ವಿಷಯಕ್ಕೆ ಹೋಗು

ಮೂಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೂಡೆ ತುಳುನಾಡಿನ ಜನರು ಹಬ್ಬದ ಸಮಯದಲ್ಲಿ ವಿಶೇಷವಾಗಿ ತಯಾರಿಸುವ ಆಹಾರ ಇದಾಗಿದೆ. ಮೂಡೆ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾಗಿದೆ. ಮೂಡೆಗೂ ಅಷ್ಟಮಿಗೂ ಭಾರೀ ಸಂಬಂಧವಿದೆ. ನೈಸರ್ಗಿಕ ಪದಾರ್ಥಗಳ ಸಹಾಯದಿಂದ ತಯಾರಿಸಿದ ಮೂಡೆ ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ. ಆಧುನಿಕ ಭರಟೆಯಲ್ಲಿ ಇಂತಹ ಆಹಾರಕ್ರಮಗಳು ಮರೆಯಾದರೂ ತುಳುನಾಡಿನ ಪ್ರತಿ ಮನೆ ಮನೆಯಲ್ಲೂ ಅಳಿಯದೆ ಉಳಿದುಕೊಂಡಿದೆ.[]

ಹಿನ್ನಲೆ

[ಬದಲಾಯಿಸಿ]

