂಡರ್ವ್ರೈಟಿಂಗ್ ವಹಿವಾಟಿಗೆ ಆಸರೆಯಾಗಿ ಇದು ವೈಟ್ ವೆಲ್ಡ್ & ಕಂ. ಎನ್ನುವ ಚಿಕ್ಕ ಆದರೆ, ಪ್ರತಿಷ್ಠಿತ ಹಳೆಯ ಶೈಲಿಯ ಇನ್ವೆಸ್ಟಮೆಂಟ್ ಬ್ಯಾಂಕ್ ಅನ್ನು ಖರೀದಿಸಿತು. ಮೆರಿಲ್ ಲಿಂಚ್ ತನ್ನ ವ್ಯಾಪಕ ಜಾಗತಿಕ ಮಟ್ಟದ ಖಾಸಗಿ ಗ್ರಾಹಕರ ಸೇವೆಗಳಿಗೆ ಮತ್ತು ಅದರ ನುರಿತ ಮಾರಾಟಗಾರರ ತಂಡಕ್ಕೆ ಹೆಸರುವಾಸಿಯಾಗಿತ್ತು.
ನವೆಂಬರ್ 1, 2007 ರಂದು ಮೆರಿಲ್ ಲಿಂಚ್ನ CEO (ಸಿ.ಇ.ಒ.: ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ) ಸ್ಟಾನ್ಲಿ ಒ'ನೀಲ್ ಸಂಸ್ಥೆಯ ರಿಸ್ಕ್ ನಿರ್ವಹಣೆ ಮತ್ತು ಸಬ್ ಪ್ರೈಮ್ ಮಾರ್ಟ್ಗೇಜ್ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ವಿಫಲವಾದ ಎಂದು ವ್ಯಾಪಕವಾಗಿ ಖಂಡನೆಗೆ ಒಳಗಾದ ಮೇಲೆ ಕಂಪನಿಯನ್ನು ಬಿಡಬೇಕಾಯಿತು.ಇವನು ತೆಗೆದುಕೊಂಡ ತಪ್ಪು ನಿರ್ಧಾರಗಳ ಪರಿಣಾಮ US $ 2.4 ಶತಕೋಟಿ ನಷ್ಟ ಅನುಭವಿಸಬೇಕಾಯಿತು. ಇದರ ಜೊತೆಗೆ ಆಡಳಿತ ಮಂಡಳಿಯ (ಬೋರ್ಡ್) ಅನುಮತಿಯಿಲ್ಲದಿದ್ದರೂ ಕೂಡ ಈತ ವಾಚೋವಿಯಾ ಬ್ಯಾಂಕಿಂಗ್ ಕಾರ್ಪೋರೇಷನ್ ಎನ್ನುವ ಸಂಸ್ಥೆಯ ಜೊತೆ ವಿಲೀನವಾಗ ಬಹುದಾದ ವಿಚಾರವನ್ನು ಸಾರ್ವಜನಿಕಗೊಳಿಸಿದ. ಈತ ಮೆರಿಲ್ ಲಿಂಚ್ ಸಂಸ್ಥೆಯಿಂದ ಸುಮಾರು $161 ದಶಲಕ್ಷ ಮೌಲ್ಯದ ಷೇರು ಮತ್ತು ನಿವೃತ್ತಿ ಸೌಲಭ್ಯ ಪಡೆದು ಸಂಸ್ಥೆಯನ್ನು ಬಿಟ್ಟ.[೧೧] ನ್ಯೂಯಾರ್ಕ್ ಷೇರು ಮಾರುಕಟ್ಟೆಯ ಸಿ.ಇ.ಒ.(CEO)ಯಾಗಿದ್ದ ಜಾನ್ ಥೆನ್, ಇವನ ಸ್ಥಾನಕ್ಕೆ ಸಿ.ಇ.ಒ(CEO) ಆಗಿ ಡಿಸೆಂಬರ್ 1,2007ರಂದು ಅಧಿಕಾರವಹಿಸಿಕೊಂಡ.
ಜನವರಿ 17, 2008ರಂದು, ಮೆರಿಲ್ ಲಿಂಚ್ ನಾಲ್ಕನೇ ತ್ರೈಮಾಸಿಕ ವರದಿಯಲ್ಲಿ $9.83 ಶತಕೋಟಿ ನಷ್ಟವನ್ನು ವರದಿಮಾಡಿತು. ಇದರಲ್ಲಿ $16.7 ಶತಕೋಟಿಯಷ್ಟು, ಸಬ್ ಪ್ರೈಮ್ ಮಾರ್ಟ್ಗೇಜ್ ಗೆ ಸಂಬಂಧಿಸಿದ ಆಸ್ತಿಯ ಮುಖಬೆಲೆಯನ್ನು ಕಡಿತ ಮಾಡುವುದನ್ನು ಒಳಗೊಂಡಿತು. ಏಪ್ರಿಲ್ 17, 2008 ರಲ್ಲಿ, ಮೆರಿಲ್ ಲಿಂಚ್ 2008ರ ಮೊದಲ ತ್ರೈಮಾಸಿಕದಲ್ಲಿ $1.97 ಶತಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿತು. [೧೨] ಮೆರಿಲ್ ಈ ನಷ್ಟವನ್ನು ಸರಿದೂಗಿಸಲು ಹಣ ಹೊಂದಿಸುವ ಸಲುವಾಗಿ ಪ್ರಿಫರ್ಡ್ ಷೇರುಗಳ ಮಾರಾಟ ಮಾಡಿತು. ಆದರೆ, ಈ ಕ್ರಮ ಕಂಪನಿಯ ಸಾಲ ಪಡೆಯುವ ಶಕ್ತಿಗೆ ಧಕ್ಕೆಯುಂಟು ಮಾಡುಬಹುದು ಹಾಗು ಇದರಿಂದಾಗಿ ಕಂಪನಿ ಸಾಲ ಪಡೆಯಲು ಹೆಚ್ಚು ಬೆಲೆ ತರಬೇಕಾಗಬಹುದು ಎಂದು ತಜ್ಞರ ಅಭಿಪ್ರಾಯಪಡುತ್ತಾರೆ.[೧೩]
ಮೆರಿಲ್ ಲಿಂಚ್ನ CEO (ಸಿ.ಇ.ಒ.) ಜಾನ್ ಥೆನ್, ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಅನ್ನು ತೆಗೆದುಕೊಳ್ಳುವುದಕ್ಕೆ ಸ್ವಲ್ಪ ಮುನ್ನ, 2008ರ ಕೊನೆಯಲ್ಲಿ ಸುಮಾರು $3 ರಿಂದ 4 ಶತಕೋಟಿ ಡಾಲರ್ ಅನ್ನು ಮೆರಿಲ್ ನೌಕರರಿಗೆ ನಾಲ್ಕನೇ ತ್ರೈಮಾಸಿಕದ ಲಾಭಾಂಶವಾಗಿ ಕೊಡಲು ಬಹಳ ಉತ್ಸುಕತೆ ತೋರಿದನೆಂದು ಬಹಿರಂಗವಾದ ಮೇಲೆ, ಅವನು ತನ್ನ CEO (ಸಿ.ಇ.ಒ.) ಸ್ಥಾನಕ್ಕೆ ಜನವರಿ 22, 2009ರಂದು ರಾಜಿನಾಮೆ ಸಲ್ಲಿಸಿಬೇಕಾಯಿತು.[೧೪] ಥೆನ್ ಬ್ಯಾಂಕ್ ಆಫ್ ಅಮೇರಿಕಾದ ಸಂಧಾನಕರೊಂದಿಗೆ ಲಾಭಾಂಶ(ಬೋನಸ್) ನೀಡುವ ವಿಷಯವನ್ನು ಹೇಳಲಿಲ್ಲ ಎಂದು ಅರೋಪಿಸಲಾಗುತ್ತಿದೆ. ಬ್ಯಾಂಕ್ ಆಫ್ ಅಮೇರಿಕಾ ಇತ್ತೀಚಿಗೆ ಯುನೈಟೆಡ್ ಸ್ಟೇಟ್ಸ್ ನ ಟ್ರೆಷರಿಯನ್ನು(ಸರ್ಕಾರದ ಖಜಾನೆ ಖಾತೆ) ತುರ್ತು ಹಣಕಾಸಿನ ಅವಶ್ಯಕತೆಗಳಿಗಾಗಿ ಹೆಚ್ಚುವರಿಯಾಗಿ $20 ಶತಕೋಟಿ ಹಣವನ್ನು, ಇದರ ಅಧೀನ ಸಂಸ್ಥೆಯಾದ ಮೆರಿಲ್ ಲಿಂಚ್ ನಿಂದಾಗುವ ನಷ್ಟ ತುಂಬುವ ಸಲುವಾಗಿ, ಕೇಳಿದೆ.[೧೫] ಷೇರುದಾರರು ಬ್ಯಾಂಕ್ ಆಫ್ ಆಮೇರಿಕಾ ಮತ್ತು ಮೆರಿಲ್ ಲಿಂಚ್ ನ ವಿರುದ್ಧ ಜನವರಿ 22, 2009 ರಂದು ಹೂಡಿರುವ ಕ್ಲಾಸ್-ಆಕ್ಷನ್ ದಾವೆಯಲ್ಲಿ ಥೆನ್ ಯನ್ನು ಕೂಡ ಒಬ್ಬ ಆರೋಪಿಯನ್ನಾಗಿ (ಪ್ರತಿವಾದಿ) ಮಾಡಲಾಗಿದೆ. ಈ ದಾವೆಯಲ್ಲಿ ಬ್ಯಾಂಕ್ ಆಫ್ ಆಮೇರಿಕಾದ CEO (ಸಿ.ಇ.ಒ.) ಕೆನ್ ಲಿವಿಸ್ , ಮೆರಿಲ್ ನ ಮಾಜಿ ಮುಖ್ಯ ಹಣಕಾಸು ಆಧಿಕಾರಿ (ಚೀಫ್ ಫೈನಾನಿಷಿಯಲ್ ಆಫೀಸರ್) ನೆಲ್ಸನ್ ಚಾಯ್, ಮೆರಿಲ್ ನ ಮುಖ್ಯ ಚೀಫ್ ಅಕೌಂಟಿಂಗ್ ಅಧಿಕಾರಿ ಗ್ಯಾರಿ ಕಾರ್ಲಿನಾಂಡ್, ಮತ್ತು ಥೆನ್, ಮೆರಿಲ್ ಅನ್ನು ಬ್ಯಾಂಕ್ ಆಫ್ ಆಮೇರಿಕಾ ತೆಗೆದುಕೊಳ್ಳುವ ಮೊದಲು, ಅದರ ನಷ್ಟಗಳ ಕುರಿತು ಷೇರುದಾರರಿಗೆ ಎಚ್ಚರಿಸುವಲ್ಲಿ ವಿಫಲರಾದರೆಂದು ಅರೋಪಿಸಲಾಗಿದೆ.
ಸಬ್ಪ್ರೈಮ್ ಮಾರ್ಟ್ಗೇಜ್ ಬಿಕ್ಕಟ್ಟು
[ಬದಲಾಯಿಸಿ]ನವೆಂಬರ್ 2007ರಲ್ಲಿ ಮೆರಿಲ್ ಲಿಂಚ್ ನಾಷನಲ್ ಹೌಸಿಂಗ್ ಕ್ರೈಸಿಸ್ ಯೊಂದಿಗೆ ಸಂಬಂಧ ಹೊಂದಿದ್ದ ಆಸ್ತಿಗಳ ಮೌಲ್ಯವನ್ನು ಕಡಿಮೆ ಮಾಡಿ, $8.4 ಶತಕೋಟಿ ಹಣವನ್ನು ನಷ್ಟ ಹೊಂದಿರುವುದಾಗಿ ತಿಳಿಸಿ, ಅದರ ಕಾರ್ಯನಿರ್ವಹಣಾ ಆಧಿಕಾರಿ ಯಾಗಿದ್ದ ಇ. ಸ್ಟಾನ್ಲಿ ಒ'ನೀಲ್ ಯನ್ನು ವಜಾ ಮಾಡುವುದಾಗಿ ತಿಳಿಸಿತು.[೧೬] ಇದಕ್ಕೂ ಮುನ್ನ, ಬೋರ್ಡಿನ ಸಮ್ಮತಿ ಪಡೆಯುವುದಕ್ಕೂ ಮೊದಲೆ, ಒ'ನೀಲ್ ವಾಚೊವಿಯಾ ಬ್ಯಾಂಕ್ ಜೊತೆಯಲ್ಲಿ ವಿಲೀನವಾಗಲು ಮಾತುಕತೆಯನ್ನು ಆರಂಭಿಸಿದ್ದ. ಆದರೆ ಒ'ನೀಲ್ ವಜಾ ಆದ ಮೇಲೆ ಈ ಮಾತುಕತೆಗಳು ಮುರಿದು ಬಿದ್ದವು.[೧೬] ಈ ಸಂಸ್ಥೆ ಹಣವನ್ನು ಹೊಂದಿಸುವ ಸಲುವಾಗಿ ಡಿಸೆಂಬರ್ 2007 ರಲ್ಲಿ ಅದರ ಕಮರ್ಷಿಯಲ್ ಫೈನಾನ್ಸ್ ಬಿಸಿನೆಸ್ ವಿಭಾಗವನ್ನು ಜನರಲ್ ಎಲೆಕ್ಟ್ರಿಕ್ ಗೆ ಮಾರುವುದಾಗಿ ತಿಳಿಸಿತು. ಇದಲ್ಲದೇ, ಸಂಸ್ಥೆ ಅದರ ಬಹುತೇಕ ಷೇರುಗಳನ್ನು ಸಿಂಗಪೂರಿನ ಟೆಮಾಸೆಕ್ ಹೋಲ್ಡಿಂಗ್ಸ್ ಎನ್ನುವ ಸರಕಾರಿ ಇನ್ವೆಸ್ಟಮೆಂಟ್ ಗ್ರೂಪ್ಗೆ ಮಾರುವುದಾಗಿ ಕೂಡ ಪ್ರಕಟಮಾಡಿತು.[೧೭] ಈ ಮಾರಾಟದಿಂದಾಗಿ $6 ಶತಕೋಟಿ ಹಣ ಗಳಿಸಲಾಯಿತು.[೧೭] ಜುಲೈ 2008 ರಲ್ಲಿ ಮೆರಿಲ್ ಲಿಂಚಿನ ಹೊಸ CEO(ಸಿ.ಇ.ಒ) ಜಾನ್ ಥೆನ್, ಆಗ ವ್ಯಾಪಕವಾಗಿದ್ದ ಮಾರ್ಟ್ಗೇಜ್ ಬಿಕ್ಕಟಿನ ಸಮಯದಲ್ಲಿ ಮಾಡಿದ ತಪ್ಪಾದ ಹಣಹೂಡಿಕೆ ಮತ್ತು ಸುಸ್ತಿದಾರರಿಂದಾಗಿ ಕಂಪನಿಗೆ ನಾಲ್ಕನೆ ತ್ರೈಮಾಸಿಕ ವರದಿಯಲ್ಲಿ $4.9ಶತಕೋಟಿ ನಷ್ಟ ವರದಿ ಮಾಡಿದನು.[೧೮] ಜುಲೈ 2007 ಮತ್ತು ಜುಲೈ 2008 ರ ನಡುವೆ ಒಂದು ವರ್ಷದ ಅಂತರದಲ್ಲಿ ಮೆರಿಲ್ ಲಿಂಚ್ $19.2 ಶತಕೋಟಿ ನಷ್ಟ ಅನುಭವಿಸಿತು; ಅಂದರೆ ದಿನವೊಂದಕ್ಕೆ ಸುಮಾರು $52 ದಶಲಕ್ಷ ನಷ್ಟ ಅನುಭವಿಸಿತು.[೧೮] ಕಂಪನಿಯ ಷೇರು (ಸ್ಟಾಕ್) ಮೌಲ್ಯವು ಕೂಡ ಈ ಅವಧಿಯಲ್ಲಿ ಗಣನೀಯವಾಗಿ ಇಳಿಮುಖವಾಯಿತು.[೧೮] ಎರಡು ವಾರಗಳ ನಂತರ, ಕಂಪನಿ ಅದರ ಮಾರ್ಟ್ಗೇಜ್ ಅಧಾರಿತ ಬಂಡವಾಳ ಹೂಡಿಕೆಯನ್ನು ಕಡಿಮೆ ಮಾಡುವ ಸಲುವಾಗಿ ಅದು ಕೆಲವು ಆಯ್ದ ಹೆಡ್ಜ ಫಂಡ್ ಮತ್ತು ಸೆಕ್ಯೂರಿಟಿಗಳನ್ನು ಮಾರುವುದಾಗಿ ತಿಳಿಸಿತು.[೧೯] ಟೆಮಾಸೆಕ್ ಹೋಲ್ಡಿಂಗ್ಸ್ ಈ ಫಂಡಗಳನ್ನು ಖರೀದಿಸಲು ಒಪ್ಪಿಕೊಂಡಿತು. ಇದರೊಂದಿಗೆ ಕಂಪನಿಯಲ್ಲಿ ಅದರ ಬಂಡವಾಳವು $3.4 ಶತಕೋಟಿಯಷ್ಟು ಹೆಚ್ಚಾಯಿತು.[೨೦]
ನ್ಯೂಯಾರ್ಕ್ ಅಟರ್ನಿಜನರಲ್ ಆದ ಅಂಡ್ರೂ ಕೂಮೊ, ಮಾರ್ಟ್ಗೇಜ್ ಆಧರಿಸಿದ ಸೆಕ್ಯೂರಿಟಿಗಳ ಅಪಾಯಗಳ ಬಗ್ಗೆ ತಪ್ಪಾದ ಮಾಹಿತಿ ನೀಡಿದ ಅಪಾದನೆಯ ಮೇಲೆ ಮೆರಿಲ್ ಲಿಂಚ್ ವಿರುದ್ಧ ದಾವೆ ಹೂಡುವುದಾಗಿ ಬೆದರಿಕೆ ಹಾಕ್ಕಿದರು.[೨೧] ಇದಕ್ಕೆ ಒಂದು ವಾರ ಮೊದಲು, ಮೆರಲ್ ಲಿಂಚ್ ಆಕಷನ್-ರೇಟ್ ಡೆಟ್ ಮೂಲಕ $12 ಶತಕೋಟಿಯನ್ನು ಹಿಂಪಡೆಯುವುದಾಗಿ ತಿಳಿಸಿದ್ದ ಸಂಸ್ಥೆ ಈ ದಾವೆಯಿಂದಾಗಿ ಅವರಿಗೆ ಆಶ್ಚರ್ಯವಾಗಿದೆ ಎಂದು ತಿಳಿಸಿತು.[೨೧] ಮೂರು ದಿನಗಳ ನಂತರ,ಕಂಪನಿ ಸಾಲಕೊಡುವುದನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿ, ಅದರ ಯುನೈಟೆಡ್ ಕಿಂಗ್ ಡಮ್ ನ ಅಧೀನ ಸಂಸ್ಥೆಯಿಂದಾಗಿ ಅದಕ್ಕೆ ಸುಮಾರು $30 ಶತಕೋಟಿ ನಷ್ಟಯುಂಟಾಗಿದೆ ಎಂದು ವರದಿ ಮಾಡಿತು. ಹೀಗೆ ಮಾಡಿದ್ದರ ಪರಿಣಾಮ ಅದಕ್ಕೆ ಆ ದೇಶದಲ್ಲಿ ಅದಕ್ಕೆ ತೆರಿಗೆ ವಿನಾಯಿತಿ ಸಿಕ್ಕಿತು.[೨೨] ಆಗಸ್ಟ್ 22, 2008 ರಂದು CEO (ಸಿ.ಇ.ಒ.) ಜಾನ್ ಥೆನ್, ಮಸಾಚುಯೆಟ್ಸ್ ಸೆಕ್ರೆಟರಿ ಆಫ್ ಸ್ಟೇಟ್ಯೊಂದಿಗೆ ಸಂಸ್ಥೆಯಲ್ಲಿ $100 ದಶಲಕ್ಷಕ್ಕೂ ಕಡಿಮೆ ಠೇವಣಿಯಿಟ್ಟಿರುವ ಗ್ರಾಹಕರಿಂದ ಎಲ್ಲಾ ಆಕಷನ್-ರೇಟ್ ಸೆಕ್ಯೂರಿಟಿಗಳನ್ನು ಹಿಂಪಡೆಯುವುದಾಗಿ ಒಪ್ಪಂದಕ್ಕೆ ಬಂದಿರುವುದಾಗಿ ತಿಳಿಸಿದನು.[೨೩] ಸೆಪ್ಟೆಂಬರ್ 5, 2008 ರಂದು, ಗೋಲ್ಡ್ ಮ್ಯಾನ್ ಸಾಚ್ಸ್ ಮೆರಿಲ್ ಲಿಂಚ್ ನ ಸ್ಟಾಕ್ ಅನ್ನು "ಕನ್ವಿಕ್ಷನ್ ಸೆಲ್" ಹಂತಕ್ಕೆ ಇಳಿಸಿ, ಕಂಪನಿ ಇನ್ನೂ ಹೆಚ್ಚಿನ ನಷ್ಟವನ್ನು ಅನುಭವಿಸುವುದಾಗಿ ಎಚ್ಚರಿಸಿತು.[೨೪] ಬ್ಲೂಮ್ ಬರ್ಗ್ ಸೆಪ್ಟೆಂಬರ್ 2008ರಲ್ಲಿ ಸಬ್ ಪ್ರೈಮ್ ಮಾರ್ಟ್ಗೇಜ್ ಬಿಕ್ಕಟಿನ ಸಂದರ್ಭದಲ್ಲಿ ಮೆರಿಲ್ ಲಿಂಚ್ ಮಾರ್ಟ್ಗೇಜ್ ಅಧಾರಿತ ಸೆಕ್ಯೂರಿಟಿಗಳಿಂದ $51.8 ಶತಕೋಟಿಯಷ್ಟು ನಷ್ಟ ಅನುಭವಿಸಿತು ಎಂದು ವರದಿ ಮಾಡಿದೆ.[೨೪]
CDO ವಿವಾದಗಳು
[ಬದಲಾಯಿಸಿ]ಮೆರಿಲ್ ಲಿಂಚ್, ಬೇರೆ ಇತರ ಬ್ಯಾಂಕುಗಳ ಹಾಗೆ 2000ದ ಪ್ರಾರಂಭದಲ್ಲಿ ಮಾರ್ಟ್ಗೇಜ್ ಅಧಾರಿತ ಕೊಲ್ಲಾಟೆರಲೈಸಡ್ ಡೆಬ್ಟ್ ಆಬ್ಲಿಗೇಷನ್ (CDO) ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿತು. (ಸಾಲಕ್ಕೆ ಯಾವುದಾದರೂ ಆಸ್ತಿಯನ್ನು ಆಡ ಇಡುವುದು- ಮಾರ್ಟ್ಗೇಜ್; ಹೀಗೆ ಆಡ ಇಡಲಾದ ಆಸ್ತಿಯ ಮೌಲ್ಯದ ಮೇಲೆ ಸಾಲದ ಮೌಲ್ಯ ಮತ್ತು ಹಿಂಪಾವತಿಸುವ ಮೊತ್ತವನ್ನು ನಿಗದಿ ಮಾಡುಲಾಗುತ್ತದೆ) ಕ್ರೆಡಿಟ್ ಮ್ಯಾಗಜೇನ್ ಎನ್ನುವ ಪತ್ರಿಕೆಯ ಲೇಖನದ ಪ್ರಕಾರ, 2003ರಲ್ಲಿ,ಕ್ರಿಸ್ಟೋಫರ್ ರಿಕಿಯಾರ್ಡಿ ತನ್ನ CDO ತಂಡ- ಕ್ರೆಡಿಟ್ ಸೂಸ್ ಫ್ರಸ್ಟ್ ಬೊಸ್ಟನ್, ಮೆರಿಲ್ ಗೆ ತಂದ ನಂತರ, ಮೆರಿಲ್ CDO ಮಾರುಕಟ್ಟೆಯ ನಾಯಕನಾಗಿ ಬೆಳೆಯತೊಡಗಿತು.[೨೫] 2005ರ ಡಿರೈವೇಟಿವ್ಸ್ ವೀಕ್ ಮಾಗಜೀನ್ ಎನ್ನುವ ವಾರಪತ್ರಿಕೆಯ ಹಿಂಪುಟದಲ್ಲಿ ಮೆರಲ್ ಒಂದು ಜಾಹೀರಾತ್ತನ್ನು ಕೊಟ್ಟಿತು. ಈ ಜಾಹೀರಾತಿನಲ್ಲಿ ಅದು ಅದರ ಗ್ಲೋಬಲ್ ಮಾರ್ಕೆಟ್ಸ್ ಅಂಡ್ ಇನ್ವೆಸ್ಟಿಂಗ್ ಗ್ರೂಪ್ ಪ್ರಪಂಚದಲ್ಲೆ "2004ರಲ್ಲಿ, ವಿಶ್ವದಲ್ಲಿಯೆ #1 CDOಗಳ ಅಂಡರೈಟರ್"[೨೬] ಎಂದು ಗ್ರಾಹಕರ ಮನವೋಲಿಸಿತು. ಬಿಸಿನೆಸ್ ವೀಕ್, ನಂತರ 2006 ಮತ್ತು 2007ರ ನಡುವೆ ಹೇಗೆ ಮೆರಿಲ್ 136 CDOಗಳಲ್ಲಿ $93,000,000,000 ಮೌಲ್ಯಕ್ಕೆ ಪ್ರಮುಖವಾದ ಅಂಡರೈಟರ್(ಲೀಡ್ ಅಂಡರೈಟರ್)ಯಾಯಿತು ಎಂದು ಬಣ್ಣಸಿತು. 2007ರ ವೇಳೆಗೆ ಈ CDOಗಳ ಮೌಲ್ಯ ಕುಸಿಯುತ್ತಿತ್ತು. ಆದರೂ, ಮೆರಿಲ್ ಇದನ್ನು ತನ್ನ ಬಳಿಯೇ ಇಟ್ಟುಕೊಂಡಿತು, ಹೀಗಾಗಿ ಕಂಪನಿಗೆ ಕೋಟ್ಯಾಂತರ ಡಾಲರಗಳ ನಷ್ಟ ಉಂಟಾಯಿತು.[೨೭] ಮೆರಿಲ್ 2008 ರ ಮಧ್ಯ ಭಾಗದಲ್ಲಿ ಒಂದು ಕಾಲದಲ್ಲಿ $30.6 ಶತಕೋಟಿ ಮೌಲ್ಯದ CDOಗಳ ಒಂದು ಭಾಗವನ್ನುಲೋನ್ ಸ್ಟಾರ್ ಫಂಡ್ಸ್ ಎನ್ನುವ ಸಂಸ್ಥೆಗೆ ಹಣದ ರೂಪದಲ್ಲಿ $1.7 ಶತಕೋಟಿ ಮತ್ತು ಸಾಲದ ಬಾಬ್ತಾಗಿ $5.1 ಶತಕೋಟಿಗೆ ಮಾರಾಟಮಾಡಿತ್ತು.[೨೮][೨೯]
