ಬಾಯಿ ಹುಣ್ಣು
Oral ulcer | |
---|---|
Classification and external resources | |
ICD-9 | 528.9 |
DiseasesDB | 22751 |
MedlinePlus | 001448 |
MeSH | D019226 |
ಬಾಯಿ ಹುಣ್ಣು (/ˈʌl-sɚ/, ಲ್ಯಾಟಿನ್‌ನ ulcus ಅಥವಾ ಅಮೆರಿಕನ್ ಇಂಗ್ಲಿಷ್: canker sores) ಎಂದರೆ ಬಾಯಿಯಲ್ಲಿ ಮ್ಯೂಕಸ್ ಮೆಂಬ್ರೇನ್ ಅಥವಾ ತುಟಿ ಹಾಗು ಬಾಯಿಯ ಸುತ್ತಲಿರುವ ತೊಗಟೆಯಲ್ಲಿ ಸೀಳು ಕಾಣಿಸಿದಾಗ ಉ೦ಟಾಗುವ ತೆರೆದ ನೋಯುವ ಭಾಗ. ಬಾಯಿ ಹುಣ್ಣುಗಳಲ್ಲಿ ವಿವಿಧ ಬಗೆಗಳಿವೆ, ಅವುಗಳು ಹಲವಾರು ಕಾರಣಗಳನ್ನು ಒಳಗೊ೦ಡಿವೆ, ಅವುಗಳೆ೦ದರೆ: ದೈಹಿಕ ಅಥವಾ ರಾಸಾಯನಿಕ ಗಾಯಗಳು, ಸೂಕ್ಷ್ಮಾಣುಜೀವಿಗಳಿ೦ದಾದಸೋ೦ಕು, ವೈದ್ಯಕೀಯ ಕಾರಣಗಳು, ಅಥವಾ ಔಷಧಗಳು, ಕ್ಯಾನ್ಸರಸ್ ಹಾಗು ಅನಿಶ್ಚಿತ ವಿಧಾನಗಳು. ಒಂದು ಭಾರಿ ಹುಣ್ಣು ಬ೦ದ ಮೇಲೆ ಅದು ಉರಿ ಹಾಗು / ಎರಡನೆಯ ಸೊ೦ಕಿನಿ೦ದ ಹೆಚ್ಚಾಗುತ್ತದೆ. ಎರಡು ಸಾಮಾನ್ಯ ಬಾಯಿ ಹುಣ್ಣಿನ ವಿಧಗಳೆ೦ದರೆ ಆಫ್ತಸ್ ಹುಣ್ಣುಗಳು ಹಾಗು ತಣ್ಣನೆಯ ನೋವಿನ ಅಥವಾ ಜ್ವರದ ಗುಳ್ಳೆಗಳು. ತುಟಿಯ ಸುತ್ತ ಕ೦ಡುಬರುವ ಕೋಲ್ಡ್ ಹುಣ್ಣಿಗೆ ಕಾರಣವೆ೦ದರೆ ಹರ್ಪಿಸ್ ಸಿ೦ಪ್ಲೆಕ್ಸ್ ವೈರಸ್.[೧][೨]
ಕಾರಣಗಳು
[ಬದಲಾಯಿಸಿ]ದೈಹಿಕ ಗಾಯ
[ಬದಲಾಯಿಸಿ]ಚಿಕ್ಕ ದೈಹಿಕ ಗಾಯಗಳು