ಕೃಷ್ಣಜನ್ಮಾಷ್ಟಮಿಯನ್ನು ಕರಾವಳಿಯಲ್ಲಿ ಅತ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅದರಲ್ಲೂ ಅಷ್ಟಮಿಯನ್ನು ತುಳುನಾಡಿನಲ್ಲಿ ಜನ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವುದು ಹಬ್ಬದ ವಿಶೇಷತೆಯು ಆಗಿದೆ.[] ಅಷ್ಟಮಿಯನ್ನು ಹಳ್ಳಿ ಹಳ್ಳಿಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಳೆಯು ಕಡಿಮೆಯಾಗುವ ಹಂತದಲ್ಲಿ ಈ ಹಬ್ಬವು ಬರುತ್ತದೆ. ತುಳುನಾಡಿನ ಜನರ ಪ್ರಕಾರ ಅಷ್ಟಮಿಯ ದಿನಗಳು ತೀರ ಮುಗ್ಗಟ್ಟಿನ ದಿನಗಳು. ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಅಕ್ಕಿ ಮತ್ತಿತರ ಸೊತ್ತುಗಳು ಮುಗಿದಿರುತ್ತವೆ. ಮಳೆಗಾಲ ಜೋರಾಗಿರುತ್ತದೆ. ಅಷ್ಟಮ್ಯ ದಿನಗಳಲ್ಲಿ ತಿಂಡಿ ಮಾಡುವ ಸಲುವಾಗಿ ಓಲೆ ಉರಿಸಲು ಕಟ್ಟಿಗೆ ಇಲ್ಲದ ಪರಿಸ್ಥಿತಿ ಎದುರಾಗುವುದುಂಟು. ಈ ಕಾರಣಕ್ಕಾಗಿ ಅಷ್ಟಮಿಯಂದು ಮೂಡೆ ಎಂಬ ತಿಂಡಿಯನ್ನು ತಯಾರಿಸುತ್ತಾರೆ. ಇದು ಅಷ್ಟಮಿ ವಿಶೇಷವಾದ ತಿಂಡಿ. ಹಿಂದೆ ಅಷ್ಟಮಿಯ ಹಬ್ಬ ಆಚರಿಸಲು ಹಿರಿಮಗನನ್ನು ಊರಿನ ಗುತ್ತಿನವರ ಶ್ರೀಮಂತರ ಮನೆಯಲ್ಲಿ ಅಡವು ಇಟ್ಟಾದರೂ ಅಕ್ಕಿ ತರುತ್ತಿದ್ದರು. ಹೀಗೆ ಅಡವಿಟ್ಟ ಮಗನನ್ನು ಮುಂದಿನ ಶಿವರಾತ್ರಿಯ ದಿನ ಬಿಡಿಸಿಕೊಳ್ಳಲಾಗುತ್ತಿತ್ತಂತೆ. ಸಾಮಾನ್ಯವಾಗಿ ಅಷ್ಟಮಿಯನ್ನು ಮೂರು ದಿವಸಗಳ ಹಬ್ಬವಾಗಿ ಆಚರಿಸುತ್ತಾರೆ. ಅಷ್ಟಮಿಯ ಮುಂಚಿನ ದಿವಸ ರಾತ್ರಿ ಉಪವಾಸ ಆರಂಭಿಸುತ್ತಾರೆ. ಆಚರಣೆಯು ಭಿನ್ನ ಭಿನ್ನಾವಾಗಿರುತ್ತದೆ. ತಡರಾತ್ರಿ ಹೊಟ್ಟೆ ತುಂಬ ತಿಂಡಿ ತಿಂದು ಉಪವಾಸದ ವ್ರತಾಚರಣೆಯನ್ನು ಆರಂಭಿಸುತ್ತಾರೆ. 'ಅಷ್ಟಮಿ ಪಾಸ'ಅಂದರೆ ಅಷ್ಟಮಿ ಉಪವಾಸ ಹಿಡಿಯುವವರಿಗೆ ಅಷ್ಟಮಿ ದಿವಸದ ಚಂದ್ರೋದಯದವರೆಗೆ ಕಠಿಣವಾದ ವ್ರತವಿರುತ್ತದೆ ಮಧ್ಯಾಹ್ನ ಸಿಯಾಳ ಕುಡಿಯುವ ಕ್ರಮವಿದೆ. ಈ ನಡುವೆ ಅಷ್ಟಮಿಯ ರಾತ್ರಿ ಊಟಕ್ಕೆ ಬಗೆಬಗೆ ತಿಂಡಿ ತಿನಿಸುಗಳು ತಯಾರಾಗುತ್ತದೆ. ಮೂಡಿ (ಕಡುಬು) ಇದರಲ್ಲಿ ಪ್ರಮುಖವಾದದ್ದು. ಹಿಂದಿನ ಕಾಲದಲ್ಲಿ ಹಳ್ಳಿಯ ಮನೆಗಳಲ್ಲಿ ಮೂಡೆ ಯನ್ನು ಹೆಣೆಯುತ್ತಿದ್ದರು. ಅಷ್ಟಮಿಗಾಗಿ ಮೂಡೆ ಕಟ್ಟಿ ಮಾರಾಟ ಮಾಡುವುದು ಕೆಲವರ ಕಾಯಕವಾಗಿದೆ. ನೈಸರ್ಗಿಕವಾಗಿ ಸಿಗುವ ಮುಂಡೋವು ಎನ್ನುವ ಎಲೆ ಒಂದನ್ನು ಬಳಸಿಕೊಂಡು ಈ ಮೂಡೆಯನ್ನು ತಯಾರಿಸುತ್ತಾರೆ.

ಮೂಡೆ ಪದದ ಅರ್ಥ

[ಬದಲಾಯಿಸಿ]

'ಮೂಡೆ ಎಂಬುದು ಕನ್ನಡದಲ್ಲಿ ಕೊಟ್ಟೆ, ಕಡುಬು ಎಂಬ ಒಂದು ತಿನಿಸು. ಹಳೆ ಕನ್ನಡದಲ್ಲಿ ಕಡುಬು ಎನ್ನುತ್ತಾರೆ. ಮುದ್ದಣನ ಕಾವ್ಯದಲ್ಲಿ ಇದರ ಉಲ್ಲೇಖ ಬರುತ್ತದೆ. ಇದನ್ನು ಮುಂಡೇವು ಎಂಬ ಪೊದೆ ಸಸ್ಯಎಲೆಯಿಂದ ತಯಾರಿಸಲಾಗಿತ್ತದೆ. ಇದಕ್ಕೆ ಹಿಂದಿನ ದಿನ ನೆನೆಸಿಟ್ಟ ಉದ್ದು, ಅಕ್ಕಿಯಿಂದ ರುಬ್ಬಿದ ಹಿಟ್ಟಿನ್ನು ಹಾಕಿ ಹಬೆಯಲ್ಲಿ ಬೇಯಿಸಿ ಮೂಡೆಯನ್ನು ಮಾಡುತ್ತಾರೆ.

