ಭಾರತದ ರಾಷ್ಟ್ರೀಯ ಗ್ರಂಥಾಲಯ
ಬೆಳ್ವೆದೆರೆ ಎಸ್ಟೇಟ್, ಕಲ್ಕತ್ತಾ, ಪಶ್ಚಿಮ ಬಂಗಾಳ | |
ಇತರ ಮಾಹಿತಿ | |
---|---|
ನಿರ್ದೇಶಕ | ಅರುಣ್ಕುಮಾರ್ ಚಕ್ರವರ್ತಿ[೧] |
ಜಾಲತಾಣ | nationallibrary.gov.in |
ಭಾರತದ ರಾಷ್ಟ್ರೀಯ ಗ್ರಂಥಾಲಯವು ಕೊಲ್ಕತ್ತಾದ ಆಲಿಪೋರ್ ನ ಬೆಲ್ವೆಡೆರೆ ಎಸ್ಟೇಟ್ ನಲ್ಲಿದೆ. ಇದು ಭಾರತದ ಅತೀ ದೊಡ್ಡ ಗ್ರಂಥಾಲಯವಾಗಿದ್ದು, ದೊಡ್ಡ ಗ್ರಂಥಾಲಯಗಳ ಪಟ್ಟಿಯಲ್ಲಿ ೧೪ ನೇ ಗಂಥಾಲಯ ಮತ್ತು ಭಾರತದ ಸಾರ್ವಜನಿಕ ದಾಖಲೆಯ ಗ್ರಂಥಾಲಯವಾಗಿದೆ. ಇದು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿದೆ. ಗ್ರಂಥಾಲಯವನ್ನು ಭಾರತದಲ್ಲಿ ಉತ್ಪಾದಿಸಿದ ಮುದ್ರಣ ವಸ್ತುಗಳನ್ನು ಸಂಗ್ರಹಿಸಲು, ಪ್ರಸಾರ ಮಾಡಲು ಮತ್ತು ಸಂರಕ್ಷಿಸಲು ರೂಪಿಸಲಾಗಿದೆ. ಬೆಲ್ವೆಡೆರೆ ಎಸ್ಟೇಟ್ ನಲ್ಲಿ ಇದು ೩೦ ಎಕರೆ (೧೨ ಹೆಕ್ಟೇರ್) ವಿಸ್ತೀರ್ಣದಲ್ಲಿದೆ. ೨.೨ ಮಿಲಿಯನ್ ಪುಸ್ತಕಗಳ ಸಂಗ್ರಹದೊಂದಿಗೆ ಇದು ಭಾರತದಲ್ಲಿ ಅತಿ ದೊಡ್ಡ ಗ್ರಂಥಾಲಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ಇದು ಬಂಗಾಳದ ಲೆಫ್ಟಿನೆಂಟ್ ಗವರ್ನರ್ ನ ಅಧಿಕೃತ ನಿವಾಸವಾಗಿತ್ತು.
ಭಾರತದ ರಾಷ್ಟ್ರೀಯ ಗ್ರಂಥಾಲಯವು ಭಾರತದಲ್ಲಿಯೇ ಅತಿದೊಡ್ಡ ಗ್ರಂಥಾಲಯ ಮತ್ತು ಸಾರ್ವಜನಿಕ ದಾಖಲೆಯ ಗ್ರಂಥಾಲಯವಾಗಿದೆ. ಈ ಗ್ರಂಥಾಲಯವು "ರಾಷ್ಟ್ರೀಯ ಸರ್ಕಾರದ ಸಾಂಸ್ಕೃತಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದಲ್ಲಿ ಉಂಟಾಗುವ ಎಲ್ಲಾ ಮುದ್ರಿತ ವಸ್ತುಗಳನ್ನು ಸಂಗ್ರಹಿಸಲು, ಪ್ರಸಾರ ಮಾಡಲು ಮತ್ತು ಸಂರಕ್ಷಿಸಲು ಗೊತ್ತುಪಡಿಸಲಾಗಿರುತ್ತದೆ ಮತ್ತು ದೇಶದ ಬಗ್ಗೆ ಪ್ರಕಟವಾದ ಎಲ್ಲಾ ವಿದೇಶಿ ಕೃತಿಗಳನ್ನು-'ಭಾರತದ ಬಗ್ಗೆ ಇರುವ ಪ್ರತೀ ಕೃತಿಗಳನ್ನು... ಕಾಣಬಹುದು ಮತ್ತು ಓದಬಹುದು' "(ಮುರ್ರೇ, ೨೦೦೯). ರಾಷ್ಟ್ರೀಯ ಗ್ರಂಥಾಲಯವು, ಸಾರ್ವಜನಿಕ ಗ್ರಂಥಾಲಯವನ್ನು ಇಂಪೀರಿಯಲ್ ಲೈಬ್ರರಿ-ಹಲವಾರು ಸರ್ಕಾರಿ ಗ್ರಂಥಾಲಯಗಳನ್ನು ವಿಲೀನಗೊಳಿಸಿದ ಫ಼ಲಿತಾಂಶವಾಗಿದೆ. ರಾಷ್ಟ್ರೀಯ ಗ್ರಂಥಾಲಯ (೧೯೫೩), ನಂತರ ಇಂಪೀರಿಯಲ್ ಲೈಬ್ರರಿ ಹಲವಾರು ವಿದೇಶಿ (ಬ್ರಿಟಿಷ್) ಮತ್ತು ಭಾರತೀಯ ಶೀರ್ಷಿಕೆಗಳನ್ನು ಹೊಂದಿದೆ ಮತ್ತು ಸಾರ್ವಜನಿಕರಿಗೆ ಮುಕ್ತವಾಗಿದೆ. ಮತ್ತಷ್ಟು ಗಮನಿಸಬೇಕಾದರೆ, ಭಾರತೀಯ ಗ್ರಂಥಾಲಯವು ಪುಸ್ತಕ, ನಿಯತಕಾಲಿಕಗಳು, ಮತ್ತು ಪ್ರಶಸ್ತಿಗಳನ್ನು "ಬಹುತೇಕ ಭಾರತೀಯ ಭಾಷೆಗಳಲ್ಲಿ ಹಿಂದಿ, ಕಾಶ್ಮೀರಿ, ಪಂಜಾಬ್, ಸಿಂಧಿ, ತೆಲುಗು ಮತ್ತು ಉರ್ದುಗಳೊಂದಿಗೆ" ಹೆಚ್ಚಿನ ಸಂಗ್ರಹವನ್ನು ಹೊಂದಿದೆ (ಮುರ್ರೇ, ೨೦೦೯). ಭಾರತದ ರಾಷ್ಟ್ರೀಯ ಗ್ರಂಥಾಲಯದಲ್ಲಿ "ಅಸ್ಸಾಮಿ, ಬಂಗಾಳಿ, ಗುಜರಾತಿ ..... ಮತ್ತು ತಮಿಳು ಸೇರಿದಂತೆ ಕನಿಷ್ಟ ಹದಿನೈದು ಭಾಷೆಗಳ ಹಲವು ಅಪರೂಪದ ಕೃತಿಗಳ ವಿಶೇಷ ಸಂಗ್ರಹಗಳಿವೆ (ಮುರ್ರೇ, ೨೦೦೯). ಹಿಂದಿ ಇಲಾಖೆಯು ಹತ್ತೊಂಬತ್ತನೇ ಶತಮಾನಕ್ಕೂ ಮುಂಚಿನ ಪುಸ್ತಕಗಳನ್ನು ಮತ್ತು ಆ ಭಾಷೆಯಲ್ಲಿ ಮೊದಲ ಬಾರಿಗೆ ಮುದ್ರಿತವಾದ ಪುಸ್ತಕಗಳ ಸಂಗ್ರಹಣೆಯನ್ನೂ ಹೊಂದಿದೆ. ಇಲ್ಲಿನ ಸಂಗ್ರಹವು ೮೬,೦೦೦ ನಕ್ಷೆಗಳು ಮತ್ತು ೩,೨೦೦ ಹಸ್ತಪ್ರತಿಗಳನ್ನು ಹೊಂದಿರುತ್ತದೆ.