ಏಪ್ರಿಲ್ 2009ರಲ್ಲಿ, MBIA ಎನ್ನುವ ಬಾಂಡ್ ಇನ್ಷ್ಯುರೆನ್ಸ್ ಕಂಪನಿ ಮೆರಿಲ್ ಲಿಂಚ್ ಮೇಲೆ ವಂಚನೆ ಮತ್ತು ಐದು ಇತರ ಪ್ರಕರಣಗಳಲ್ಲಿ ಕಾನೂನನ್ನು ಉಲ್ಲಂಘಣೆ ಮಾಡಿದೆ ಎಂದು ದಾವೆ ಹೂಡಿತು. ಇವು ಕ್ರೆಡಿಟ್ ಡಿಫಾಲ್ಟ್ ಸ್ವಾಪ್ ಎನ್ನುವ "ಇನ್ಷ್ಯುರೆನ್ಸ್"ಗೆ ಒಪ್ಪಂದಗಳಿಗೆ ಸಂಬಂಧಪಟ್ಟ ಹಾಗಿದ್ದವು. ಇವುಗಳನ್ನು ಮೆರಿಲ್ MBIA ಯಿಂದ ತನ್ನ ನಾಲ್ಕು ಮಾರ್ಟ್ಗೇಜ್-ಆಧಾರಿತ ಕೊಲ್ಲಾಟೆರಲೈಸಡ್ ಡೆಬ್ಟ್ ಆಬ್ಲಿಗೇಷನ್ ಗಳ ಅಧಾರದ ಮೇಲೆ ಪಡೆದ್ದಿತ್ತು. ಇವುಗಳು: "ML-ಸೀರೀಸ್" CDOs, ಬ್ರೊಡೆರಿಕ್ CDO 2, ಹೈ ಬ್ರಿಡ್ಜ್ ABS CDO I, ಬ್ರೊಡೆರಿಕ್ CDO 3, ಮತ್ತು ನ್ಯೂಬರಿ ಸ್ಟ್ರೀಟ್ CDO. ಮೆರಿಲ್, MBIA ಗೆ ಈ CDOಗಳ ಮೌಲ್ಯದ ಬಗ್ಗೆ ತಪ್ಪಾದ ಮಾಹಿತಿಕೊಟ್ಟಿತು ಎಂದು MBIA ಅಪಾದನೆ ಮಾಡಿತು. ಮೆರಿಲ್ ಈ CDOಗಳ ಗೊಂದಲಮಯದ ಲಕ್ಷಣ (CDOಗಳ ಮೌಲ್ಯವು ದ್ವಿಗುಣ ಮತ್ತು ತ್ರಿಗುಣವಾಗುತ್ತದೆ) ಬಳಸಿಕೊಂಡು ಅವುಗಳ ಮೇಲೆ ಅಧಾರಿತವಾಗಿದ್ದ ಸೆಕ್ಯೂರಿಟಿಗಳಿಗೆ ಇದ್ದ ಸಮಸ್ಯೆಗಳನ್ನು ಮುಚ್ಚಿ ಹಾಕಿತು ಎಂದು ಅಪಾದಿಸಲಾಯಿತು. ಆದರೆ 2010 ರಲ್ಲಿ ನ್ಯಾಯಮೂರ್ತಿ ಬರ್ನಾರ್ಡ್ ಫ್ರೈಡ್, MBIAಗೆ ಮೆರಿಲ್ ಸಂಸ್ಥೆ CDOಗಳು AAA ಶ್ರೇಣಿಯ ಮೌಲ್ಯಕ್ಕೆ ಸರಿಹೊಂದುತ್ತದೆ ಎಂದು ಪ್ರಮಾಣಕರಣ ನೀಡಿ MBIAಯೊಂದಿಗೆ ಒಪ್ಪಂದ ಮಾಡಿಕೊಂಡಿತು, ಆದರೆ ವಾಸ್ತವದಲ್ಲಿ ಅದು ಹಾಗಿರಲಿಲ್ಲ, ಹೀಗಾಗಿ ಮೆರಿಲ್ ಒಪ್ಪಂದ ಭಂಗ ಮಾಡಿದೆ ಎನ್ನುವ MBIAಯ ಅಪಾದನೆ ಒಂದನ್ನು ಬಿಟ್ಟು, ಉಳಿದ ಎಲ್ಲಾ ಅಪಾದನೆಗಳನ್ನು ವಜಾ ಮಾಡಿದರು. CDOಗಳು ಮೌಲ್ಯ ಕಳೆದುಕೊಂಡಾಗ, MBIA ಮೆರಿಲ್ ಗೆ ಭಾರಿ ಪ್ರಮಾಣದ ಹಣವನ್ನು ತೆರಬೇಕಾದ ಕಾರಣ ಅದು ಮುಚ್ಚಿಹೋಯಿತು. ಮೆರಿಲ್, MBIAಯ ವಾದವನ್ನು ಅಲ್ಲಗೆಳೆಯುತ್ತದೆ.[೩೦][೩೧][೩೨]
ಇತ್ತೀಚಗೆ 2009ರಲ್ಲಿ, ರಾಬೊಬ್ಯಾಂಕ್ "ನಾರ್ಮ" ಎಂಬ ಹೆಸರಿನ CDO ವಿಚಾರವಾಗಿ ಮೆರಿಲ್ ವಿರುದ್ಧ ದಾವೆ ಹಾಕಿತು. ರಾಬೊಬ್ಯಾಂಕ್, ಮೆರಿಲ್ ಮೇಲಿನ ತನ್ನ ಅಪದಾನೆಯು ಅಬಾಕಸ್ CDOಗಳ ವಿಚಾರವಾಗಿ ಗೋಲ್ಡ್ ಮ್ಯಾನ್ ಸಾಚ್ಸ್ ವಿರುದ್ಧ SEC'ಯ ವಂಚನೆಯ ಅಪಾದನೆ ರೀತಿಯಲ್ಲಿಯೆ ಇದೆ ಎಂದು ಹೇಳಿತು. ರಾಬೊಬ್ಯಾಂಕ್ ಮಾಗ್ನೆಟಾರ್ ಕ್ಯಾಪಿಟಲ್ ಎನ್ನುವ ಹೆಡ್ಜ ಫಂಡ್, ನಾರ್ಮಗೆ ಒಳಪಡುವ ಆಸ್ತಿಗಳ ಬಗ್ಗೆ ನಿರ್ದಾರ ಮಾಡಿತ್ತು. ಆದರೆ ಮೆರಿಲ್ ಈ ವಿಷಯವನ್ನು ರಾಬೊಬ್ಯಾಂಕ್ ತಿಳಿಸಿರಲಿಲ್ಲ. ಬದಲಿಗೆ, ಅಸ್ತಿಗಳನ್ನು ಆಯ್ಕೆ ಮಾಡುತ್ತಿರುವುದು NIR ಗ್ರೂಪ್ ಎನ್ನುವ ಗುಂಪು ಎಂದು ಮೆರಿಲ್ ರಾಬೊಬ್ಯಾಂಕಿಗೆ ತಿಳಿಸಿತು ಎಂದು ರಾಬೊಬ್ಯಾಂಕ್ ಅಪಾದಿಸಿದೆ. CDOಗಳ ಮೌಲ್ಯ ಕುಸಿದಾಗ, ರಾಬೊಬ್ಯಾಂಕ್ ಮೆರಿಲ್ಗೆ ಭಾರಿ ಮೊತ್ತದ ಹಣವನ್ನು ಕೊಡಬೇಕಾಗಿ ಬಂತು. ರಾಬೊಬ್ಯಾಂಕ್ನ ಅಪಾದನೆಯನ್ನು ಮೆರಿಲ್ ತಿರಸ್ಕರಿಸುತ್ತದೆ, ಪ್ರತಿಯಾಗಿ ಅದರ ವಕ್ತಾರ "ಈ ಎರಡು ವಿಷಯಗಳಿಗೆ ಸಂಬಂಧವಿಲ್ಲ ಹಾಗು ಅವರ ವಾದದಲ್ಲಿ ಯಾವುದೇ ಹುರಳಿಲ್ಲ, ಅಷ್ಟೇ ಅಲ್ಲದೆ ರಾಬೊಬ್ಯಾಂಕ್ ಸುಮಾರು ಒಂದು ವರ್ಷ ಹಿಂದೆ ಹಾಕಿದ್ದ ದಾವೆಯಲ್ಲಿ ಈ ವಿಷಯಗಳ ಪ್ರಸ್ತಾಪವಿರಲಿಲ್ಲ" ಎಂದು ಹೇಳುತ್ತಾರೆ.[೩೩][೩೪][೩೫][೩೬]
ಬ್ಯಾಂಕ್ ಆಫ್ ಅಮೇರಿಕಾಗೆ ಮಾರಾಟವಾದದ್ದು
[ಬದಲಾಯಿಸಿ]ಕೊಲ್ಲಾಟರಲೈಜ್ಡ್ ಡೆಟ್ ಆಬ್ಲಿಗೇಶನ್ ಗಳ ರೂಪದಲ್ಲಿದ್ದ ಅದರ ಭಾರಿ ಮತ್ತು ಅನ್ಹೆಡ್ಜಡ್ ಮಾರ್ಟ್ಗೇಜ್ ಪೊರ್ಟಪೋಲಿಯೊಗಳ ಮೌಲ್ಯ, ಕುಸಿತವಾದ ಕಾರಣ ಭಾರಿ ಪ್ರಮಾಣದ ನಷ್ಟಯುಂಟಾಯಿತು ಎಂದು ಹೇಳಲಾಗುತ್ತಿದೆ. ಮೆರಿಲ್ ಲಿಂಚ್ ನ ಸಾಲ ಪಾವತಿ ಮಾಡುವ ಶಕ್ತಿ ಮತ್ತು ಅಲ್ಪಾವಧಿ ಕಾಲದ ಸಾಲವನ್ನು ರಿಫೈನ್ಯಾನ್ಸ್ ಮಾಡುವ ಶಕ್ತಿಯ ಬಗ್ಗೆ ಮೆರಿಲ್ನ ಪಾಲುದಾರರು ನಂಬಿಕೆ ಕಳೆದುಕೊಂಡ ಕಾರಣ ಮೆರಿಲ್ ಸಂಸ್ಥೆಯನ್ನು ಮಾರಟ ಮಾಡಲೇಬೇಕಾಗಿ ಬಂತು.[೩೭][೩೮] ಬ್ಯಾಂಕ್ ಅಫ್ ಅಮೇರಿಕಾ ಸೆಪ್ಟೆಂಬರ್, 14, 2008 ರಂದು ಅದು ಮೆರಿಲ್ ಲಿಂಚ್ ಅನ್ನು $38.25 ಶತಕೋಟಿ ಕೊಟ್ಟು ಖರೀದಿಸಲು ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿತು.[೩೯] ದಿ ವಾಲ್ ಸ್ಟ್ರೀಟ್ ಜರ್ನಲ್ ಎನ್ನುವ ಪತ್ರಿಕೆ ನಂತರ ಅದೇ ದಿನ ಮೆರಿಲ್ ಲಿಂಚ್ನ ಪ್ರತಿ ಸಮಾನ್ಯ ಷೇರಿಗೆ (ಕಾಮನ್ ಷೇರಿಗೆ), ಬ್ಯಾಂಕ್ ಆಫ್ ಅಮೇರಿಕಾದ 0.8595 ಸಮಾನ್ಯ ಷೇರಿನಂತೆ, ಅಂದರೆ ಪ್ರತಿ ಷೇರಿಗೆ ಸುಮಾರು $29ರಂತೆ ಅಥವಾ ಸುಮಾರು US$ 50ಶತಕೋಟಿಗೆ ಮಾರಾಟವಾಯಿತು ಎಂದು ವರದಿ ಮಾಡಿತು.[೪೦]
ಈ ಬೆಲೆ ಸೆಪ್ಟೆಂಬರ್ 12 ರ ಅಂತಿಮ ಮೌಲಕ್ಕಿಂತ 70.1% ರಷ್ಟು ಜಾಸ್ತಿಯಾಗಿದೆ, ಅಂದರೆ ಇದು ಮೆರಿಲ್ನ ಷೇರಿನ ಮುಖಬೆಲೆಯಾಗಿದ್ದ$21 ಗಿಂತ 38% ಪಟ್ಟು ಅಧಿಕವಾಗಿದೆ.[೪೧] ಆದರೆ, ಇದು, ಇದರ ಸೆಪ್ಟೆಂಬರ್ 2007ರ ಬೆಲೆಗಿಂತ 61% ಕಡಿಮೆಯಾಗಿದೆ.[೪೨] ಬ್ಯಾಂಕ್ ಆಫ್ ಅಮೇರಿಕಾದ CEO(ಸಿ.ಇ.ಒ) ಕೆನೆತ್ ಲೆವಿಸ್, ಕಾಂಗ್ರೆಸ್ಗೆ ನೀಡಿರುವ ಹೇಳಿಕೆ ಹಾಗು ಹೌಸ್ ಒವರ್ಸೈಟ್ ಕಮಿಟಿ ಬಿಡುಗಡೆಮಾಡಿರುವ ಅಂತರಿಕ ಇ-ಮೇಲುಗಳು(ಸಂಸ್ಥೆಯ ಅಂತರಿಕ ಪತ್ರವ್ಯವಹಾರ), ಮೆರಿಲ್ ಲಿಂಚ್ ಅನ್ನು ಬ್ಯಾಂಕ್ ಆಫ್ ಅಮೇರಿಕಾ ಪಡೆಯದೆ ಹೋದರೆ, ಅದರ ಆಡಳಿತ ಮಂಡಲಿ ಮತ್ತು ಬೋರ್ಡ್ನ್ನು ವಜಾ ಮಾಡುವುದಾಗಿ, ಹಾಗು ಬ್ಯಾಂಕಿಗೆ ಫೆಡರೆಲ್ ರೆಗ್ಯೂಲೇಟರ್ಸ್ಗಳ ಜೊತೆಯಲ್ಲಿ ಇರುವ ಸಂಬಂಧದ ಮೇಲೆ ಕೂಡ ಪರಿಣಾಮ ಬೀರುತ್ತದೆ ಎಂದು ಹೆದರಿಸಲಾಯಿತು, ಎಂದು ಬಹಿರಂಗಪಡಿಸಿವೆ.[೪೩][೪೪][೪೫]
ಮೆರಿಲ್ ಲಿಂಚ್ AIGಯೊಂದಿಗಿನ ಅದರ ಇನ್ಷುರೆನ್ಸ್ ಒಪ್ಪಂದಗಳಿಂದಾಗಿ ನೂರಾರು ಕೋಟಿ ಮಾರ್ಚಿ 2008ರಲ್ಲಿ ಪಡೆಯಿತು ಎಂದು ವರದಿಗಳು ತಿಳಿಸಿದೆ. AIG ನೀಡಿದ ಹಣ ಯುನೈಟೆಡ್ ಸ್ಟೇಟ್ಸ್ನ ತೆರಿಗೆದಾರರು (ತೆರಿಗೆ ಪಾವತಿ ಮಾಡುವವರು-ಟ್ಯಾಕ್ಸ್ ಪೇಯರ್)ನೀಡಿದ್ದ $6.8ಶತಕೋಟಿ ಕೂಡ ಒಳಗೊಂಡಿದೆ.[೪೬][೪೭]
ಆರೇಂಜ್ ಕೌಂಟಿಯೊಂದಿಗೆ ಇತ್ಯರ್ಥ
[ಬದಲಾಯಿಸಿ]ಮೆರಿಲ್ ಲಿಂಚ್ ಕ್ಯಾಲಿಪೋರ್ನಿಯಾದ ಆರೇಂಜ್ ಕೌಂಟಿಯ ಮಾಜಿ ಖಜಾಂಜಿ (ಟ್ರೆಷರರ್)ರಾಬರ್ಟ್ ಸಿಟ್ರಾನ್ ಗೆ ಸೂಕ್ತವಾಗಿರದ ಮತ್ತು ಅಪಾಯಕರವಾದ ವಿನಿಯೋಜನೆಗಳನ್ನು (ರಿಸ್ಕಿ ಇನ್ವೆಸ್ಟಮೆಂಟ್)ಗಳನ್ನು ಮಾರಿತು ಎಂಬ ಅಪಾದನೆಯಿಂದ ತಪ್ಪಿಸಿಕೊಳ್ಳಲು, ಆರೇಂಜ್ ಕೌಂಟಿಗೆ $400 ದಶಲಕ್ಷ ಕೊಟ್ಟಿತು. ಸಿಟ್ರಾನ್ $1.69 ಶತಕೋಟಿ ನಷ್ಟ ಅನುಭವಿಸಿದನು, ಇದರ ಪರಿಣಾಮ ಕೌಂಟಿಯು ಡಿಸೆಂಬರ್ 1994ರಲ್ಲಿ ದಿವಾಳಿಯಾಗಿರುವುದಾಗಿ ಘೋಷಿಸಬೇಕಾಯಿತು. ಕೌಂಟಿ ಬಹಳಷ್ಟು ಸೆಕ್ಯೂರಿಟಿ ಕಂಪನಿಗಳನ್ನು, ಸಲಹೆಗಾರರನ್ನು ಮತ್ತು ಹಣಕಾಸಿನ ತಜ್ಞರ (ಅಕೌಂಟಂಟ್) ಮೇಲೆ ದಾವೆ ಹೂಡಿತು. ಆದರೆ, ಮೆರಿಲ್ ತನ್ನಿಂದ ನಷ್ಟಯುಂಟಾಯಿತು ಎಂದು ಒಪ್ಪಿಕೊಳ್ಳದೆ, ಜೂನ್ 1998ರಲ್ಲಿ ಇತ್ಯರ್ಥ ಮಾಡಿಕೊಂಡಿತು. ಕೌಂಟಿ ಈ ನಡೆಯಿಂದಾಗಿ ಒಟ್ಟು ಸುಮಾರು $600 ದಶಲಕ್ಷವನ್ನು (ಮೆರಿಲ್ ನ $400 ದಶಲಕ್ಷ ಒಳಗೊಂಡಂತೆ) ಹಿಂದಕ್ಕೆ ಗಳಿಸಿತು.