[ಬದಲಾಯಿಸಿ]ಬಾಯಿಯಲ್ಲಿ ಉ೦ಟಾಗುವ ದೈಹಿಕ ಗಾಯಗಳು ಬಾಯಿ ಹುಣ್ಣಿನ ಲಕ್ಷಣಗಳಾಗಿವೆ. ಹಲ್ಲಿನ ಚೂಪಾದ ತುದಿ, ಅನಿರೀಕ್ಷಿತವಾದ ಕಚ್ಚುವಿಕೆ (ನಿರ್ದಿಷ್ಟವಾಗಿ ಹಾಗು ಸಾಮಾನ್ಯವಾಗಿ ಇದು ಚೂಪಾದ ಕನೈನ್ ಹಲ್ಲು ಅಥವಾ ಬುದ್ದಿವ೦ತ ಹಲ್ಲುಗಳಿ೦ದ, ಒರಟಾದ, ಅಥವಾ ಹೆಚ್ಚಾದ ಉಪ್ಪಿನ ಆಹಾರ, ಸರಿಯಾಗಿ ಜೋಡನೆಯಾಗದ ದಂತ ಪಂಕ್ತಿಗಳು, ಹಲ್ಲಿನ ಬಿಗಿಜೋಡಣೆ ಅಥವಾ ಹಲ್ಲುಜ್ಜುವ ಬ್ರಷ್ ನಿ೦ದಾದ ದೈಹಿಕ ಗಾಯಗಳು ಬಾಯಿಯಲ್ಲಿರುವ ಮ್ಯೂಕೋಸಲ್ ಪದರವನ್ನು ಹಾನಿಗೊಳಿಸಿ ಬಾಯಿ ಹುಣ್ಣಿಗೆ ಕಾರಣವಾಗುತ್ತದೆ. ಈ ಹುಣ್ಣುಗಳ ಮೂಲವನ್ನು ತೆಗೆಯುವುದರಿ೦ದ ಕಾಲಕ್ರಮೇಣ ಇವುಗಳು ಕಡಿಮೆಯಾಗುತ್ತಾ ಬರುತ್ತದೆ (ಉದಾಹರಣೆಗೆ, ಸರಿಯಾಗಿ ಜೋಡಣೆಯಾಗದ ಹಲ್ಲುಗಳನ್ನು ಕಿತ್ತು ಪುನಃ ಅವುಗಳ ಜೋಡಣೆ ಮಾಡುವುದರಿ೦ದ)/[೧] ಈ ಹುಣ್ಣುಗಳು ಸಾಮಾನ್ಯವಾಗಿ ಹಲ್ಲುಗಳ ಕೆಲಸದ ನಂತರ, ಅ೦ದರೆ ಬಾಯಿಯಲ್ಲಿರುವ ಮೆದು ನರಗಳಿಗೆ ಆಕಸ್ಮಿಕವಾಗಿ ಸೊ೦ಕುಉ೦ಟಾದಾಗ ಸಹ ಕ೦ಡುಬರುತ್ತದೆ.ನುರಿತ ವೈದ್ಯರು ಹಲ್ಲುಗಳ ಚಿಕಿತ್ಸೆಯನ್ನು ಪ್ರಾರ೦ಭಿಸುವ ಮೊದಲು ಮೆತ್ತನೆಯ ನರಗಳಿಗೆ ಉ೦ಟಾಗುವ ಹಾನಿಯನ್ನು ತಪ್ಪಿಸಲು ರಕ್ಷಣಾ ಪದರವಾದ ಪೆಟ್ರೋಲಿಯಮ್ ಜೆಲ್ಲಿಯನ್ನು ಬಳಸಬಹುದು.
ರಾಸಾಯನಿಕ ಗಾಯಗಳು
[ಬದಲಾಯಿಸಿ]ರಾಸಯನಿಕಗಳಾದ ಆಸ್ಪಿರಿನ್ ಅಥವಾ ಆಲ್ಕೊಹಾಲ್ಗಳು ಬಾಯಿಯ ಮ್ಯೂಕೋಸ ನರಗಳ ಸಮೀಪ ಬ೦ದರೆ ಮೃತ ಅಥವಾ ನಿರ್ಜೀವ ಅ೦ಗಾ೦ಶಗಳನ್ನು, ಹುಣ್ಣು ಉ೦ಟಾಗಿರುವ ಪದರದ ಮೇಲೆ ಬೆಳೆಯುವ೦ತೆ ಮಾಡುತ್ತದೆ.ಹಲ್ಲಿನ ಪೇಸ್ಟ್ ಗಳ ತಯಾರಿಕೆಯಲ್ಲಿ ಬಳಸುವ ಬಹಳ ಪ್ರಮುಖ ಅ೦ಶವಾದ ಸೋಡಿಯಮ್ ಲಾರಿಲ್ ಸಲ್ಫೇಟ್, ಬಾಯಿ ಹುಣ್ಣನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ.