ಇತಿಹಾಸ
[ಬದಲಾಯಿಸಿ]ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯ
[ಬದಲಾಯಿಸಿ]೧೮೩೬ ರಲ್ಲಿ ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯದ ರಚನೆಯೊಂದಿಗೆ ರಾಷ್ಟ್ರೀಯ ಗ್ರಂಥಾಲಯದ ಇತಿಹಾಸ ಪ್ರಾರಂಭವಾಯಿತು. ಇದು ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಸ್ವಾಮ್ಯದ ಆಧಾರದ ಮೇಲೆ ನಡೆಯುತ್ತಿತ್ತು. ಚಂದಾದಾರಿಕೆಯಲ್ಲಿ ಜನರು ₹ ೩೦೦ (ಯುಎಸ್ $ ೪.೨೦) ಕೊಡುಗೆಯನ್ನು ನೀಡಿ ಮಾಲೀಕರಾಗಬಹುದಿತ್ತು. ಪ್ರಿನ್ಸ್ ದ್ವಾರಕಾನಾಥ್ ಟಾಗೋರ್ ಆ ಲೈಬ್ರರಿಯ ಮೊದಲ ಮಾಲೀಕರಾಗಿದ್ದರು. ಆ ಸಮಯದಲ್ಲಿ ₹ ೩೦೦ ಗಮನಾರ್ಹ ಪ್ರಮಾಣವಾಗಿತ್ತು, ಆದ್ದರಿಂದ ಬಡ ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ಕೆಲವು ಸಮಯದವರೆಗೆ ಗ್ರಂಥಾಲಯದ ಉಚಿತ ಬಳಕೆಯನ್ನು ಅನುಮತಿಸಲಾಯಿತು.[೨]
ಆ ಸಮಯದಲ್ಲಿನ ಗವರ್ನರ್ ಜನರಲ್ ಲಾರ್ಡ್ ಮೆಟ್ಕಾಲ್ಫ್, ೪,೬೭೫ ಸಂಪುಟಗಳನ್ನು ಕೊಲ್ಕತ್ತಾದ ಫೋರ್ಟ್ ವಿಲಿಯಂನ ಗ್ರಂಥಾಲಯದಿಂದ ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯಕ್ಕೆ ವರ್ಗಾಯಿಸಿದರು. ಇದು ಮತ್ತು ಕೆಲವು ವ್ಯಕ್ತಿಗಳ ಪುಸ್ತಕಗಳ ದೇಣಿಗೆಯಿಂದ ಗ್ರಂಥಾಲಯವನ್ನು ವಿಶಿಷ್ಟ ರೀತಿಯಲ್ಲಿ ರೂಪುಗೊಳಿಸಿತು.
ಭಾರತೀಯ ಮತ್ತು ವಿದೇಶಿ ಪುಸ್ತಕಗಳು, ವಿಶೇಷವಾಗಿ ಬ್ರಿಟಿಷ್, ಗ್ರಂಥಾಲಯಕ್ಕಾಗಿ ಖರೀದಿಸಲ್ಪಟ್ಟವು. ದೇಣಿಗೆಗಳನ್ನು ನಿಯಮಿತವಾಗಿ ವ್ಯಕ್ತಿಗಳು ಮತ್ತು ಸರ್ಕಾರದ ಮೂಲಕ ಮಾಡಲಾಯಿತು. ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯವು ಪ್ರಪಂಚದ ಈ ಭಾಗದಲ್ಲಿ ಮೊದಲ ಸಾರ್ವಜನಿಕ ಗ್ರಂಥಾಲಯವಾಗಿ ಒಂದು ವಿಶಿಷ್ಟ ಸ್ಥಾನವನ್ನು ಹೊಂದಿತ್ತು. ೧೯ ನೆಯ ಶತಮಾನದ ಮೊದಲಾರ್ಧದಲ್ಲಿ ಇಂತಹ ಸುಸಂಘಟಿತ ಮತ್ತು ಪರಿಣಾಮಕಾರಿಯಾಗಿ ನಡೆಸುತ್ತಿದ್ದ ಗ್ರಂಥಾಲಯವು ಯುರೋಪ್ ನಲ್ಲಿಯೇ ಅಪರೂಪವಾಗಿತ್ತು.