ಮುಂಡೇವು ಪೊದೆಯ ಎಲೆ

[ಬದಲಾಯಿಸಿ]

ಮುಂಡೇವು ಪೊದೆ ಅಥಾವ 'ಕಾಮನ್ ಸ್ಕ್ರೂ ಪೈನ್' ಅಥವಾ ಸಸ್ಯಶಾಸ್ತ್ರೀಯವಾಗಿ ಪಾಂಡನಸ್ ಯುಟಿಲಿಸ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯ ಪೊದೆಸಸ್ಯ ಅಥವಾ ಸ್ಪೈನಿ ಬುಷ್ ಸಸ್ಯವಾಗಿದೆ. ಎಲೆಯ ಅಂಚುಗಳು ಮುಳ್ಳು, ರಿಬ್ಬನ್ ತರಹದ ಎಲೆಗಳ ಸಾಲುಗಳಾಗಿವೆ. ಕರಾವಳಿ ಕರ್ನಾಟಕದಲ್ಲಿ ತೊರೆಗಳು, ನದಿ ದಡಗಳು ಮತ್ತು ಕಡಲತೀರಗಳ ಉದ್ದಕ್ಕೂ ನೈಸರ್ಗಿಕವಾಗಿ ಬೆಳೆಯುತ್ತದೆ.

ಮುಂಡೇವಿನ ಎಲೆ

ಮೂಡೆ ಮಾಡುವ ಕ್ರಮ

[ಬದಲಾಯಿಸಿ]

ಮುಂಡೇವು ಎಂಬ ಪೊದೆಯು ತೊರೆ, ನದಿ, ಬೇಲಿಗಳಲ್ಲಿ ಬೆಳೆಯುತ್ತದೆ. ಇದರ ಎಲೆಯನ್ನು ಕೊಯಿದ ನಂತರ ಮುಳ್ಳುಗಳನ್ನು ತೆಗೆದುಹಾಕಬೇಕು. ಎಲೆಗಳನ್ನು ನೀರಿನಲ್ಲಿ ನೆನೆಸಿ , ಸ್ವಲ್ಪ ಸಮಯದವರೆಗೆ ಅವುಗಳನ್ನು ಬೆಂಕಿಯಲ್ಲಿ ಕಾಯಿಸಬೇಕು. ಆ ಬಳಿಕ ಅದನ್ನು ರಿಬ್ಬನಿನ ರೀತಿಯಲ್ಲಿ ಒಂದರ ಹಿಂದೆ ಮತ್ತೊಂದರಂತೆ ಸುತ್ತಬೇಕು. ಅದನ್ನು ಲೋಟದ ಆಕಾರದ ಹಾಗೆ ಮಾಡುವುದಕ್ಕೆ ತೆಂಗಿನ ಗರಿಯ ಕಡ್ಡಿಗಳನ್ನು ಅಥಾವ ಕರಂಡೆ ಹಣ್ಣಿನ ಮುಳ್ಳುಗಿಂದ ಜೋಡಿಸಿ ಮೂಡೆಗೆ ಲಕೋಟೆಯ ಹಾಗೆ ಮಾಡಬೇಕು. ಇದಕ್ಕೆ ರುಬ್ಬಿದ ಹಿಟ್ಟಿನ್ನು ಹಾಕಿ ಹಬೆಯಲ್ಲಿ ಬೇಯಿಸಿ ಮೂಡೆಯನ್ನು ಮಾಡುತ್ತಾರೆ.