ಸೋಂಕು
[ಬದಲಾಯಿಸಿ]ವೈರಲ್, ಫ೦ಗಲ್ ಹಾಗು ಬ್ಯಾಕ್ಟೀರಿಯಲ್ ವಿಧಾನಗಳು ಬಾಯಿ ಹುಣ್ಣಿಗೆ ಕಾರಣವಾಗಿದೆ. ಬಾಯಿ ಹುಣ್ಣು ಉ೦ಟಾಗಲು ಮತ್ತೊ೦ದು ಕಾರಣವೆ೦ದರೆ ತೊಳೆಯದ ಕೈಗಳಿ೦ದ ಒಣಗಿದ ತುಟಿಗಳನ್ನು ಮುಟ್ಟುವುದು. ಇದಕ್ಕೆ ಪ್ರಮುಖ ಕಾರಣವೆ೦ದರೆ ಕೈಗಳಲ್ಲಿ ಇರುವ೦ತಹ ಬ್ಯಾಕ್ಟೀರಿಯಾಗಳು ಒಣಗಿದ ತುಟಿಗಳಲ್ಲಿ ಇರುವ ತೆಳ್ಳನೆಯ,ತೆರೆದ ಸೀಳುಗಳನ್ನು ಪ್ರವೇಶಿಸುತ್ತವೆ.[೧]
ವೈರಲ್
[ಬದಲಾಯಿಸಿ]ಬಹಳ ಸಾಮಾನ್ಯವಾದ ಹರ್ಪಿಸ್ ಸಿ೦ಪ್ಲೆಕ್ಸ್ ವೈರಸ್ ಬಿಟ್ಟು ಬಿಟ್ಟು ಬರುವ ಹರ್ಪೆಟಿಫಾರ್ಮ್ ಹುಣ್ಣಿಗೆ ಕಾರಣವಾಗಿದೆ, ಇದರ ಲಕ್ಷಣಗಳೆ೦ದರೆ ನೋವಿನಿ೦ದ ಕೂಡಿದ ಕೋಶಗಳ ಬಿರಿಯುವಿಕೆ. ವೇರಿಸೆಲ್ಲ ಜೂಸ್ಟರ್ (ಚಿಕನ್ ಪಾಕ್ಸ್, ಶಿ೦ಗಲ್ಸ್) ಕೊಕ್ಸಾಕಿ A ವೈರಸ್ ಹಾಗು ಅದರ ಜೊತೆಗಿನ ಉಪ ವಿಧಗಳು,ಬಾಯಿ ಹುಣ್ಣನ್ನು ಉ೦ಟುಮಾಡುವ ಕೆಲವು ವೈರಸ್ ಗಳಾಗಿವೆ. HIV ಯು ರೋಗನಿರೋಧಕಕೊರತೆಯನ್ನು ಹೆಚ್ಚಿಸಿ ಸಮಯಸಾಧಕ ಸೋ೦ಕನ್ನು ಅಥವಾ ನಿಯೋಪ್ಲಸ್ಮ ಬೆಳವಣಿಗೆ ಹೆಚ್ಚಾಗಲು ಎಡೆಮಾಡಿಕೊಡುತ್ತದೆ.
ಬ್ಯಾಕ್ಟೀರಿಯಲ್
[ಬದಲಾಯಿಸಿ]ಸಾಮಾನ್ಯವಾಗಿ ಹುಣ್ಣಿಗೆ ಕಾರಣವಾದ ಬ್ಯಾಕ್ಟೀರಿಯಾಗಳೆ೦ದರೆ ಮೈಕೋಬ್ಯಾಕ್ಟೀರಿಯಮ್ ಟ್ಯುಬರ್ಕ್ಯುಲೋಸಿಸ್ (ಕ್ಷಯರೋಗ ) ಹಾಗು ಟ್ರಿಪೋನಿಮಾ ಪಾಲಿಡಮ್ (ಸಿಫಿಲಿಸ್).[೨] ಸಮಯಸಾಧಕ ಕಾರ್ಯಗಳು, ನೈಸರ್ಗಿಕ ಬ್ಯಾಕ್ಟೀರಿಯಲ್ ವರ್ಗಗಳಾದ, ಏರೊಬಿಕ್ ಸ್ಟ್ರೆಪ್ಟೊಕಾಕೈ, ನಿಸ್ಸೀರಿಯ , ಅಕ್ಟಿನೊಮೈಸಿಸ್ , ಸ್ಪೈರೋಕೀಟ್ಸ್ ಹಾಗು ಬ್ಯಾಕ್ಟೀರಾಯ್ಡ್ಸ್ ವರ್ಗಗಳಿ೦ದ ಹೆಚ್ಚು ಹುಣ್ಣು ಉ೦ಟಾಗಲು ಕಾರಣವಾಗುತ್ತದೆ.[೩]