ನಿಯಂತ್ರಣಾ ಕ್ರಮಗಳು
[ಬದಲಾಯಿಸಿ]ಅನಾಲಿಸ್ಟ್ ರಿಸೆರ್ಚ್ ಸೆಟ್ಲಮೆಂಟ್ (ಸಂಶೋಧನಾತ್ಮಕ ವಿಶ್ಲೇಷಣಾ ಇತ್ಯರ್ಥ)
[ಬದಲಾಯಿಸಿ]ದಾರಿತಪ್ಪಿಸುವ ಸಂಶೋಧನೆಪ್ರಕಟಮಾಡಿದ್ದ ಕಾರಣದಿಂದಾಗಿ, 2002ರಲ್ಲಿ ಮೆರಿಲ್ ಲಿಂಚ್ $100 ದಶಲಕ್ಷ ದಂಡ ಕೊಟ್ಟು ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳಬೇಕಾಯಿತು. ನ್ಯೂಯಾರ್ಕ್ ಅಟರ್ನಿಜೆನರಲ್ ಮತ್ತು ಇತರ ಸ್ಟೇಟ್ ಸೆಕ್ಯೂರಿಟಿ ನಿಯಂತ್ರಕರ (ಸ್ಟೇಟ್ ಸೆಕ್ಯೂರಿಟಿ ರೆಗ್ಯೂಲೇಟರ್) ಜೊತೆಯಲ್ಲಿ ಒಪ್ಪಂದಕ್ಕೆ ಬಂದ ಮೆರಿಲ್ ಲಿಂಚ್, ತಾನು ಮಾಡುವ ಮಾರುಕಟ್ಟೆಯ ಸಂಶೋಧನೆಗಳನ್ನು ಇನ್ನಷ್ಟು ಬಹಿರಂಗಪಡಿಸುವುದಾಗಿ ಹಾಗು ಅದರ ಇನ್ವೆಸ್ಟಮೆಂಟ್ ಬ್ಯಾಂಕಿಂಗ್ ವಿಭಾಗದಿಂದ ಸಂಶೋಧನೆಯನ್ನು ಬೇರ್ಪಡಿಸುವುದಾಗಿ ಒಪ್ಪಿಕೊಂಡಿತು.[೪೮]
ಮೆರಿಲ್ ಲಿಂಚ್ ನಲ್ಲಿದ ಪ್ರಖ್ಯಾತ ವಿಶ್ಲೇಷಣೆಕಾರ ಹೆನ್ರಿ ಬ್ಲಾಡ್ಗೆಟ್, ಕಂಪನಿ ಇ-ಮೇಲುಗಳಲ್ಲಿ ಷೇರುಗಳ ಬೆಲೆಯನ್ನು ಅಂದಾಜು ಮಾಡುತ್ತಿದ್ದ. ಇದು ಮೆರಿಲ್ ಈ ಷೇರುಗಳ ಬಗ್ಗೆ ಸಾರ್ವಜನಿಕವಾಗಿ ಪ್ರಕಟ ಮಾಡುತ್ತಿದ್ದ ಅಂದಾಜು ಬೆಲೆಗಳೊಂದಿಗೆ ತಾಳೆಯಾಗುತ್ತಿರಲಿಲ್ಲ. U.S. (ಯು.ಎಸ್.) ಸೆಕ್ಯೂರಿಟಿಸ್ ಅಂಡ್ ಎಕ್ಸಚೇಂಜ್ ಕಮೀಷನ್ ಇವನ ವಿರುದ್ಧ 2003ರಲ್ಲಿ ಸಿವಿಲ್ ಸೆಕ್ಯೂರಿಟಿ ಫ್ರಾಡ್ (ವಂಚನೆ) ಮಾಡಿದ್ದಾನೆಂದು ಆರೋಪ ಸಲ್ಲಿಸಿತು. ಆದರೆ, ಬ್ಲಾಡ್ಗೆಟ್ ಆತನ ವಿರುದ್ಧ ಮಾಡಿದ ಅಪಾದನೆಗಳನ್ನು ಸರಿ ಅಥವಾ ತಪ್ಪು ಎಂದು ಹೇಳದೆ, ಇತ್ಯರ್ಥ ಮಾಡಿಕೊಂಡ. ಈತನನ್ನು ಸೆಕ್ಯೂರಿಟಿ ಉದ್ಯಮದಿಂದ ಜೀವನಪರ್ಯಂತ ನಿಷೇಧಿಸಲಾಗಿದೆ. ಆತ ದಂಡದ ರೊಪದಲ್ಲಿ $2 ದಶಲಕ್ಷ ಮತ್ತು ಅನ್ಯಾಯವಾಗಿ ಸಂಪಾದನೆ ಮಾಡಿದ ಸಂಪತ್ತು ಎಂದು ಅಂದಾಜು ಮಾಡಲಾದ ಸುಮಾರು $2 ದಶಲಕ್ಷವನ್ನು ಕೊಟ್ಟನ್ನು.
ಆಗ CEO(ಸಿ.ಇ.ಒ.)ಆಗಿದ್ದ, ಡೇವಿಡ್ ಕೊಮನಸ್ಕಿ, ಕಂಪನಿ ಸಂಶೋಧನೆಗಳ(ಸಮೀಕ್ಷೆ) ಬಗ್ಗೆ ಸ್ಥಾಪಿಸಿದ್ದ ಮಾನದಂಡವನ್ನು ತಲುಪಲು ವಿಫಲವಾದ ಕಾರಣ "ನಾನು ನಮ್ಮ ಗ್ರಾಹಕರು, ಷೇರುದಾರರು ಮತ್ತು ನಮ್ಮ ಸಂಸ್ಥೆಯ ನೌಕರರಿಗೆ ಸಾರ್ವಜನಿಕವಾಗಿ ಕ್ಷೆಮೆ ಕೇಳಬಯಸುತ್ತೇನೆ..." , ಎಂದು ಹೇಳಿದನು.
ಎನ್ರಾನ್/ಮೆರಿಲ್ ಲಿಂಚ್ ನೈಜಿರಿಯಾದ ಬಾರ್ಜ್
[ಬದಲಾಯಿಸಿ]ಎನ್ರಾನ್ ವಂಚನೆ ಪ್ರಕರಣದ ತನಿಖೆಗೆ ಸಂಭಂದಿಸಿದ ಹಾಗೆ 2004ರಲ್ಲಿ ಮೆರಿಲ್ ಅಧಿಕಾರಗಳ ವಿರುದ್ಧ ಸರಕಾರ 2004ರಲ್ಲಿ ದಾವೆ ಹೂಡಿತು. ಈ ಪ್ರಕರಣದಲ್ಲಿ, ಎನ್ರಾನ್ ವಿದ್ಯುತ್ ಕಂಪನಿಗೆ ಹಣಕಾಸಿನ ಅವ್ಯವಹಾರ ನಡೆಸಲು ಸಹಾಯ ಮಾಡಿದ್ದಾರೆಂಬ ಅಪಾದನೆ ಮೇರೆಗೆ ಸರಕಾರ ಕ್ರಿಮಿನಲ್ ದಾವೆಯನ್ನು ಬ್ಯಾಂಕ್ ಅಥವಾ ಸೆಕ್ಯೂರಿಟಿ ಸಂಸ್ಥೆಯ ಆಧಿಕಾರಿಗಳ ವಿರುದ್ಧ ಹಾಕಿದ್ದು ಇದೇ ಮೊದಲು. ಈ ಕೇಸು(ಪ್ರಕರಣ) ಮೆರಲ್ ಮತ್ತು ಎನ್ರಾನ್ ನಡುವೆ 1999ರಲ್ಲಿ ನೈಜೀರಿಯಾದ ತೀರದಲ್ಲಿರುವ ಕೆಲವು ವಿದ್ಯುತ್ ಉತ್ಪಾದಕ ಘಟಕಗಳ (ಪವರ್ ಬಾರ್ಜ್: ದೊಡ್ಡ ಹಡಗಿನ ಮೇಲೆ ಅಲವಡಿಸಲಾಗುವ ವಿದ್ಯುತ್ ಘಟಕ, ಇದನ್ನು ತೇಲಾಡುವ ವಿದ್ಯುತ್ ಘಟಕ ಎಂದು ಕೂಡ ಕರೆಯುತ್ತಾರೆ) ಮಾರಟದ ವ್ಯವಹಾರದ ಕುರಿತಂತೆಯಿದೆ. ಈ ಅಪಾದನೆಯು 1999ರಲ್ಲಿ ನೈಜೀರಿಯಾದ ವಿದ್ಯುತ್ ಉತ್ಪಾದಕ ಘಟಕವನ್ನು, ಎನ್ರಾನ್ಗೆ ಅಧೀನವಾಗಿದ್ದ ಸಂಸ್ಥೆಯೊಂದು ಮೆರಿಲ್ ಲಿಂಚ್ಗೆ ಮಾರಾಟಮಾಡಿದ್ದು ಕೇವಲ ಕೃತ್ರಿಮ ಎಂದು ಅಪಾದಿಸಿತು (ಮಾರಟ ಮಾಡಿದ ಹಾಗೆ ತೋರಿಸುದರು). ಹೀಗೆ ಮಾಡಿದ್ದರ ಫಲವಾಗಿ, ಎನ್ರಾನ್ಗೆ ತೆರಿಗೆಗೂ ಮುನ್ನದ ಲಾಭವಾಗಿ ಸುಮಾರು $12 ದಶಲಕ್ಷ ಹಣವನ್ನು ಸಂಪಾದಿಸಿತು(ಆನ್ಯಾಯದಿಂದ). ಆದರೆ, ವಾಸ್ತವದಲ್ಲಿ ಅಲ್ಲಿ ನಿಜವಾದ ಮಾರಾಟ ಅಥವಾ ನಿಜವಾದ ಲಾಭ ಎರಡೂ ನಡೆದಿರಲಿಲ್ಲ.