ಮುಂಡೇವಿನ ಎಲೆಯಿಂದ ಸುತ್ತಿದ ಲೋಟದ ಆಕ್ರುತಿಯಲ್ಲಿ ಮಾಡಿದ ಮೂಡೆ

ಹಿಟ್ಟು ಮಾಡಲು ಬೇಕಾಗುವ ಸಾಮಗ್ರಿಗಳು

[ಬದಲಾಯಿಸಿ]

ಮೂಡೆ ತಿನ್ನಲು ಉಪಯೋಗಿಸುವ ಇತರೆ ಉತ್ಪನ್ನಗಳು

[ಬದಲಾಯಿಸಿ]

ಮೂಡೆಯನ್ನು ಕೋಳಿ, ಅಥವಾ ಮಾಂಸದ ಸಾರಿನ ಜೊತೆ ತಿನ್ನಬಹುದು. ತೆಂಗಿನಕಾಯಿ ಚಟ್ನಿ, ಬೆಲ್ಲದ ಜೊತೆ ತೆಂಗಿನ ಹಾಲು, ಬೆಣ್ಣೆ, ತೊಗರಿಬೇಳೆ ತೋವೆ, ತರಕಾರಿ ಸಾಂಬಾರ್ ಜೊತೆ ಕೂಡಾ ತಿನ್ನುವುದು ಒಳ್ಳೆಯದು. ಹೀಗೆ ಮೂಡೆ ಕೋಳಿ ಗಸಿಯ ಜೊತೆಗೂ ಸೈ, ತೊವೆ ಸಾಂಬಾರಿಗೂ ಸೈ. ಅಲ್ಲದೆ ಈ ಮೂಡೆಯನ್ನು ತೆಂಗಿನ ಹಾಲು, ಬೆಲ್ಲ ಮತ್ತು ಏಲಕ್ಕಿಯೊಂದಿಗೆ ತಿನ್ನುವ ಆನಂದವೇ ಬೇರೆ.[]

ಮೂಡೆ ಮಾಡುವ ವಿಶೇಷ ದಿನಗಳು

[ಬದಲಾಯಿಸಿ]

ದೀಪಾವಳಿ, ಮಾರಿ ಜಾತ್ರೆ, ಸ್ಅಷ್ಟಮಿ, ಚೌತಿ, ಬಿಸು ( ಯುಗಾದಿ) ಹಬ್ಬದ ದಿನ ಹೆಚ್ಚಾಗಿ ತುಳುನಾಡಿನಲ್ಲಿ ಮಾಡುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.udayavani.com/district-news/udupi-news/sree-krishna-janmashtami-celebrations-in-udup. {{cite web}}: Missing or empty |title= (help)
  2. Publishing, Bloomsbury (13 September 2011). Religious Celebrations: An Encyclopedia of Holidays, Festivals, Solemn Observances, and Spiritual Commemorations [2 volumes] (in ಇಂಗ್ಲಿಷ್). Bloomsbury Publishing USA. ISBN 978-1-59884-206-7.
  3. News, Pingara (27 August 2024). "ಮಂಗಳೂರಿನ [[ರಥ]] ಬೀದಿಯ ಮೂಡೆ ಕೊಟ್ಟೆ ಮತ್ತು ನಿಮ್ಮ [[ಹೊಟ್ಟೆ]] -Article By Perooru Jaru |". www.pingara.com (in ಇಂಗ್ಲಿಷ್). {{cite web}}: |last1= has generic name (help); URL–wikilink conflict (help)


"https://kn.wikipedia.org/w/index.php?title=ಮೂಡೆ&oldid=1279583" ಇಂದ ಪಡೆಯಲ್ಪಟ್ಟಿದೆ