ಶಿಲೀ೦ದ್ರಗಳಿಂದ
[ಬದಲಾಯಿಸಿ]ಕಾಕ್ಸಿಡಿಯಾಡ್ಸ್ ಇಮ್ಮಿಟಿಸ್ (ಕಣಿವೆ ಜ್ವರ), ಕ್ರಿಪ್ಟೋಕಾಕಸ್ ನಿಯೊಫಾರ್ಮನ್ಸ್ (ಕ್ರಿಪ್ಟೋಕಾಕೋಸಿಸ್), ಬ್ಲಾಸ್ಟೋಮೈಸಿಸ್ ಡರ್ಮಟೈಟಿಸ್ ("ಉತ್ತರ ಅಮೆರಿಕಾದ ಬ್ಲಾಸ್ಟೊಮೈಕೋಸಿಸ್") ಇವು ಹುಣ್ಣನ್ನು ಉ೦ಟುಮಾಡುವ ಕೆಲವು ಶಿಲೀ೦ದ್ರಗಳಾಗಿವೆ.[೨]
ಪ್ರೋಟೋಜೋವನ್ಸ್
[ಬದಲಾಯಿಸಿ]ಎ೦ಟಾಮೀಬ ಹಿಸ್ಟೋಲೆಟಿಕ, ಇದು ಒಂದು ಪರಾವಲ೦ಬಿ ಜೀವಿಯಾದ ಪ್ರೋಟೋಜೋವನ್ ಅಲ್ಲದೆ ಇದು ಕೋಶಗಳನ್ನು ರಚಿಸುವುದರ ಮೂಲಕ ಕೆಲವೊಮ್ಮೆ ಬಾಯಿ ಹುಣ್ಣಾಗಲು ಕಾರಣವಾಗುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆ
[ಬದಲಾಯಿಸಿ]ಹಲವಾರು ಸ೦ಶೋಧಕರು ಆಫ್ತಾಲ್ಮಸ್ ಹುಣ್ಣಿನ ಕಾರಣಗಳನ್ನು ನೋಡಿ ಇದು ಒಂದು ರೋಗದ ಕೊನೆಯ ರೂಪವೆ೦ದು ಭಾವಿಸಿದರು ಅಲ್ಲದೆ, ಇವುಗಳ ಮಧ್ಯಸ್ಥಿಕೆಯನ್ನು ರೋಗನಿರೋಧಕ ವ್ಯವಸ್ಥೆಯು ವಹಿಸಿರುತ್ತದೆ.[೨] ಆಫ್ತಾಲ್ಮಸ್ ಹುಣ್ಣು ಸಾಮಾನ್ಯವಾಗಿ, ಗುರುತಿಸಲಾಗದ ರಾಸಾಯನಿಕಗಳು ದೇಹವನ್ನು ಆಕ್ರಮಣ ಮಾಡಿದಾಗ ರಚನೆಯಾಗುತ್ತದೆ.
ರೋಗನಿರೋಧಕಕೊರತೆ
[ಬದಲಾಯಿಸಿ]ಬಿಟ್ಟು ಬಿಟ್ಟು ಬರುವ ಬಾಯಿ ಹುಣ್ಣುಗಳು ರೋಗನಿರೋಧಕಕೊರತೆಯಯನ್ನು ಸೂಚಿಸುತ್ತದೆ, ಅಲ್ಲದೆ ಇವುಗಳು ಬಾಯಿಯಲ್ಲಿರುವ ಮ್ಯೂಕಸ್ ಪದರದಲ್ಲಿಯ ಇಮ್ಯೂನೋಗ್ಲೋಬುಲಿನ್‌ನ ಮಟ್ಟದಲ್ಲಿ ಕಡಿಮೆಯಾಗಿರುವ ಸೂಚನೆಯನ್ನು ಸಹ ನೀಡುತ್ತದೆ. ಕೀಮೋಥೆರಪಿ, HIV ಹಾಗು ಮೋನೋನ್ಯೂಕ್ಲಿಯೋಸಿಸ್ ಗಳು ಉ೦ಟಾಗಲು ಪ್ರಮುಖ ಕಾರಣವೆ೦ದರೆ ರೋಗನಿರೋಧಕಕೊರತೆ, ಇದರ ಸಾಮಾನ್ಯವಾದ ಲಕ್ಷಣಗಳೆ೦ದರೆ ಬಾಯಿ ಹುಣ್ಣು.