ಕಲ್ಕತ್ತಾ ಸಾರ್ವಜನಿಕ ಗ್ರಂಥಾಲಯದ ಪ್ರಯತ್ನದಿಂದಾಗಿ, ಪ್ರಸ್ತುತ ರಾಷ್ಟ್ರೀಯ ಗ್ರಂಥಾಲಯವು ಅದರ ಸಂಗ್ರಹಣೆಯಲ್ಲಿ ಹಲವು ಅಪರೂಪದ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ಹೊಂದಿದೆ.
ಇಂಪೀರಿಯಲ್ ಲೈಬ್ರರಿ
[ಬದಲಾಯಿಸಿ]೧೮೯೧ ರಲ್ಲಿ ಕಲ್ಕತ್ತಾದಲ್ಲಿ ಹಲವಾರು ಸಚಿವಾಲಯ ಗ್ರಂಥಾಲಯಗಳನ್ನು ಸಂಯೋಜಿಸುವ ಮೂಲಕ ಇಂಪೀರಿಯಲ್ ಲೈಬ್ರರಿಯನ್ನು ರಚಿಸಲಾಯಿತು. ಇವುಗಳಲ್ಲಿ, ಅತ್ಯಂತ ಪ್ರಮುಖ ಮತ್ತು ಆಸಕ್ತಿದಾಯಕವೆಂದರೆ ಗೃಹ ಇಲಾಖೆಯ ಗ್ರಂಥಾಲಯವಾಗಿದ್ದು, ಈಸ್ಟ್ ಇಂಡಿಯಾ ಕಾಲೇಜಿನ ಗ್ರಂಥಾಲಯ, ಫೋರ್ಟ್ ವಿಲಿಯಂ ಮತ್ತು ಲಂಡನ್ ನಲ್ಲಿರುವ ಈಸ್ಟ್ ಇಂಡಿಯಾ ಬೋರ್ಡ್ ಗ್ರಂಥಾಲಯಕ್ಕೆ ಸೇರಿದ ಅನೇಕ ಪುಸ್ತಕಗಳನ್ನು ಒಳಗೊಂಡಿತ್ತು. ಆದರೆ ಗ್ರಂಥಾಲಯದ ಬಳಕೆಯನ್ನು ಸರ್ಕಾರದ ಉನ್ನತ ಅಧಿಕಾರಿಗಳಿಗೆ ನಿರ್ಬಂಧಿಸಲಾಗಿತ್ತು. ಸರ್ ಅಶುತೋಷ್ ಮುಖರ್ಜಿ ಅವರನ್ನು ಇಂಪೀರಿಯಲ್ ಲೈಬ್ರರಿ ಕೌನ್ಸಿಲ್ (೧೯೧೦) ನ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು, ಇದಕ್ಕಾಗಿ ಅವರು ಪ್ರತ್ಯೇಕ ವಿಭಾಗದಲ್ಲಿ ೮೦,೦೦೦ ಪುಸ್ತಕಗಳ ವೈಯಕ್ತಿಕ ಸಂಗ್ರಹವನ್ನು ದೇಣಿಗೆ ನೀಡಿದರು.
ಸಿಪಿಎಲ್ ಮತ್ತು ಇಂಪೀರಿಯಲ್ ಲೈಬ್ರರಿಯ ಸೇರಿಕೆ
[ಬದಲಾಯಿಸಿ]೧೯೦೩ ರಲ್ಲಿ, ಭಾರತದ ವೈಸರಾಯ್, ಕೆಡ್ಲೆಸ್ಟೋನ್ ನ ಲಾರ್ಡ್ ಕರ್ಜನ್, ಸಾರ್ವಜನಿಕರ ಬಳಕೆಗಾಗಿ ಗ್ರಂಥಾಲಯವನ್ನು ತೆರೆಯುವ ಕಲ್ಪನೆಯನ್ನು ರೂಪಿಸಿದರು. ಇಂಪೀರಿಯಲ್ ಲೈಬ್ರರಿ ಮತ್ತು ಕಲ್ಕತ್ತಾದ ಸಾರ್ವಜನಿಕ ಗ್ರಂಥಾಲಯಗಳೆರಡೂ ಸೌಲಭ್ಯಗಳನ್ನು ಅಥವಾ ನಿರ್ಬಂಧಗಳನ್ನು ಕಡಿಮೆ ಬಳಸಿಕೊಳ್ಳುತ್ತಿವೆ ಎಂದು ಅವರು ಗಮನಿಸಿದರು. ಅವರು ಈ ಎರಡೂ ಗ್ರಂಥಾಲಯಗಳ ಸಮೃದ್ಧ ಸಂಗ್ರಹವನ್ನು ಒಟ್ಟುಗೂಡಿಸಲು ನಿರ್ಧರಿಸಿದರು.[೩]