ಮೆರಿಲ್ ನ ಉನ್ನತ ಹುದ್ದೆಯಲ್ಲಿದ ನಾಲ್ಕು ಮಾಜಿ ಅಧಿಕಾರಿಗಳು ಮತ್ತು ಎನ್ರಾನ್ ನಲ್ಲಿ ಮಧ್ಯಮ ಶ್ರೇಣಿಯ ಹುದ್ದೆಯಲ್ಲಿದ್ದ ಎರಡು ಮಾಜಿ ಅಧಿಕಾರಿಗಳ ವಿರುದ್ಧ ಮೋಸ ಹಾಗು ವಂಚನೆಯ ಅರೋಪವನ್ನು ಹೊರಿಸಲಾಯಿತು. ಈ ಪ್ರಕರಣದಲ್ಲಿ ಕೂಡ ಮೆರಿಲ್ ಇತ್ಯರ್ಥ ಮಾಡಿಕೊಳ್ಳಲು ಮುಂದೆ ಬಂತು. ಅದರ ಪ್ರಕಾರ ಬ್ಯಾಂಕರ್ಗಳನ್ನು ವಜಾಮಾಡಿ ಹಾಗು ತನ್ನ ವ್ಯವಸ್ಥಿತ-ಹಣಕಾಸಿನ ವ್ಯವಹಾರಗಳನ್ನು ಇನ್ನು ಮುಂದೆ ಹೊರಗಡೆಯವರು ಪರೀಕ್ಷೆ ಮಾಡಲು ಅನುಮತಿ ನೀಡುಲು ಒಪ್ಪಿಕೊಂಡಿತು. U.S (ಯು.ಎಸ್.) ಸೆಕ್ಯೂರಿಟಿಸ್ ಅಂಡ್ ಎಕ್ಸಚೇಂಚ್ ಕಮೀಷನ್, ಮೆರಿಲ್ ವಿರುದ್ಧ ವಂಚನೆಯ ಸಿವಿಲ್ ಅಪಾದನೆ ಮಾಡಿದಾಗ, ಈ ಪ ಪ್ರಕರಣದಲ್ಲಿ ಮೆರಿಲ್ ತಾನು ತಪ್ಪು ಮಾಡಿರುವುದಾಗಿ ಒಪ್ಪಿಕೊಳ್ಳದೆ ಅಥವಾ ಅದನ್ನು ನಿರಾಕರಿಸದೆ, ಇತ್ಯರ್ಥ ಮಾಡಿಕೊಂಡಿತು.[೪೯]
ತಾರತಮ್ಯದ ದೂರುಗಳು
[ಬದಲಾಯಿಸಿ]U.S. ಈಕ್ವಲ್ ಎಂಪ್ಲಾಯ್ಮೆಂಟ್ ಆಪರ್ಟ್ಯೂನಿಟಿ ಕಮೀಷನ್ (EEOC)(ಉದ್ಯೋಗ ಗಳಿಸಲು ಎಲ್ಲರಿಗೂ ಸಮಾನ ಅವಕಾಶ ನೀಡಲಾಗುತ್ತದೆಯೆ ಎಂದು ಗಮನಿಸುವ ಸಮಿತಿ)ಜೂನ್ 26, 2007ರಂದು ಮೆರಿಲ್ ಲಿಂಚ್ ವಿರುದ್ಧ ದಾವೆಯೊಂದನ್ನು ಹೂಡಿತು. ಈ ದಾವೆಯಲ್ಲಿ ಅದು ಡಾ||. ಮಾಜಿದ್ ಬೊರುಮಾಂಡ್, ಅವನು ಇರಾನ್ ದೇಶಕ್ಕೆ ಮತ್ತು ಇಸ್ಲಾಂ ಧರ್ಮಕ್ಕೆ ಸೇರಿದವ ಎನ್ನುವ ಕಾರಣದಿಂದ, ಸಂಸ್ಥೆ ಅವನ ಹಕ್ಕುಗಳ ಬಗ್ಗೆ ಸ್ವಲ್ಪವೂ ಗೌರವ ಕೊಡದೆ ಅವನ ವಿರುದ್ಧ ಭೇದಭಾವ ತೋರಿತು ಎಂದು ಅಪಾದಿಸಲಾಯಿತು.[೫೦] EEOC ತನ್ನ ದಾವೆಯಲ್ಲಿ ಸಂಸ್ಥೆಯ ಅಧಿಕಾರಿಗಳು, ಈ ದುಷಕೃತ್ಯವನ್ನು ಉದ್ದೇಶ ಪೂರ್ವಕವಾಗಿ ಹಾಗು ದುರುದ್ದೇಶದಿಂದಲೆ ಎಸೆಗಿದ್ದಾರೆ ಎನ್ನುತ್ತದೆ. ಮೆರಿಲ್, ಇರಾನ್ ಮೂಲದ ಮತ್ತೊಬ್ಬ ನೌಕರನ ವಿಷಯದಲ್ಲಿ ಭೇದಭಾವ ಮಾಡಿದೆ ಎನ್ನಲಾದ ಇನ್ನೊಂದು ಪ್ರಕರಣದಲ್ಲಿ,ಜೂಲೈ 20,2007ರಂದು NASD ಎನ್ನುವ ನಾಯಧೀಕರಣ ಪೀಠ, ಮೆರಿಲ್ ಲಿಂಚ್ಗೆ ಫಾರಿಬೊರ್ಸ್ ಸೋಜಾಜಿ ಎನ್ನುವ ಇರಾನಿ ಮೂಲದ ನೌಕರನನ್ನು ಅವನು ಫಾರ್ಸಿಯ ಜನಾಂಗಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ವಜಾ ಮಾಡಿದ್ದರಿಂದ ಅವನಿಗೆ ಪರಿಹಾರವಾಗಿ $1.6 ದಶಲಕ್ಷ ಕೊಡುವಂತೆ ಆಜ್ಞೆಮಾಡಿತು.[೫೧][೫೨][೫೩] ಮೆರಿಲ್ ಲಿಂಚ್ನ ನಡೆವಳಿಕೆಗಳು ನ್ಯಾಷಿನಲ್ ಇರಾನಿಯನ್-ಅಮೇರಿಕನ್ ಕೌನ್ಸಿಲ್ ಮತ್ತು ಅಮೇರಿಕನ್-ಅರಬ್ ಅಂಟಿ-ಡಿಸ್ಕ್ರಿಮಿನೇಷನ್ ಕಮಿಟಿ ಎನ್ನುವ ಎರಡು ಸಮಿತಿಗಳ ಕೆಂಗಣ್ಣಿಗೆ ಕಾರಣವಾಯಿತು.[೫೪]
ಡೈವರ್ಸಿಟಿ ಇಂಕ್ (Diversity Inc.) ಎನ್ನುವ ನಿಯತಕಾಲಿಕೆ (ಮ್ಯಾಗಜೀನ್), ಜೂನ್ 2008ರ ಅದರ ಸಂಚಿಕೆಯಲ್ಲಿ ಪ್ರಕಟಿಸಿದ ಸಮೀಕ್ಷೆಯ ಪ್ರಕಾರ ಸಲಿಂಗಕಾಮಿಗಳು ಮತ್ತು ಉಭಯಲಿಂಗ ನೌಕಕರಿರಿಗೆ ಮೆರಿಲ್ ಸಂಸ್ಥೆಯು ಮೊದಲ ಹತ್ತು ಸ್ಥಾನಗಳ ಪೈಕಿ ಇರುವ ಕಂಪನಿಗಳಲ್ಲಿ ಮೆರಿಲ್ ಕೂಡ ಒಂದು ತಿಳಿಸಿತು. ಅಷ್ಟೇ ಅಲ್ಲದೆ, ಎಲ್ಲಾ ಅಂಶಗಳನ್ನು ಸಮಗ್ರವಾಗಿ ಗಮನಿಸಿದಾಗ, ಮೆರಿಲ್ US(ಯುಎಸ್)ನಲ್ಲಿ #7ರ ಸ್ಥಾನ ಪಡೆಯಿತು. ಇದಕ್ಕೂ ಮೊದಲು 2007ರಲ್ಲಿ, ಮೆರಿಲ್ ಲಿಂಚ್ ಅನ್ನು ವಿಕಲಾಂಗರಿಗಾಗಿ U.S(ಯು.ಎಸ್)ನ #2ರ ಶ್ರೇಷ್ಟ ಕಂಪನಿಯ ಸ್ಥಾನವನ್ನು ಪಡೆದಿದೆ ಎಂದು ಡೈವರ್ಸಿಟಿ ಮಾಗಜೀನ್ ಸಮೀಕ್ಷೆ ತಿಳಿಸಿತ್ತು.[೫೫] ಜೂನ್ 5, 2008ರಂತೆ, ಮೆರಿಲ್ ಲಿಂಚ್ ಬೇರೆಬೇರೆ ಹಿನ್ನಲೆಗಳಿಂದ ಬಂದ ನೌಕರರ ಸಹಾಯಕ್ಕಾಗಿ ಮತ್ತು ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡುವ ಕಾರಣಕ್ಕೆ ವೆಸ್ಟ್ ಏಷಿಯನ್, ಮಿಡಲ್ ಈಸ್ಟರ್ನ್ ಅಂಡ್ ನಾರ್ತ್ ಅಮೇರಿಕನ್ (WAMENA)ಎನ್ನುವ ವೃತ್ತಿ ನಿರತರ ಜಾಲವೊಂದನ್ನು ಸ್ಥಾಪಿಸಿದೆ. ಮೇ 2008 ರಲ್ಲಿ, ಮೆರಿಲ್ ಲಿಂಚ್ ಅನ್ನು "ಡೈವರ್ಸಿಟಿ ಎಡ್ಜ್ ಮ್ಯಾಗಜೀನ್" ಎನ್ನುವ ಪತ್ರಿಕೆ ನಡೆಸಿದ ಸಮೀಕ್ಷೆ, ಮೆರಿಲ್ ಲಿಂಚ್ ಅನ್ನು "ವೈವಿದ್ಯಮಯ ಕಾಲೇಜುಗಳ ಪದವೀಧರರ" #1 ಕಂಪನಿಯೆಂದು ಆಯ್ಕೆ ಮಾಡಿದೆ. ಇದಕ್ಕೂ ಮುಂಚೆ ಈ ಸ್ಥಾನವನ್ನು Microsoft (ಮೈಕ್ರೋಸಾಪ್ಟ್) ಪಡೆದಿತ್ತು.[೫೬]
ಮೆರಿಲ್ ಲಿಂಚ್ ವಿರುದ್ದ ಸಲಿಂಗಕಾಮಿ(ಗೇ) ನೌಕರನೊಬ್ಬ ಹೂಡಿದ್ದ ದಾವೆಯಲ್ಲಿ ಮೆರಿಲ್ ವಿರುದ್ಧವಾಗಿ ಆಗಸ್ಟ್ 13,2008 ರಂದು ನ್ಯೂಜೆರ್ಸಿ ಅಪೀಲ್ಸ್ ಕೋರ್ಟ್ ತೀರ್ಪು ನೀಡಿತು.[೫೭]
ಮಾರ್ಕೆಟ್ ಟೈಮಿಂಗ್ ಸೆಟಲ್ಮೆಂಟ್ (ಮಾರುಕಟ್ಟೆ ಕಾಲಾವಕಾಶದ ಇತ್ಯರ್ಥ)
[ಬದಲಾಯಿಸಿ]ಮೆರಿಲ್ ಲಿಂಚ್ ಅದರ ಫೋರ್ಟ್ ಲೀ,ನ್ಯೂಜರ್ಸಿ ಕಚೇರಿಯಲ್ಲಿ ನಡೆದ ಅಸಮಂಜಸ ನಡೆವಳಿಕೆಗಳ ವಿರುದ್ಧ ಹೂಡಲಾದ ಸಿವಿಲ್ ದಾವೆ ಇತ್ಯರ್ಥ ಮಾಡಿಕೊಳ್ಳಲು ಮೆರಿಲ್ 2002ರಲ್ಲಿ 10 ದಶಲಕ್ಷ ದಂಡ ತೆತ್ತಿತು. ಮೂರು ಹಣಕಾಸಿನ ತಜ್ಞರು (ನಾಲ್ಕನೆ ಸದಸ್ಯ ಸ್ವಲ್ಪ ಮಟ್ಟಿಗೆ ಪಾತ್ರವಹಿಸಿದ್ದ), ಮಿಲ್ಲೆನಿಯಂ ಪಾರ್ಟನರ್ಸ್ ಎನ್ನುವ ಗ್ರಾಹಕರಿಗಾಗಿ 40 ಮಾರ್ಪಡಸಿಬಹುದಾದ ವರ್ಷಾಶನಗಳ (ವಾರ್ಷಿಕ ಅನುದಾನ)ಸುಮಾರು 521 ಮ್ಯೂಚುಯಲ್ ಫಂಡ್, ಮತ್ತು 63 ಮ್ಯೂಚುಯಲ್ ಫಂಡ್ಗಳ ಉಪವಿಭಾಗಗಳಲ್ಲಿ 12,457 ಟ್ರೇಡ್ಗಳನ್ನು ಪ್ಲೇಸ್ ಮಾಡಿದರು. ಈ ಫಂಡ್ಗಳು ಮತ್ತು ಫಂಡ್ಗಳ ಉಪ-ವಿಭಾಗಳ ಅರ್ಧದಷ್ಟರಲ್ಲಿ ಮಿಲ್ಲೆನಿಯಂ ಲಾಭಗಳಿಸಿತು. ಈ ರೀತಿ ಲಾಭದಾಯಕ ಫಂಡ್ಗಳಿಂದ ಮಿಲ್ಲೆನಿಯಂ ಸುಮಾರು $60 ದಶಲಕ್ಷ ಗಳಿಸಿತು. ಮೆರಿಲ್ ಲಿಂಚ್ ತನ್ನ ಹಣಕಾಸಿನ ತಜ್ಞರನ್ನು ನಿಯಂತ್ರಣ ಮಾಡಲು ವಿಫಲವಾಯಿತು. ಹೀಗಾಗಿ ಇವರು ಮಾಡಿದ ನಿರ್ಣಯಗಳು ಮ್ಯೂಚುಯಲ್ ಫಂಡ್ಗಳಿಂದ ಅಲ್ಪಾವಧಿ ಲಾಭ ಸೈಫನ್ ಮಾಡಿದ ಕಾರಣ (ಬೇರೆ ಕಡೆಗೆ ವರ್ಗಾಯಿಸುವುದು) ದೀರ್ಘಾವದಿ ಬಂಡವಾಳದಾರನಿಗೆ (ಇನ್ವೆಸ್ಟರ್)ನಷ್ಟವಾಯಿತು.[೫೮]
2008ರಲ್ಲಿ ಹೆಚ್ಚುವರಿ ಲಾಭಾಂಶ(ಬೋನಸ್) ನೀಡಿಕೆ
[ಬದಲಾಯಿಸಿ]ಮೆರಿಲ್ ಲಿಂಚ್ ಲಾಭಾಂಶವನ್ನು ನೀಡುವ ಸಲುವಾಗಿ ಕೋಟ್ಯಾಂತರ ಹಣವನ್ನು ಮೀಸಲಿಟ್ಟಿತು.ಲಾಭಂಶದ ಘೋಷಣೆಯು ಸಮಯವನ್ನು ವಿಶೇಷ(ಸ್ಪೆಷಲ್ ಟೈಮಿಂಗ್) ಎಂದು ಅರ್ಥೈಸಲಾಗಿದೆ. ಹೀಗೆ ನೀಡಿದ ಲಾಭಾಂಶದ ಮೊತ್ತ $3.6 ಶತಕೋಟಿ, ಸರಕಾರ(ಫೆಡ್ಸ್)TARP ಬೇಲ್ ಔಟ್ ಕಾರ್ಯಕ್ರಮದ ಅಡಿಯಲ್ಲಿ ಈ ಕಂಪನಿಯನ್ನು ಕಾಪಾಡುವ ಸಲುವಾಗಿ ನೀಡದ್ದ ಹಣದ ಮೂರನೇ ಒಂದು ಭಾಗದಷ್ಟಿತ್ತು. ಇಷ್ಟೇ ಅಲ್ಲದೆ, ಮೆರಿಲ್ ಲಿಂಚ್ ನೌಕರರಿಗೆ ಲಾಭಂಶವನ್ನು ಘೋಷಸಿದ ಸಮಯ ಬಹಳಷ್ಟು ಅಮೇರಿಕನ್ನರಿಗೆ ಕೋಪತರಿಸಿತು, ಏಕೆಂದರೆ ಇದನ್ನು, ಈ ಸಂಸ್ಥೆಯನ್ನು ಇನ್ನೇನು ಬ್ಯಾಂಕ್ ಆಫ್ ಆಮೇರಿಕಾ ಖರೀದಿಸುತ್ತದೆ ಎನ್ನುವಾಗ ನಿರ್ಧರಿಸಲಾಯಿತು. ಮೆರಿಲ್ ಲಿಂಚ್ ಅನ್ನು BOA(ಬಿಒಎ) ಕಾಪಾಡದೆ ಹೋಗಿದ್ದರೆ, ಮೆರಿಲ್ ಮುಳುಗಿ ಹೋಗಿರುತ್ತಿತ್ತು ಎನ್ನುವುದು ಈಗ ನಿರ್ವಿವಾದದ ಸಂಗತಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು] 2008ರಲ್ಲಿ ಮೆರಿಲ್ ಕೋಟ್ಯಾಂತರ ಹಣವನ್ನು ನಷ್ಟಮಾಡಿಕೊಂಡರೂ ಕೂಡ, 3.6 ಶತಕೋಟಿಯನ್ನು ಲಾಭಾಂಶವಾಗಿ(ಬೋನಸ್ಸ್) ನೀಡಿತು.