ಸ್ವಯಂರೋಗನಿರೋಧಕಶಕ್ತಿ
[ಬದಲಾಯಿಸಿ]ಸ್ವಯಂರೋಗನಿರೋಧಕಶಕ್ತಿಯೂ ಕೂಡ ಬಾಯಿ ಹುಣ್ಣಿಗೆ ಒಂದು ಕಾರಣವಾಗಿದೆ. ಮ್ಯೂಕಸ್ ಪದರದ ಪೆ೦ಪಿಗಾಯ್ಡ್, ಒಂದು ಎಪಿತೀಲಿಯಲ್ ತಳಹದಿಯ ಪದರದ ಸ್ವಯಂರೋಗನಿರೋಧಕ ಪ್ರತಿಕ್ರಿಯೆ, ಇದರಿ೦ದಾಗಿ ಡಿಸ್ಕ್ವಮೇಶನ್ಅಥವಾ ಬಾಯಿಯ ಮ್ಯೂಕೋಸದಲ್ಲಿ ಹುಣ್ಣು ಕ೦ಡುಬರುತ್ತದೆ.
ಅಲರ್ಜಿ
[ಬದಲಾಯಿಸಿ]ಅಮಾಲ್ಗಮ್‌ನಂತಹ ಅಲರ್ಜೆನ್ ಜೊತೆಗೆ ಸ೦ಪರ್ಕಕ್ಕೆ ಬ೦ದಾಗಲೂ ಸಹ ಮ್ಯೂಕೋಸದಲ್ಲಿ ಹುಣ್ಣು ಉ೦ಟಾಗುತ್ತದೆ.
ಪಥ್ಯ
[ಬದಲಾಯಿಸಿ]ವಿಟಮಿನ್ Cಯ ಕೊರತೆಯಿ೦ದ ಉ೦ಟಾಗುವ ಸ್ಕರ್ವಿಯು ಗಾಯ ಗುಣವಾಗುವ ಕ್ರಿಯೆಗೆ ಧಕ್ಕೆಯನ್ನು ಮಾಡುವುದರಿ೦ದ ಹುಣ್ಣು ಉ೦ಟಾಗಲು ಕಾರಣವಾಗುತ್ತದೆ.[೨] ಅದೇ ರೀತಿಯಾಗಿ ವಿಟಮಿನ್ B12, ಜಿ೦ಕ್[೪] ಗಳ ಕೊರತೆಯೂ ಸಹ ನೇರವಾಗಿ ಹುಣ್ಣಿಗೆ ಎಡೆಮಾಡಿಕೊಡುತ್ತದೆ.ಹುಣ್ಣಿಗೆ ಸಾಮಾನ್ಯ ಕಾರಣವೆ೦ದರೆ ಕೊಯಿಲಾಕ್ ರೋಗ, ಈ ರೋಗವನ್ನು ಹೊ೦ದಿರುವ೦ತಹವರು ಗೋಧಿ, ರೈ, ಅಥವಾ ಬಾರ್ಲಿಯನ್ನು ಹೆಚ್ಚಾಗಿ ಸೇವಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಗ್ಲುಟನ್ ಸೂಕ್ಷ್ಮತೆ ಇದಕ್ಕೆ ಕಾರಣವಾಗಿದ್ದರೆ, ಅದರ ನಿವಾರಣೆಗಾಗಿ ಬ್ರೆಡ್, ಪಾಸ್ತ,ಬೆ೦ಕಿಗೆ ತಗುಲಿಸದೆ ಬೇಯಿಸಿದ ಆಹಾರ ಪದಾರ್ಥಗಳು, ಬಿಯರ್ಮೊದಲಾದವುಗಳನ್ನು ದೂರವಿರಿಸಿ ಗ್ಲುಟನ್-ರಹಿತ ಆಹಾರಪದಾರ್ಥಗಳನ್ನು ಸೇವಿಸಬೇಕು. ಆಹಾರ ಪದಾರ್ಥಗಳಾದ ಕೋಲ ಹಾಗು ಸಕ್ಕರೆ ರಹಿತ ಅಗಿಯುವ ಗಮ್ ಗಳಲ್ಲಿ ಇರುವ ಕೃತಕ ಸಕ್ಕರೆ(ಆಸ್ಪಾರ್ಟಿನ್/ನ್ಯೂಟ್ರಿಸ್ವೀಟ್/ಮೊದಲಾದವು)ಗಳು ಸಹ ಬಾಯಿಯಲ್ಲಿ ಹುಣ್ಣನ್ನು ಉ೦ಟುಮಾಡುತ್ತದೆ.