ಇಂಪೀರಿಯಲ್ ಲೈಬ್ರರಿ ಎಂದು ಕರೆಯಲ್ಪಡುವ ಹೊಸ ಮಿಶ್ರಣಗೊಂಡ ಗ್ರಂಥಾಲಯವನ್ನು ಕೋಲ್ಕತಾದ ಮೆಟ್ಕಾಲ್ಫ್ ಹಾಲ್ ನಲ್ಲಿ ೧೯೦೩ ರ ಜನವರಿ ೩೦ ರಂದು ಸಾರ್ವಜನಿಕರಿಗಾಗಿ ಪ್ರಾರಂಭಿಸಲಾಯಿತು. ಮೆಟ್ಕಾಲ್ಫೆ ಹಾಲ್ ಹಿಂದೆ ಗವರ್ನರ್-ಜನರಲ್ ನ ನೆಲೆಯಾಗಿತ್ತು; ವೆಲ್ಲಿಂಗ್ಟನ್, ಕಾರ್ನ್ವಾಲಿಸ್ ಮತ್ತು ವಾರೆನ್ ಹೇಸ್ಟಿಂಗ್ಸ್ ಅವರು ಕಟ್ಟಡದಲ್ಲಿ ವಾಸವಾಗಿದ್ದರು.
ದಿ ಗೆಜೆಟ್ ಆಫ಼್ ಲಂಡನ್ ಈ ರೀತಿ ವರದಿ ಮಾಡಿದೆ "ಇದು ಉಲ್ಲೇಖಗಳಿಗಾಗಿರುವ ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಕೆಲಸ ಮಾಡುವ ಸ್ಥಳ ಮತ್ತು ಭಾರತದ ಭವಿಷ್ಯದ ಇತಿಹಾಸಕಾರರಿಗೆ ಸಾಮಾಗ್ರಿಗಳ ಒಂದು ಭಂಡಾರವೆಂದು ಉದ್ದೇಶಿಸಿದೆ, ಸಾಧ್ಯವಾದಷ್ಟು ಇದರಲ್ಲಿ, ಯಾವುದೇ ಸಮಯದಲ್ಲಿ ರಚಿತವಾದ ಭಾರತಕ್ಕೆ ಸಂಬಂಧಪಟ್ಟ ಕೃತಿಗಳನ್ನು ಕಾಣಬಹುದು ಮತ್ತು ಓದಬಹುದು."
ಇಂಪೀರಿಯಲ್ ಲೈಬ್ರರಿಯನ್ನು ರಾಷ್ಟ್ರೀಯ ಗ್ರಂಥಾಲಯವಾಗಿ ಘೋಷಣೆ
[ಬದಲಾಯಿಸಿ]ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು ಇಂಪೀರಿಯಲ್ ಲೈಬ್ರರಿಯ ಹೆಸರನ್ನು ರಾಷ್ಟ್ರೀಯ ಗ್ರಂಥಾಲಯವಾಗಿ ಬದಲಿಸಿತು ಮತ್ತು ಸಂಗ್ರಹವನ್ನುಎಸ್ಪ್ಲನೇಡ್ ನಿಂದ ಪ್ರಸ್ತುತ ಬೆಲ್ವೆಡೆರೆ ಎಸ್ಟೇಟ್ ಗೆ ಸ್ಥಳಾಂತರಿಸಲಾಯಿತು. ೧ ಫೆಬ್ರವರಿ ೧೯೫೩ ರಂದು ರಾಷ್ಟ್ರೀಯ ಗ್ರಂಥಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಯಿತು.