ಮೆರಿಲ್ ನ ಲಾಭಾಂಶವನ್ನು ಅದರ ಪರಿಹಾರವನ್ನು ನಿಗದಿಮಾಡುವ ಸಮಿತಿ (ಮೆರಿಲ್ ಕಾಂಪೆನ್ಸೇಷನ್ ಕಮಿಟಿ), BOA ಷೇರುದಾರರು ಮೆರಿಲ್ ನೊಂದಿಗೆ ವಿಲೀನವಾಗುವದಕ್ಕೆ ಒಪ್ಪಿಕೊಂಡ ನಂತರ ಆದರೆ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟವಾಗುವುದಕ್ಕೂ ಮುನ್ನ ಡಿಸೆಂಬರ್ 8, 2008ರಂದು ನಡೆದ ಸಭೆಯಲ್ಲಿ ತೀರ್ಮಾನಿಸಿತು. ಇದು ಕಂಪನಿಯ ಮಾಮೂಲಿನ ನಡೆವಳಿಕೆಗಳಿಂದ ಮಾರ್ಪಟ್ಟಿತ್ತು, ಏಕೆಂದರೆ ಮೆರಿಲ್ ಇದುವರೆಗೂ ಘೋಷಿಸುತ್ತಿದ್ದ ಲಾಭಾಂಶವು ಕೆಲಸಗಾರರ ನಿರ್ವಹಣೆಯ ಮೇಲೆ ಆಧಾರವಾಗಿರುತ್ತಿತ್ತು ಹಾಗು ಕಂಪನಿಯ ನೀತಿಗಳ ಪ್ರಕಾರ ಎಲ್ಲಾ ತ್ರೈಮಾಸಿಕಗಳಲ್ಲಿ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಜನವರಿ ಅಥವಾ ಅದರ ನಂತರ ಲಾಭಾಂಶವನ್ನು ನೀಡಲಾಗುತ್ತಿತ್ತು. ಆದರೆ ಈ ಸಂದರ್ಭದಲ್ಲಿ ಮಾತ್ರ, ಲಾಭಾಂಶವನ್ನು ಡಿಸೆಂಬರ್ ನಲ್ಲಿ ನಾಲ್ಕನೇ ತ್ರೈಮಾಸಿಕದ ಕಾರ್ಯನಿರ್ವಹಣೆಯನ್ನು ನಿರ್ಧರಿಸುವ ಮುನ್ನ ನೀಡಲಾಯಿತು.
ಇದು, ಮೆರಿಲ್ ಗೆ ನಿಗದಿಯಾದ TARP ಮನಿಯ ಬಹುದೊಡ್ಡ ಭಾಗವಾಗಿತ್ತು. ಮೆರಿಲ್ ನ ಲಾಭಾಂಶವು, ಟ್ರೆಷರಿಯು(ಖಜಾನೆ ಖಾತೆ)ಮೆರಿಲ್ ಗೆ ನಿಗದಿ ಮಾಡಿದ್ದ TARP ಮನಿಯ 36.2% ಭಾಗದಷ್ಟಿತ್ತು. ಲಾಭಾಂಶವನ್ನು ಪಡೆಯಲು ಮೆರಿಲ್ ನೌಕರರು, ಸುಮಾರು $300,000 ಯಷ್ಟು ಸಂಬಳ ಪಡೆಯಬೇಕಿತ್ತು ಹಾಗು ಉಪಾಧ್ಯಕ್ಷ (ವೈಸ್ ಪ್ರೆಸಿಡೆಂಟ್) ಅಥವಾ ಅದಕ್ಕಿಂತ ಹೆಚ್ಚಿನ ಪದವಿಯನ್ನು ಹೊಂದಿರಬೇಕಿತ್ತು.[೫೯][೬೦]
ಇತರ ಸಮಸ್ಯೆಗಳು
[ಬದಲಾಯಿಸಿ]ಈ ಬ್ಯಾಂಕ್ ಗೆ 2009ರಲ್ಲಿ €2.75m ದಂಡ ವಿಧಿಸಲಾಯಿತು. ಸಂಸ್ಥೆಗೆ ಸೇರಿದ ಲಂಡನ್ನಿನಲ್ಲಿದ ವ್ಯಾಪಾರಿಗಳು ಎರಡು ಸಂದರ್ಭಗಳಲ್ಲಿ ಅವರ ಸ್ಥಾನವನ್ನು ಸರಿಯಾಗಿ ನಿರ್ಧರಿಸುವಲ್ಲಿ ವಿಫಲರಾದ ಕಾರಣ ಕಂಪನಿಗೆ $461m ನಷ್ಟವಾಯಿತು. ಮೆರಿಲ್ "ಒಂದು ಸರಿಯಾದ ಪಾರದರ್ಶಕವಾದ ಮೇಲ್ವಿಚಾರಕರಣೆಯ ವ್ಯವಸ್ಥೆ" ಸ್ಥಾಪಿಸಲು ವಿಫಲವಾದ ಕಾರಣ ಈ ನಷ್ಟಯುಂಟಾಯಿತು ಎಂದು ಹೇಳಲಾಗುತ್ತದೆ. ಇಷ್ಟೆ ಅಲ್ಲದೆ, ಮೆರಿಲ್ "ವರ್ತಕನ(ಟ್ರೇಡರ್) ಚಟುವಟಿಕೆಯನ್ನು ನಿಯಂತ್ರಿಸುವಲ್ಲಿ ಕೂಡ ವಿಫಲವಾಯಿತು, ಮತ್ತು ತಿಂಗಳ ಕೊನೆಯಲ್ಲಿ ಸ್ವತಂತ್ರವಾದ ಮೌಲ್ಯ ನಿರ್ಣಯ ಮಾಡಲು ಸರಿಯಾದ ಕ್ರಮ ಇಲ್ಲದ್ದಿರುವುದು ಕಾರಣ" ಎಂದು ಕೂಡ ಹೇಳಲಾಗುತ್ತದೆ. ಇದ್ದಲ್ಲದೆ, "ವ್ಯಾಪರಿಗಳ(ಟ್ರೇಡರ್) ನಿರ್ಣಯಗಳಿಂದ ಉಂಟಾಗುವ ಆಪಾಯಗಳನ್ನು ನರೀಕ್ಷಿಸಿ, ನಿರ್ವಹಿಸುವಲ್ಲಿ ಸಂಸ್ಥೆ ಸೋತಿದೆ ಎಂದು ಕಂಡು ಕಂಡು ಹಿಡಿಯಲಾಯಿತು." [೬೧][೬೨][೬೩]
ಮೆರಿಲ್ $11 ದಶಲಕ್ಷವನ್ನು ಶುಲ್ಕವಾಗಿ ಪಡೆದ ಬಳಿಕ , ಅಂಗ್ಲೋ ಐರಿಶ್ ಬ್ಯಾಂಕ್ ವ್ಯವಹಾರಿಕವಾಗಿ ಉತ್ತಮವಾಗಿದೆ ಎಂದು ಹೇಳಿತು. ಹೀಗೆ ಹೇಳಿದ ಸ್ವಲ್ಪ ದಿನಗಳಲ್ಲಿಯೇ ಈ ಬ್ಯಾಂಕ್ ಅನ್ನು ಸರಕಾರ ರಕ್ಷಿಸಬೇಕಾಯಿತು. ಈ ಸಂದರ್ಭದಲ್ಲಿ ಮೆರಿಲ್ ಕಟು ಟೀಕೆಗಳಿಗೆ ಗುರಿಯಾಯಿತು.[೬೪]
ಕೈಗಾರಿಕಾ ಪ್ರಶಸ್ತಿಗಳು
[ಬದಲಾಯಿಸಿ]2008ರಲ್ಲಿ ಮೆರಿಲ್ ಲಿಂಚ್ 2008ರ ALB SE ಏಷ್ಯಾ ಲಾ ಆವಾರ್ಡ್ಸ್ ಎನ್ನುವ ಪ್ರಶಸ್ತಿ ಸಮಾರಂಭದಲ್ಲಿ ಮೆರಿಲ್ ಲಿಂಚ್ ಅನ್ನು ಡೀಲ್ ಆಫ್ ದಿ ಇಯರ್-ಇಕ್ವೀಟಿ ಮಾರ್ಕಟ್ ಡೀಲ್ ಆಫ್ ದಿ ಇಯರ್ ಎನ್ನುವ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.[೬೫]
2008ರ ALB ಚೈನಾ ಲಾ ಆವಾರ್ಡ್ಸ್ [೬೫] ಎನ್ನುವ ಪ್ರಶಸ್ತಿ ಸಮಾರಂಭದಲ್ಲಿ ಮೆರಿಲ್ ಲಿಂಚ್ ಗೆ ಡೀಲ್ ಆಫ್ ದಿ ಇಯರ್-ಇಕ್ವೀಟಿ ಮಾರ್ಕಟ್ ಡೀಲ್ ಆಫ್ ದಿ ಇಯರ್, ಹಾಗು 2008ರ ALB ಹಾಂಗ್ ಕಾಂಗ್ ಲಾ ಆವಾರ್ಡ್ಸ್ ನಲ್ಲಿ ಡೀಲ್ ಆಫ್ ದಿ ಇಯರ್ -M&A ಡೀಲ್ ಆಫ್ ದಿ ಇಯರ್ ಪ್ರಶಸ್ತಿ ಸಿಕ್ಕಿತು.
ಇವನ್ನೂ ಗಮನಿಸಿ
[ಬದಲಾಯಿಸಿ]- ಗ್ಲೋಬಲ್ ಸೆಟಲ್ಮೆಂಟ್
- ಪ್ರೈಮರಿ ಡೀಲರ್ಸ್
- ಕ್ರೆಡಿಟ್ ಕ್ರೈಸಿಸ್
- ಲಿಕ್ವಿಡಿಟಿ ಕ್ರೈಸಿಸ್ (ಅಪ್ಪತ್ತಿನಲ್ಲಿ ಆಸ್ತಿಯನ್ನು ಮಾರಿ ಹಣಪಡೆಯಲಾಗದತಂಹ ಬಿಕ್ಕಟ್ಟು)
- ಸಂಪತ್ತು ನಿರ್ವಹಣೆ
- ಬ್ರೋಕರ್-ಡೀಲರ್
- ವರ್ಲ್ಡ್ ವೆಲ್ತ್ ರಿಪೋರ್ಟ್ (ವಿಶ್ವ ಸಂಪತ್ತಿನ ವರದಿ)
- ಮೆರಿಲ್ ಲಿಂಚ್, ಪಿಯರ್ಸ್, ಫೆನ್ನರ್, ಅಂಡ್ ಸ್ಮಿತ್ ಇಂಕ್ (Merrill Lynch, Pierce, Fenner & Smith, Inc.) v. ಡಾಬಿಟ್ (Dabit) , ನಡುವೆ 2006ರ ಸುಪ್ರೀಮ್ ಕೋರ್ಟ್ ನಲ್ಲಿ ಸೆಕ್ಯೂರಿಟಿ ಫ್ರಾಡ್ (ಸೆಕ್ಯೂರಿಟಿ ವಂಚನೆಯ) ಕುರಿತ ಕೇಸುಗಳು.