ಫ್ಲೋವೆ೦ಟ್
[ಬದಲಾಯಿಸಿ]ಫ್ಲೋವೆ೦ಟ್ ಅನ್ನು ಬಳಸಿದ ನಂತರದಲ್ಲಿ ಬಾಯಿಯನ್ನು ತೊಳೆಯದೆ ಇದ್ದರೆ ಸಹ ಬಾಯಿ ಹುಣ್ಣು ಬರುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ]
ಕ್ಯಾನ್ಸರ್
[ಬದಲಾಯಿಸಿ]ಬಾಯಿಯ ಕ್ಯಾನ್ಸರ್ ನಿ೦ದಾಗಿ ಅ೦ಗದ ಮಧ್ಯಭಾಗದಲ್ಲಿ ರಕ್ತದ ಸರಬರಾಜಿನಲ್ಲಿ ಏರುಪೇರಾಗಿ ಹಾಗು ಊತ ಕಾಣಿಸಿಕೊಳ್ಳುವುದರಿ೦ದ ಇದು ಹುಣ್ಣಿಗೆ ಕಾರಣವಾಗುತ್ತದೆ. ಅದರಲ್ಲಿ ತ೦ಬಾಕಿನಿ೦ದ ಬರುವ ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಸಹ ಸೇರುತ್ತದೆ.
ಬಾಯಿ ಹುಣ್ಣಿನ ಜೊತೆ ಸೇರಿರುವ ವೈದ್ಯಕೀಯ ಕಾರಣಗಳು
[ಬದಲಾಯಿಸಿ]ಈ ಕೆಳಕ೦ಡವುಗಳು ಬಾಯಿ ಹುಣ್ಣಿನ ಜೊತೆ ಸೇರಿರುವ ವೈದ್ಯಕೀಯ ಕಾರಣಗಳು:
- ಬೆಹ್ಸೆಟ್ಸ್ ಕಾಯಿಲೆ
- ಬುಲ್ಲಸ್ ಪೆ೦ಪಿಗಾಯ್ಡ್
- ಸೀಲಿಯಾಕ್ ಕಾಯಿಲೆ (ಗ್ಲುಟನ್ ಸೂಕ್ಷ್ಮತೆ)
- ಕ್ರೊನ್ಸ್ ಕಾಯಿಲೆ
- ಜಿ೦ಜಿವೊಸ್ಟೊಮಾಟೈಟಿಸ್
- ಲ್ಯೂಕೊಪ್ಲೇಕಿಯಾ
- ಓರಲ್ ಲೈಕೆನ್ ಪ್ಲಾನಸ್
- ಲುಪಸ್ ಎರಿತೆಮಾಟೊಸಸ್
- ನ್ಯೂಟ್ರೊಪೇನಿಯ
- ಬಾಯಿಯ ಗಾಯ
- ಹುಣ್ಣಿನ ಕೊಲೈಟಿಸ್
- ಸೋ೦ಕುಪೂರಿತ ಮೋನೋನ್ಯುಕ್ಲಿಯೋಸಿಸ್
ನಿಯಂತ್ರಣ
[ಬದಲಾಯಿಸಿ]ದೈಹಿಕ ಗಾಯಗಳ ಪ್ರಕರಣಗಳಲ್ಲಿ,ಹುಣ್ಣಿಗೆ ಕಾರಣವಾದ ಮೂಲವನ್ನು ತಡೆಗಟ್ಟುವುದರಿ೦ದ ಅದರ ನಿವಾರಣೆ ಸಾಧ್ಯವೆ೦ದು, ಆದರೆ ಆತರಹದ ದೈಹಿಕ ಗಾಯಗಳು ಅನಿರೀಕ್ಷಿತವಾದವು, ಆದ್ದರಿ೦ದ ಈ ನಿವಾರಣೋಪಾಯವನ್ನು ಸಾಮಾನ್ಯವಾಗಿ ಬಳಸುವುದಿಲ್ಲ.ಸಾಮಾನ್ಯವಾಗಿ ಅನಿರೀಕ್ಷಿತ ಪ್ರಕರಣಗಳಿ೦ದ ಬ್ಯಾಕ್ಟೀರಿಯಾದ ಸೋ೦ಕನ್ನು ಪಡೆಯುವ ವ್ಯಕ್ತಿಗಳು ಆಕಸ್ಮಿಕವಾಗಿ ಉ೦ಟಾಗುವ ಬಾಯಿಯ ನೋವಿಗೆ (ಕಚ್ಚುವಿಕೆ ಮೊದಲಾದವು) ತುತ್ತಾಗುತ್ತಾರೆ, ಈ ನೋವನ್ನು, ನೇರವಾಗಿ ಗಾಯಗಳನ್ನು ಬ್ಯಾಕ್ಟೀರಿಯಾದ ಪ್ರತಿರೋಧಕ ಮೌತ್ ವಾಶ್ ಅನ್ನು ಪ್ರತೀ ಹನ್ನೆರಡು ಘ೦ಟೆಗಳಲ್ಲಿ ಒಂದು ನಿಮಿಷದ೦ತೆ ಎರಡು ದಿನಗಳು ಬಳಸುವುದರಿ೦ದ ತಡೆಗಟ್ಟಬಹುದಾಗಿದೆ[ಸಾಕ್ಷ್ಯಾಧಾರ ಬೇಕಾಗಿದೆ]; ಬಾಯಿಯನ್ನು ತೊಳೆಯಲು ಬಳಸುವ ಬ್ಯಾಕ್ಟೀರಿಯಾದ ಪ್ರತಿರೋಧಕಗಳು ಬಾಯಿಯಲ್ಲಿಯೇ ಹಲವಾರು ನಿಮಿಷಗಳವರೆಗೆ ಉಳಿದರೆ ಅವುಗಳು ರುಚಿಯನ್ನು ಕೆಡಿಸುವುದು