ಗುಪ್ತ ಕೊಠಡಿಯ ಶೋಧನೆ
[ಬದಲಾಯಿಸಿ]೨೦೧೦ ರಲ್ಲಿ, ಗ್ರಂಥಾಲಯದ ಮಾಲೀಕರಾದ ಸಂಸ್ಕೃತಿ ಸಚಿವಾಲಯವು, ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್ಐ) ದಿಂದ ಗ್ರಂಥಾಲಯದ ಕಟ್ಟಡವನ್ನು ಪುನಃಸ್ಥಾಪಿಸಲು ನಿರ್ಧರಿಸಿತು. ಗ್ರಂಥಾಲಯ ಕಟ್ಟಡದ ಸಂಗ್ರಹವನ್ನು ತೆಗೆಯುತ್ತಿರುವಾಗ, ಎಂಜಿನಿಯರ್ ಗಳು ಹಿಂದೆಂದೂ ಗೊತ್ತಿಲ್ಲದ ಕೊಠಡಿಯನ್ನು ಕಂಡುಹಿಡಿದರು. ಸುಮಾರು ೧೦೦೦ ಚದರ ಅಡಿ ಗಾತ್ರದ ರಹಸ್ಯ ನೆಲ ಅಂತಸ್ತಿನ ಕೊಠಡಿ ಯಾವುದೇ ರೀತಿಯಲ್ಲಿ ತೆರೆದುಕೊಳ್ಳಲು ಸಾಧ್ಯವಿಲ್ಲದಂತೆ ಕಂಡುಬಂತು.
ASI ಪುರಾತತ್ತ್ವಜ್ಞರು ಒಂದು ಬಾಗಿಲನ್ನು ಹುಡುಕಲು ಮೊದಲ ಮಹಡಿ ಪ್ರದೇಶವನ್ನು (ಕೋಣೆಯ ಮೇಲ್ಛಾವಣಿಯ ಭಾಗ) ಹುಡುಕಲು ಪ್ರಯತ್ನಿಸಿದರು, ಆದರೆ ಏನೂ ಕಂಡುಬಂದಿಲ್ಲ. ಕಟ್ಟಡವು ಐತಿಹಾಸಿಕ ಮತ್ತು ಸಾಂಸ್ಕೃತಿಕತೆಗೆ ಪ್ರಾಮುಖ್ಯತೆಯಿರುವುದರಿಂದಾಗಿ, ಎಎಸ್ಐ ಗೋಡೆಯನ್ನು ಒಡೆಯುವ ಬದಲು ರಂಧ್ರ ಮಾಡಲು ನಿರ್ಧರಿಸಿತ್ತು. ವಾರೆನ್ ಹೇಸ್ಟಿಂಗ್ಸ್ ಮತ್ತು ಇತರ ಬ್ರಿಟಿಷ್ ಅಧಿಕಾರಿಗಳು ಈ ಕೋಣೆಯನ್ನು ಶಿಕ್ಷೆ ನೀಡಲು ಅಥವಾ ನಿಧಿಯನ್ನು ಶೇಖರಿಸುವ ಸ್ಥಳವಾಗಿ ಕೋಣೆಯನ್ನು ಬಳಸಲಾಗಿತ್ತು ಎಂಬ ಬಗ್ಗೆ ಊಹಾಪೋಹಗಳಿವೆ.[೪]
೨೦೧೧ ರಲ್ಲಿ, ಸಂಶೋಧಕರು ಕೊಠಡಿಯನ್ನು ಸಂಪೂರ್ಣವಾಗಿ ಮಣ್ಣಿನಿಂದ ತುಂಬಿಕೊಂಡಿದೆ ಎಂದು ಘೋಷಿಸಿದರು (ಬಹುಶಃ ಕಟ್ಟಡವನ್ನು ಸ್ಥಿರಗೊಳಿಸುವ ಪ್ರಯತ್ನಕ್ಕಾಗಿ).