- ಮೆರಿಲ್ ಲಿಂಚ್ ಸಲ್ಲಿಸಿರುವ ಅರ್ಜಿ
ಆಕರಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2011-04-11. Retrieved 2010-05-31.
- ↑ "ಆರ್ಕೈವ್ ನಕಲು". Archived from the original on 2010-11-10. Retrieved 2010-05-31.
- ↑ http://www.ml.com/index.asp?id=7695_8134
- ↑ ಡಿಸೆಂಬರ್ 15, 1915 ರ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಪುಟ 18 ರಲ್ಲಿ ಪ್ರಕಟವಾಗಿದ್ದ "ಮಾಕ್ ಕ್ರೋರಿ ಸ್ಟೋರ್ಸ್ ಕಾರ್ಪೋರೇಷನ್" ಎನ್ನುವುದರ ಜಾಹೀರಾತು. ಪೂರ್ಣ ಪಾಠ: ಮೆಕ್ಕ್ರೋರಿ ಸ್ಟೋರ್ಸ್ ಕಾರ್ಪೋರೇಷನ್ ನ ಪ್ರಿಫೆರ್ಡ್ ಸ್ಟಾಕ್ಗಳ ಮಾರುಕಟ್ಟೆಯ ಮೌಲ್ಯ ವೃದ್ಧಿಯಾಗುವ ಲಕ್ಷಣ ಹೊಂದಿದೆ, ಇದರಲ್ಲಿ ಹಣ ಹೂಡುವುದು ಅಪಾಯವಿಲ್ಲದೆ, ಹೆಚ್ಚು ಅದಾಯ ತರುವ ಸಾಧ್ಯತೆಯಿದೆ. ಇದರ ಮೌಲ್ಯ ಸುಮಾರು 7%ರಷ್ಟು ಅದಾಯ ತರುವ ನಿರೀಕ್ಷೆಯಿದೆ. ತಿಳಿವಳಿಕೆ ಪತ್ರ ಬೇಕಾದಲ್ಲಿ ಈ ವಿಳಾಸಕ್ಕೆ ಬರೆಯಿರಿ: ಟಿ.ಎಂ. ಮೆರಿಲ್ ಲಿಂಚ್ & ಕೋ. 7 ವಾಲ್ ಸ್ಟ್ರೀಟ್, ನ್ಯೂ ಯಾರ್ಕ್, ಪೆನೊಬ್ಸ್ಕಾಟ್ ಬಿಲ್ದಿಂಗ್ (Bldg)., ಡೆಟ್ರಾಯಿಟ್, ಟೆಲಿಪೋನ್ ರೆಕ್ಟಾರ್ 4940.
- ↑ "$15,000,000 ಸಾಟ್ ಬೈ ಕ್ರೂಸಿಬಲ್ ಸ್ಟೀಲ್." ದಿ ನ್ಯೂ ಯಾರ್ಕ್ ಟೈಮ್ಸ್, ಡಿಸೆಂಬರ್ 19, 1940, p. 39, ಎನ್ನುವ ಲೇಖನದಲ್ಲಿ ಮಾಟೋನಾ-ಡಕೋಟಾ ಯುಟಿಲಿಟಿ ಕಂಪನಿಗೆ ಅಂಡರ್ವ್ರೈಟರ್ ಯಾಗಿರುವ ಆನೇಕ ಸಂಸ್ಥೆಗಳಲ್ಲಿ ಮೆರಿಲ್ ಕೂಡ ಒಂದು ಎಂದು ಬರೆಯುವಾಗ " Merrill Lynch, E.A. Pierce and Cassatt," ಎಂದು ಬರೆದಿದೆ, ಇಲ್ಲಿ ಲಿಂಚ್ ನಂತರ ಅರ್ಧವಿರಾಮವನ್ನು (','); ಹಾಗು '&'(ಅಂಪ್ರೆಸೆಂಡ್) ಬದಲು 'and' ಎಂದು ಬಳಸಲಾಗಿದೆ.
- ↑ "ರಿವೈಸಿಂಗ್ ಎ ಸೋನೋರಸ್ ಪೀಸ್ ಆಫ್ ಆಮೇರಿಕಾನಾ: ಮೆರಿಲ್ ಲಿಂಚ್, ಪಿಯರ್ಸ್, ಫೆನ್ನರ್ ಅಂಡ್ ಸ್ಮಿತ್." ದಿ ನ್ಯೂ ಯರ್ಕ್ ಟೈಮ್ಸ್, ಡಿಸೆಂಬರ್ 31, 1957, p. 29
- ↑ "ಮೆರಿಲ್ ಲಿಂಚ್ - ಟೋಟಲ್ ಮೆರಿಲ್ - ಟೋಟಲ್ ಮೆರಿಲ್". Archived from the original on 2008-03-07. Retrieved 2010-05-31.
- ↑ ಎಡ್ವಿನ್ ಜೆ. ಪೆರ್ಕಿನ್ಸ್,ವಾಲ್ ಸ್ಟ್ರೀಟ್ ಟು ಮೈನ್ ಸ್ಟ್ರೀಟ್: ಚಾರ್ಲ್ಸ್ ಮೆರಿಲ್ ಅಂಡ್ ಮಿಡಲ್-ಕ್ಲಾಸ್ ಇನ್ವೆಸ್ಟೆರ್ಸ್ , ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್: 1999
- ↑ ರಾನ್ ಚೆರ್ನೊವ್, ದಿ ಹೌಸ್ ಆಫ್ ಮೋರ್ಗಾನ್ , ಟಚ್ ಸ್ಟೋನ್ ಬುಕ್ಸ್, 1990.
- ↑ ಜೇಮ್ಸ್ ಬಿ. ಸ್ಟೀವರ್ಟ್, ಡೆನ್ ಆಫ್ ಥೀವ್ಸ್ , ಟಚ್ ಸ್ಟೋನ್ ಬುಕ್ಸ್, 1992. "1971 ರಲ್ಲಿ ವಾಲ್ ಸ್ಟ್ರೀಟ್ನಲ್ಲಿದ ಸಂಸ್ಥೆಗಳನ್ನು "ಜೂಇಷ್" (ಯೆಹ್ಯೂದಿಯ) ಮತ್ತು "WASP" ಸಂಸ್ಥೆ ಎಂಬ ಎರಡು ಭಾಗಗಳಿದ್ದವು. ಇದಕ್ಕೂ ಬಹಳ ಹಿಂದೆ, ಬಹುತೇಕ ದೊಡ್ಡ ಸಂಸ್ಥೆ ಮತ್ತು ಬ್ಯಾಂಕ್ಗಳು ಜ್ಯೂಗಳ ವಿರುದ್ಧ ಬಹಿರಂಗವಾಗಿ ಭೇದಭಾವ ಮಾಡುತ್ತಿದ್ದ ಕಾಲದಲ್ಲಿ ಕೂಡ, ವಾಲ್ ಸ್ಟ್ರೀಟ್ ಆರ್ಹತೆ ಮತ್ತು ಉದ್ಯಮಶೀಲತೆಗೆ ಪ್ರಾಮುಖ್ಯತೆ ನೀಡಿತು. ಗೋಲ್ಡ್ಮ್ಯಾನ್, ಸಾಚ್ಸ್, ಲೆಹ್ಮೆನ್ ಬ್ರದರ್ಸ್ ಮತ್ತು ಕುಹನ್, ಲೊಯಬ್ & ಕಂ. (ಐತಿಹಾಸಿಕವಾಗಿ ಜರ್ಮಿನಿ ಸಂಜಾತ ಜ್ಯೂಗಳಿಂದ ಮಾಡಲ್ಪಟಿತ್ತು)- ಈ ಎಲ್ಲಾ ಸಂಸ್ಥೆಗಳು WSAP ಸಂಸ್ಥೆಗಳ ಪ್ರತಿಷ್ಠತ ಸಂಸ್ಥೆಗಳ ಪಟ್ಟಿಗೆ ಸೇರಿಕೊಂಡರು. ಮಾರ್ಗನ್ ಸ್ಟಾನ್ಲಿ ಎನ್ನುವ ಜೆ.ಪಿ. ಮಾರ್ಗನ್ ರ ವ್ಯವಹಾರದ ಭಾಗ-ಫರ್ಸ್ಟ್ ಬೋಸ್ಟನ್, ಡಿಲ್ಲನ್,ರೀಡ್ ಮತ್ತು ಬ್ರೌನ್ ಬ್ರತರ್ಸ್ ಹ್ಯಾರಿಮನ್. ಆದರೆ, ಇದಕ್ಕೆ ವೈಪರೀತವಾಗಿ ಮೆರಿಲ್ ಲಿಂಚ್ ಪಿಯರ್ಸ್ ಫೆನ್ನರ್ & ಸ್ಮಿತ್ ಸಂಸ್ಥೆಯನ್ನು "ಕಾಥೋಲಿಕ್" ಸಂಸ್ಥೆಯೆಂದು ಪರಿಗಣಿಸಲಾಗುತ್ತಿತ್ತು. ಕಿಡ್ಡರ್, ಪೀಬಾಡಿ ಸಂಸ್ಥೆಗಳು WASP ಪಾಳೆಯದಲ್ಲಿ ಗಟ್ಟಿಯಾಗಿ ಉಳಿದವು."
- ↑ "ಆರ್ಕೈವ್ ನಕಲು". Archived from the original on 2007-11-09. Retrieved 2010-05-31.
- ↑ "ಮೆರಿಲ್ ಲಿಂಚ್ ರಿಪೋರ್ಟ್ಸ್". Archived from the original on 2010-01-02. Retrieved 2010-05-31.
- ↑ http://money.cnn.com/news/newsfeeds/articles/djf500/200804250840DOWJONESDJONLINE000645_FORTUNE5.htm
- ↑ Stephen Bernard and Ieva M. Augstums (2009-01-22). "Former Merrill chief Thain out at Bank of America". Associated Press. Retrieved 2009-01-22.
- ↑ Eric Dash, Louise Story and Andrew Ross Sorkin (2009-01-15). "Bank of America to Receive Additional $20 Billion". The New York Times. Retrieved 2009-01-22.
- ↑ ೧೬.೦ ೧೬.೧ Jenny Anderson (2007-11-15). "NYSE Chief Is Chosen to Lead Merrill Lynch". The New York Times. Retrieved 2008-09-14.
- ↑ ೧೭.೦ ೧೭.೧ Eric Dash (2007-12-25). "Merrill Lynch Sells Stake to Singapore Firm". The New York Times. Retrieved 2008-09-14.
- ↑ ೧೮.೦ ೧೮.೧ ೧೮.೨ Louise Story (2008-07-11). "Chief Struggles to Revive Merrill Lynch". The New York Times. Retrieved 2008-09-14.
- ↑ "Merrill Lynch Announces Substantial Sale of U.S. ABS CDOs, Exposure Reduction of $11.1 Billion". Market Watch. 2008-07-28. Retrieved 2008-09-14.
- ↑ "Merrill Lynch to cut mortgage-backed securities, raise new capital by issuing shares". International Herald Tribune. 2008-07-29. Archived from the original on 2012-12-08. Retrieved 2008-09-14.
- ↑ ೨೧.೦ ೨೧.೧ "Lawsuit threat to Merrill Lynch". British Broadcasting Corporation. 2008-08-15. Retrieved 2008-09-14.
- ↑ "Merrill Lynch freezes jobs and UK tax liability". The Banking Times. 2008-08-17. Archived from the original on 2008-09-15. Retrieved 2008-09-14.
- ↑ Frank Quaratiello (2008-08-22). "Merrill Lynch settles up". The Boston Herald. Archived from the original on 2012-02-03. Retrieved 2008-09-14.
- ↑ ೨೪.೦ ೨೪.೧ Brett Miller (2008-09-05). "Merrill Lynch Cut to 'Sell' at Goldman on Writedowns". Bloomberg.com. Retrieved 2008-09-14.
{{cite web}}
: Unknown parameter|coauthors=
ignored (|author=
suggested) (help) - ↑ ಡೇಲಿಯ ಫಾಹ್ಮಿ ಯ ಮೆರಿಲ್ ಲಿಂಚ್ (ಪ್ರೋಫೈಲ್), ಕ್ರೆಡಿಟ್ ಮಾಗಜೀನ್ (risk.netರಲ್ಲಿ ಮರುಮುದ್ರಿತವಾಗಿರುವ ಹಾಗೆ), 2005 ಮೇ 1, ಪಡೆದದ್ದು 2010 4 29
- ↑ "Derivatives Week, Merrill Lynch advertisement" (PDF). 2005 11 7. Archived from the original (pdf) on 2011-07-09. Retrieved 2010 4 29.
{{cite web}}
: Check date values in:|accessdate=
and|date=
(help) - ↑ ವೈ ಮೆರಿಲ್ ಲಿಂಚ್ ಗಾಟ್ ಬರ್ನಡ್ , ಮಾಥ್ಯಯು ಗೋಲ್ಡಸ್ಟೇನ್ , 2007 ಆಕ್ಟೋಬರ್ 25
- ↑ ಬ್ರಾಡ್ಲಿ ಕಿಯಾನ್ ಅಂಡ್ ಮಕ್ರಿಸ್ಟಿನ್ ಹಾರ್ಪರ್ ರ ಮೆರಿಲ್ ಟು ಸೆಲ್ $8.5 ಬಿಲಿಯನ್ ಆಫ್ ಸ್ಟಾಕ್, ಅನ್ಲೋಡ್ CDOs (ಅಪಡೇಟ್ 3) , bloomberg.com, ಪಡೆದದ್ದು 2010 4 29
- ↑ ಮೆರಿಲ್ಸ್ ಪಿಕಡ್ ಪಾಕೆಟ್ಸ್, ರಾಡಿ ಬಾಯ್ಡ್, ಆಗಸ್ಟ್ 6, 2008, cnn.com, ಪಡೆದದ್ದು 2010 4 26
- ↑ Supreme Court of New York County (2009 Apr). "MBIA Insurance Co. v Merrill Lynch" (PDF). mbia.com. Archived from the original (pdf) on 2010-12-18. Retrieved 2010 4 23.