ಹಾಗು ಅವಶ್ಯಕವಾದ ಫ್ಲೋರಾಗಳನ್ನು ನಷ್ಟಗೊಳಿಸುತ್ತದೆ, ಆದ್ದರಿ೦ದ ಅವುಗಳನ್ನು ಚಿಕ್ಕ ಪಾತ್ರೆಗಳಲ್ಲಿ ತೆಗೆದುಕೊ೦ಡು ಬಳಸುವುದು ಉತ್ತಮ. ಸುಮಾರು 1 ಮಿಲಿಮೀಟರ್‌ಕ್ಕಿ೦ತ ಕಡಿಮೆ ಪ್ರಮಾಣ ಸಾಕಾಗುತ್ತದೆ. ಸಾಮಾನ್ಯವಾಗಿ. ಮೊದಲ ಚಿಕಿತ್ಸೆಯನ್ನು 3 ಘ೦ಟೆಗಳ ಒಳಗೆ ನೀಡಬೇಕಾಗುತ್ತದೆ.
ಚಿಕಿತ್ಸೆ
[ಬದಲಾಯಿಸಿ]ಸಿ೦ಪ್ಟಮಾಟಿಕ್ ಚಿಕಿತ್ಸೆಯು ಬಾಯಿಯ ಹುಣ್ಣಿಗೆ ಒಂದು ಪ್ರಾಥಮಿಕ ಚಿಕಿತ್ಸೆಯಾಗಿದೆ. ನಮಗೆ ಕಾಯಿಲೆಯ ಕಾರಣ ತಿಳಿದಿದ್ದರೆ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಕೊಡಲು ಸಹಾಯವಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಬಾಯಿಯ ಸ್ವಚ್ಚತೆಯನ್ನು ಕಾಪಾಡಿಕೊ೦ಡರೆ ಅದರ ಲಕ್ಷಣಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗುತ್ತದೆ. ವಿಶಿಷ್ಟವಾದ ಅಲರ್ಜಿಹೋಗಲಾಡಿಸಲು ಬಳಸುವ ಔಷಧಗಳು, ಆಂಟಾಸಿಡ್‌ಗಳು, ಕೊರ್ಟಿಕೊಸ್ಟೆರಾಯ್ಡ್‌ಗಳು ಅಥವಾ ನೋವುಳ್ಳ ಹುಣ್ಣುಗಳನ್ನು ಕಡಿಮೆಮಾಡಲು ಉಪಯೋಗಿಸುವ ಔಷಧಿಗಳು ಸಹಾ ಸಹಕಾರಿಯಾಗಬಲ್ಲವು ಪ್ಯಾರಸಿಟಮಲ್ ಅಥವಾ ಐಬುಪ್ರೊಫೆನ್ ಮತ್ತು ಲೋಕಲ್ ಅನೇಸ್ತೇಟಿಕ್ ಲೋಝೆಂಜೆಗಳು, ಪೆಯಿಂಟ್ಸ್ ಅಥವಾ ಬಾಯಿ ಮುಕ್ಕಳಿಸುವಂತಹ ಬೆಂಝೋಕೆಯಿನ್ ಮತ್ತು ಖಾರ ಅಥವಾ ಬಿಸಿಯಾದ ಪದಾಥಗಳ ಸೇವನೆಯಿಂದ ನೋವು ಕಡಿಮೆ ಮಾಡಿಕೊಳ್ಳಬಹುದು. ಬಾಯಿಯನ್ನು ಬ್ರಿನ್ (ಬಿಸಿಯಾದ ಉಪ್ಪು ನೀರು) ಕೂಡಾ ಇದರಲ್ಲಿ ಸಹಕಾರಿಯಾಗಬಲ್ಲದು. ಹಳೆಯ ಪದ್ಧತಿಯ ಪ್ರಕಾರ ಹುಣ್ಣಿನ ಮೇಲೆ ಸ್ವಲ್ಪ ಪ್ರಮಾಣದಲ್ಲಿ ವಿನೇಗರ್ ಅನ್ನು ಹಚ್ಚುವುದರಿ೦ದ ಅಲ್ಪ ಪ್ರಮಾಣದ ನೋವು ನಿವಾರಣೆಯಾಗುತ್ತದೆ. ಬಾಯಿ ಹುಣ್ಣುಗಳು ಮೂರು ವಾರಗಳಿಗಿಂತ ಹೆಚ್ಚು ಸಮಯ ಮುಂದುವರೆದಲ್ಲಿ ವೈದ್ಯಕೀಯ ವೃತ್ತಿನಿರತರಿಗೆ ತೋರಿಸಬೇಕು.[೫]
ಇವನ್ನೂ ಗಮನಿಸಿ
[ಬದಲಾಯಿಸಿ]- ಅಫತೊಯಸ್ ಹುಣ್ಣು (ಕ್ಯಾಂಕರ್ ಹುಣ್ಣುಗಳು)
- ಚಂಕ್ರೆ
- ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ (ಸರ್ಪಸುತ್ತು ತರುವ ವೈರಸ್)
- ಮ್ಯಾಜಿಕ್ ಮೌತ್ವಾಶ್
- ಸ್ಕ್ವಾಮಸ್ ಸೆಲ್ ಕಾರ್ಸಿನೋಮ
- ಸ್ಟೊಮಾಟಿಟಿಸ್
ಆಕರಗಳು
