ಮನೇರ್ ಶರೀಫ್
ಮನೇರ್ ಅಥವಾ ಮನೇರ್ ಶರೀಫ್ ಪಟ್ನಾ ಮಹಾನಗರ ಪ್ರದೇಶದಲ್ಲಿರುವ ಒಂದು ಉಪನಗರವಾಗಿದೆ. ಈ ಪಟ್ಟಣವು ಸೂಫಿ ಸಂತರಾದ ಮಖ್ದೂಮ್ ಯಾಹ್ಯಾ ಮಾನೇರಿ ಮತ್ತು ಮಖ್ದೂಮ್ ಷಾ ದೌಲತ್‍ರ ಸಮಾಧಿಗಳನ್ನು ಹೊಂದಿದೆ. ಇವನ್ನು ಬಡಿ ದರ್ಗಾ (ದೊಡ್ಡ ಪವಿತ್ರತಾಣ) ಮತ್ತು ಛೋಟಿ ದರ್ಗಾ (ಸಣ್ಣ ಪವಿತ್ರತಾಣ) ಎಂದು ಕರೆಯಲಾಗುತ್ತದೆ. ಮನೇರ್ ಒಂದು ಪ್ರಮುಖ ಪ್ರವಾಸಿ ಪ್ರದೇಶ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿದೆ. ಈ ನಗರದ ಹೆಸರು ಪ್ರವಾಸೋದ್ಯಮದ ಕೇಂದ್ರವಾಗಿ ಇದರ ಸ್ಥಾನಮಾನದಿಂದ ಬಂದಿದೆ ಎಂದು ಹೇಳಲಾಗಿದೆ.
ಮಖ್ದೂಮ್ ಷಾ ದೌಲತ್ 1608 ರಲ್ಲಿ ಮನೇರ್ ಶರೀಫ್‌ನಲ್ಲಿ ನಿಧನನಾದನು ಮತ್ತು ಬಿಹಾರದ ಪ್ರಾಂತಾಧಿಪತಿಯಾದ ಇಬ್ರಾಹಿಂ ಖಾನ್ ಕಾಕರ್ ಅವನಿಗಾಗಿ ಒಂದು ಭವ್ಯ ಸಮಾಧಿಯನ್ನು ನಿರ್ಮಿಸಿದನು. ಇದು 1616 ರಲ್ಲಿ ಪೂರ್ಣಗೊಂಡಿತು.[೧]
ಗುಮ್ಮಟಾಕಾರದ ಸಮಾಧಿಯ ಗೋಡೆಗಳು ಸಂಕೀರ್ಣವಾದ ವಿನ್ಯಾಸಗಳಿಂದ ಅಲಂಕೃತಗೊಂಡಿವೆ ಮತ್ತು ಇದರ ಚಾವಣಿಯು ಕುರಾನ್‍ನ ಪಠ್ಯಭಾಗಗಳನ್ನು ಹೊಂದಿದೆ. ಮನೇರ್ ಶರೀಫ್ ಇಬ್ರಾಹಿಂ ಖಾನ್‍ನಿಂದ (ಬಿಹಾರದ ಪ್ರಾಂತಾಧಿಪತಿ) 1619 ರಲ್ಲಿ ನಿರ್ಮಿಸಲ್ಪಟ್ಟ ಮಸೀದಿಯನ್ನು ಸಹ ಹೊಂದಿದೆ.[೨] ಮನೇರ್ ಶರೀಫ್ ಪ್ರಾದೇಶಿಕ ಕಲಿಕೆಯ ಕೇಂದ್ರವಾಗಿತ್ತು ಮತ್ತು ಇಲ್ಲಿಯೇ ಸಂಸ್ಕೃತ ವ್ಯಾಕರಣಶಾಸ್ತ್ರಜ್ಞ ಪಾಣಿನಿ ಅಧ್ಯಯನ ಮಾಡಿದನು.
ಉಲ್ಲೇಖಗಳು
[ಬದಲಾಯಿಸಿ]- ↑ "Archived copy". Archived from the original on 10 December 2008. Retrieved 2008-11-29.
{{cite web}}
: CS1 maint: archived copy as title (link) - ↑ "Archived copy". Archived from the original on 30 October 2008. Retrieved 2008-09-26.
{{cite web}}
: CS1 maint: archived copy as title (link)