{{cite web}}
: Check date values in:|accessdate=
and|date=
(help) - ↑ MBIA ಸ್ಯೂಸ್ ಮೆರಿಲ್ ಲಿಂಚ್, ವಾಲ್ ಸ್ಟ್ರೀಟ್ ಜರ್ನಲ್, ಸೆರಿನಾ Ng, 2009 ಮೇ 1, ಪಡೆದದ್ದು 2010 4 23
- ↑ ಅಪಡೇಟ್ 1-ಜಡ್ಜ್ ಡಿಸ್ಮಿಸ್ಸಸ್ ಮೋಸ್ಟ್ ಆಫ್ MBIA's ಸೂಟ್ vs ಮೆರಿಲ್ ಏಪ್ರಿಲ್ 9, 2010, ರಿಯಾಟರ್ಸ್, ಎಡಿತ್ ಹಾನಾನ್, ed. ಗೆರಾಲ್ಡ್ ಇ. ಮಾಕ್ ಕಾರ್ಮಿಕ್
- ↑ ಜೆಸ್ಸಿ ಎಸಿಂಗರ್ ಮತ್ತು ಜೇಕ್ ಬೆರ್ನೆಸ್ಟೀನ್ ರ ಎ ಲಾ ಸೂಟ್ ಸಜಸ್ಟ್ಸ್ ಮೆರಿಲ್ ಲಿಂಚ್ಸ್ ರೋಲ್ , ಪ್ರೊ ಪಬ್ಲಿಕಾ - ಏಪ್ರಿಲ್ 9, 2010 , ಪಡೆದದ್ದು 2010 4 23
- ↑ ಲೆಟರ್ ಟು ಜಡ್ಜ್ ಬರ್ನಾರ್ಡ್ ಫ್ರೆಡ್, NY ಸುಪ್ರೀಮ್ ಕೋರ್ಟ್ re: ರಾಬೊಬ್ಯಾಂಕ್ ಅಂಡ್ ಮೆರಿಲ್ ಲಿಂಚ್ , ಜೊನಾಥನ್ ಪಿಕಹಾರ್ಟ್, ಕ್ವಿನ್ ಎಮಾನ್ಯುಯಲ್ ಉರಕುಹಾರ್ಟ್ ಅಂಡ್ ಸುಲಿವಾನ್ , 2010 4 16, via ಪ್ರೊ ಪ್ಲಬಿಕಾ, ಪಡೆದದ್ದು 2010 4 23
- ↑ ವಾಲ್ ಸ್ಟ್ರೀಟ್ ವಿಜಾರ್ಡ್ರಿ ಅಮ್ಪ್ಲಿಫೈಡ್ ಕ್ರೆಡಿಟ್ ಕ್ರೈಸಿಸ್ , ವಾಲ್ ಸ್ಟ್ರೀಟ್ ಜರ್ನಲ್ , ಕಾರಿಕ್ ಮೊಲೆನಕಾಂಪ್ ಅಂಡ್ Serena Ng, 2007 12 27, ಪಡೆದದ್ದು 2010 4 23 (ಈ ಲೇಖನದಲ್ಲಿ ನಾರ್ಮ CDO ದ ವಿವರಗಳಿವೆ)
- ↑ ಮೆರಿಲ್ ಯುಸ್ಡ್ ಸೇಮ್ ಅಲೆಜ್ಡ್ ಫ್ರಾಡ್ ಆಸ್ ಗೋಲ್ಡಮನ್, ಬ್ಯಾಂಕ್ ಸೇಸ್ (ಅಪಡೇಟ್ 1), ಬೈ ವಿಲ್ಲಿಯಂ ಮಕ್ ಕ್ವಿಲ್ಲೀನ್, ವಿತ್ ಪಾಟ್ರಿಸಿಯಾ ಹರ್ಟಾಡೊ, ed: ಪಾಟ್ರಿಕ್ ಆಸ್ಟರ್ , ಜಾನ್ ಪಿಕೆರಿಂಗ್. ಏಪ್ರಿಲ್ 16, 2010, ಬ್ಲೂಮ್ ಬರ್ಗ್ ಬಿಸಿನೆಸ್ಸ್ ವೀಕ್, ಪಡೆದದ್ದು 2010 4 23
- ↑
Morgenson, Gretchen (2008-11-08). "The Reckoning: How the Thundering Herd Faltered and Fell". New York times. Retrieved 2008-11-13.
Some banks were so concerned that they considered stopping trading with Merrill if Lehman went under, according to participants in the Federal Reserve's weekend meetings on Sept. 13 and 14 [2008].
{{cite news}}
: Cite has empty unknown parameter:|coauthors=
(help) - ↑
Paulden, Pierre (2008-08-26). "Merrill, Wachovia Hit With Record Refinancing Bill (Update1)". Bloomberg News. Retrieved 2008-11-12.
In response to a slump in demand for their bonds, financial firms, which have incurred $504 billion of writedowns and credit losses since the start of 2007, are selling assets such as mortgage securities and collateralized debt obligations at fire- sale prices to pay down looming maturities.
{{cite news}}
: Cite has empty unknown parameter:|coauthors=
(help) - ↑ Andrew Ross Sorkin (2008-09-14). "Bank of America in Talks to Buy Merrill Lynch". The New York Times.
- ↑ Matthew Karnitschnig (2008-09-14). "Bank of America Reaches Deal for Merrill". The Wall Street Journal.
{{cite news}}
: Unknown parameter|coauthors=
ignored (|author=
suggested) (help) - ↑ "ಆರ್ಕೈವ್ ನಕಲು". Archived from the original on 2008-09-16. Retrieved 2010-05-31.
- ↑ "ಆರ್ಕೈವ್ ನಕಲು". Archived from the original on 2012-09-20. Retrieved 2012-09-20.
- ↑ LOUISE STORY and JO BECKER (2009-06-11). "Bank Chief Tells of U.S. Pressure to Buy Merrill Lynch". New York Times. Retrieved 2009-06-13.
- ↑ Scott Lanman and Craig Torres (2009-06-10). "Republican Staff Says Fed Overstepped on Merrill Deal (Update1)". Bloomberg.com. Retrieved 2009-06-13.
- ↑ BARBARA BARRETT (2009-06-10). "BofA documents, e-mails show pressure to buy Merrill Lynch". Miami Herald. Retrieved 2009-06-13.
- ↑ AIG ಶಿಪ್ಸ್ ಬಿಲಿಯನ್ಸ್ ಇನ್ ಬೈಲ್ ಔಟ್ ಆಬ್ರಾಡ್ , ದಿ ಪೊಲಿಟಿಕೊ, ಮಾರ್ಚಿ 15, 2009
- ↑ A.I.G. ಲಿಸ್ಟ್ಸ್ ಫರ್ಮ್ಸ್ ಇಟ್ ಪೇಡ್ ವಿತ್ ಟಾಕ್ಸ್ ಪೇಯರ್ ಮನಿ, ದಿ ನ್ಯೂಯಾರ್ಕ್ ಟೈಮ್ಸ್, ಮಾರ್ಚಿ 15, 2009
- ↑ http://www.reuters.com/article/fundsFundsNews/idUSN0519185620070905
- ↑ http://www.forbes.com/2004/09/20/cx_da_0920topnews.html
- ↑ http://online.wsj.com/public/resources/documents/eeoc062607mer1.pdf EEOC vs. Merrill Lynch $ Co. - Complaint
- ↑ "ಡಿಸ್ಕ್ರಿಮಿನೇಷನ್ ರೂಲಿಂಗ್ ಅನಥರ್ ಬ್ಲಾಕ್ ಐ ಫಾರ್ ಮೆರಿಲ್". Archived from the original on 2011-07-10. Retrieved 2010-05-31.
- ↑ ಫೈರ್ಡ್ ಇರಾನಿಯನ್ ಬ್ರೋಕರ್ ವಿನ್ಸ್ $1.6M ಫ್ರಂ ಮೆರಿಲ್
- ↑ "Amended Award" (PDF). WSJ.com. 2007-07-20. Retrieved 2008-09-15.
- ↑ "EEOC: Merrill Lynch Hired Iranian for His Brains, Fired Him for His Nationality". NIA Council. 2007-07-04. Retrieved 2008-09-15.
- ↑ http://magazine.diversityinc.com/link/div/2007/NOV/75
- ↑ "The Diversity Edge Announces its 2008 Best Companies for Diverse Graduates". The Diversity Edge. 2008-05-29. Archived from the original on 2010-06-28. Retrieved 2008-09-15.
- ↑ "Single Anti-Gay Remark Sufficient for Hostile Workplace Claim, N.J. Court Says". Law.com. 2008-08-15. Retrieved 2008-09-15.
- ↑ "ಆರ್ಕೈವ್ ನಕಲು". Archived from the original on 2011-06-14. Retrieved 2010-05-31.
- ↑ Story, Louise (2009-02-12). "Nearly 700 at Merrill in Million-Dollar Club". The New York Times. Retrieved 2010-03-27.
{{cite news}}
: Missing|author1=
(help) - ↑ http://www.huffingtonpost.com/2009/03/30/merrill-lynch-bonuses-22_n_180780.html
- ↑ http://www.independent.ie/business/irish/irish-unit-of-merrill-lynch-fined-8364275m-by-regulator-1923508.html
- ↑ http://www.independent.ie/business/irish/exregulator-redfaced-as-bank-hit-by-8364275m-fine-1923992.html
- ↑ "ಆರ್ಕೈವ್ ನಕಲು" (PDF). Archived from the original (PDF) on 2011-07-21. Retrieved 2010-05-31.
- ↑ http://www.independent.ie/national-news/failed-bank-got-all-clear-in-report-that-cost-state-836474m-1934598.html
- ↑ ೬೫.೦ ೬೫.೧ http://www.legalbusinessonline.com.au
ಹೆಚ್ಚಿನ ಮಾಹಿತಿಗಾಗಿ
[ಬದಲಾಯಿಸಿ]- Stiles, Paul (1998). Riding the Bull: My Year in the Madness at Merrill Lynch. New York: Times Business. ISBN 0812927893.
- Perkins, Edwin (1999). Wall Street to Main Street: Charles Merrill and Middle-Class Investors. New York: Cambridge University Press. ISBN 0521630290.
- Schooley, Keith (2002). Merrill Lynch: The Cost Could Be Fatal: My War Against Wall Street's Giant. Enid: Lakepointe Publishing. ISBN 0971610363.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ವೆಬ್ಸೈಟ್
- ಮೆರಿಲ್ ನ ಸಂಪೂರ್ಣ ವೆಬ್ಸೈಟ್
- CNN ಲೇಖನ - ಮೆರಿಲ್ ಲಿಂಚ್ ಸೆಟ್ಲಿಂಗ್ ಕಾನ್ಪಿಕ್ಟ್ ಆಫ್ ಇಂಟರೆಸ್ಟ್ ಚಾರ್ಜ್ಸ್
- Yahoo! Finance - Merrill Lynch & Co., Inc. ಕಂಪನಿ ಪ್ರೋಫೈಲ್
- ಮೆರಲ್ ಲಿಂಚ್ ಗ್ಲೋಬಲ್ ಕರೀಯರ್ಸ್ ಸೈಟ್
- ಮೆರಿಲ್ ಲಿಂಚ್, ಥಾಮಸ್ ಜೆ. ಸಾನ್ಸೋನ್ ರನ್ನು ಮುಖ್ಯ ಆಡಳಿತ ಅಧಿಕಾರಿಯೆಂದು ಸೂಚಿಸಿದೆ. Archived 2008-06-19 ವೇಬ್ಯಾಕ್ ಮೆಷಿನ್ ನಲ್ಲಿ.
ಟೆಂಪ್ಲೇಟು:Major investment banks ಟೆಂಪ್ಲೇಟು:2008 economic crisis
- Pages using the JsonConfig extension
- CS1 errors: unsupported parameter
- CS1 errors: dates
- CS1 errors: empty unknown parameters
- CS1 errors: missing name
- Wikipedia neutral point of view disputes from June 2009
- Articles with invalid date parameter in template
- All Wikipedia neutral point of view disputes
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hatnote templates targeting a nonexistent page
- Articles with unsourced statements from December 2009
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮೆರಿಲ್ ಲಿಂಚ್
- ಬ್ಯಾಂಕ್ ಆಫ್ ಅಮೇರಿಕಾ ಲೆಗಸಿ ಬ್ಯಾಂಕುಗಳು
- 1914ರಲ್ಲಿ ಸ್ಥಾಪನೆಯಾದ ಕಂಪನಿಗಳು
- ನ್ಯೂಯಾರ್ಕ್ ನಗರದಲ್ಲಿರುವ ಬ್ಯಾಂಕುಗಳು
- ಯುನೈಟೆಡ್ ಸ್ಟೇಟ್ಸ್ ನ ಇನ್ವೆಸ್ಟಮೆಂಟ್ ಮ್ಯಾನೇಜಮೇಂಟ್ (ಬಂಡವಾಳ ಹೂಡಿಕೆಯನ್ನು ನಿರ್ವಹಿಸುವ) ಕಂಪನಿಗಳು
- ಆನಲೈನ್ ಬ್ರೋಕರೇಜ್
- ಪ್ರೈಮರಿ ಡೀಲರ್ಸ್
- ಅರ್ಥಶಾಸ್ತ್ರ