ಭೇಟಿ
[ಬದಲಾಯಿಸಿ]ರಾಷ್ಟ್ರೀಯ ಗ್ರಂಥಾಲಯವು ಕಲ್ಕತ್ತಾದ ಆಲಿಪೋರ್ ನ ಬೆಲ್ವೆಡೆರೆ ರಸ್ತೆಯಲ್ಲಿದೆ. ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳಲ್ಲಿ ಬೆಳಗ್ಗೆ ೯.೩೦ ರಿಂದ ಸಂಜೆ ೬.೦೦ ರವರೆಗೆ ಮತ್ತುಳಿದ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ ೯.೦೦ ರಿಂದ ಸಂಜೆ ೮.೦೦ ರವರೆಗೆ ತೆರೆದಿರುತ್ತದೆ. ಜನವರಿ ೨೬ (ಪ್ರಜಾಪ್ರಭುತ್ವ ದಿನ), ೧೫ ಆಗಸ್ಟ್ (ಸ್ವಾತಂತ್ರ್ಯ ದಿನ) ಮತ್ತು ೨ ಅಕ್ಟೋಬರ್ (ಮಹಾತ್ಮ ಗಾಂಧಿಯವರ ಜನ್ಮದಿನ) ಈ ಮೂರು ರಾಷ್ಟ್ರೀಯ ರಜಾದಿನಗಳಲ್ಲಿ ಇದು ಮುಚ್ಚಲ್ಪಟ್ಟಿರುತ್ತದೆ.
ರಾಷ್ಟ್ರೀಯ ಗ್ರಂಥಾಲಯದ ಮುಖ್ಯ ಓದುವ ಕೋಣೆಗೆ (ಭಾಷಾ ಭವನಕ್ಕೆ) ಪ್ರವೇಶ ಕಟ್ಟುನಿಟ್ಟಾಗಿ ನಿಯಂತ್ರಿಸಲ್ಪಡುತ್ತದೆ. ಓದುವ ಕೋಣೆಗೆ ಸಂದರ್ಶಕರಿಗೆ ಅನುಮೋದಿತ ಓದುಗರ ಪಾಸ್ ನ್ನು ನೀಡಬೇಕು. ಇದಕ್ಕಾಗಿ ಅವರು ಅರ್ಜಿ ನಮೂನೆಯನ್ನು ತುಂಬಬೇಕು (ರಾಷ್ಟ್ರೀಯ ಗ್ರಂಥಾಲಯದ ಜಾಲತಾಣದಲ್ಲಿ ಲಭ್ಯವಿದೆ) ಮತ್ತು ಅದನ್ನು ಸರ್ಕಾರಿ ಗಝೆಟೆಡ್ ಅಧಿಕಾರಿ ಪ್ರಮಾಣೀಕರಿಸಬೇಕು. ರಾಷ್ಟ್ರೀಯ ಮತ್ತು ರಾಜ್ಯ ರಜಾದಿನಗಳನ್ನು ಹೊರತುಪಡಿಸಿ, ಸೋಮವಾರದಿಂದ ಶುಕ್ರವಾರದವರೆಗೆ, ಓದುಗರ ಪಾಸ್ ಗಳನ್ನು ಬೆಳಗ್ಗೆ ೧೧.೦೦ ರಿಂದ ೧.೦೦ ರವರೆಗೆ ಮತ್ತು ೩.೦೦ ರಿಂದ ೪.೦೦ ರವರೆಗೆ ಮಾತ್ರ ನೀಡಲಾಗುತ್ತದೆ.[೫]
ಗ್ರಂಥಾಲಯದ ಅಂಕಿಅಂಶಗಳು
[ಬದಲಾಯಿಸಿ]- ೨,೨೭೦,೦೦೦ ಪುಸ್ತಕಗಳು
- ೮೬,೦೦೦ ಕ್ಕಿಂತ ಹೆಚ್ಚು ನಕ್ಷೆಗಳು
- ೩,೨೦೦ ಕ್ಕೂ ಹೆಚ್ಚು ಹಸ್ತಪ್ರತಿಗಳು
- ೪೫ ಕಿಲೋಮೀಟರ್ ಗಳಷ್ಟು ಶೆಲ್ಫ್ ಸ್ಥಳಾವಕಾಶ
- ಓದುವ ಕೊಠಡಿಗಳು ೫೫೦ ಕ್ಕಿಂತಲೂ ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Administration of the National Library".
- ↑ https://timesofindia.indiatimes.com/travel/kolkata/national-library-of-india/ps48002370.cms
- ↑ http://www.indiaculture.nic.in/national-library-india
- ↑ https://kannada.nativeplanet.com/travel-guide/most-haunted-places-in-kolkata-002844.html
- ↑ http://www.nationallibrary.gov.in/nat_lib_stat/index2.html