[ಬದಲಾಯಿಸಿ]- ↑ ೧.೦ ೧.೧ ೧.೨ "Mouth ulcers". North East Valley Division of General Practice. Retrieved 2006-06-18.
- ↑ ೨.೦ ೨.೧ ೨.೨ ೨.೩ ೨.೪ Sapp, J. Phillip (2004). Contemporary Oral and Maxillofacial Pathology. Mosby. ISBN 0-323-01723-1.
{{cite book}}
: Unknown parameter|coauthors=
ignored (|author=
suggested) (help) - ↑ Lesion-directed dry dosage forms of antibacterial agents for the treatment of acute mucosal infections of the oral cavity Archived 2017-02-11 ವೇಬ್ಯಾಕ್ ಮೆಷಿನ್ ನಲ್ಲಿ., US Patent Office Full-Text and Image Database, 19 ಜೂನ್ 2001.
- ↑ Orbak R, Cicek Y, Tezel A, Dogru Y (2003). "Effects of zinc treatment in patients with recurrent aphthous stomatitis". Dent Mater J. 22 (1): 21–9. PMID 12790293.
{{cite journal}}
: Unknown parameter|month=
ignored (help)CS1 maint: multiple names: authors list (link) - ↑ Van Voorhees, BW (2007-01-18). "Mouth Ulcers - Treatment". MedlinePlus. Retrieved 2008-05-08.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಬಾಯಿ ಹುಣ್ಣು ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- CS1 errors: unsupported parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 maint: multiple names: authors list
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- Articles with Open Directory Project links
- Articles that show a Medicine navs template
- ಬಾಯಿ ರೋಗ ವಿಜ್ಞಾನ
- ಒಟೊಲಾರಿಂಗೊಲಜಿ
- ಬಾಯಿ ಶಸ್ತ್ರ ಚಿಕಿತ್ಸೆ
- ಬಾಯಿ ಮತ್ತು ಮ್ಯಾಕ್ಸಿಲೊಫೇಸಿಯಲ್ ಶಸ್ತ್ರಚಿಕಿತ್ಸೆ
- ರೋಗಗಳು