ಬಜ್ಪೆ
ಬಜ್ಪೆ | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
Area | |
• Total | ೧೧೧.೧೮ km೨ (೪೨.೯೩ sq mi) |
Elevation | ೮.೮೩ m (೨೮.೯೭ ft) |
Population (2011) | |
• Total | ೯,೭೦೧ |
• ಸಾಂದ್ರತೆ | ೪೧೬.೩/km೨ (೧,೦೭೮/sq mi) |
ಭಾಷೆಗಳು | |
• ಅಧಿಕೃತ | ತುಳು, ಕನ್ನಡ |
ಸಮಯ ವಲಯ | ಯುಟಿಸಿ 5:30 (IST) |
ಅಂಚೆ ವಿಳಾಸ | ೫೭೪೧೪೨ |
ದೂರವಾಣಿ ಸಂಖ್ಯೆ | ೦೮೨೪ |
ವಾಹನ ನೋಂದಣಿ | KA-19 |
ಬಜ್ಪೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ.[೧][೨] ಇದು ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೮ ಕಿಲೋಮೀಟರ್ (೧೧ ಮೈಲಿ) ದೂರದಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬಜಪೆಯಲ್ಲಿದೆ ಮತ್ತು ಇದನ್ನು ಬಜ್ಪೆ ಏರೋಡ್ರೋಮ್ ಎಂದು ಕರೆಯಲಾಗುತ್ತದೆ. ಸಿಟಿ ಬಸ್ ಸಂಖ್ಯೆ ೪೭ ಬಜ್ಪೆಯನ್ನು ಮಂಗಳೂರು ನಗರಕ್ಕೆ ಸಂಪರ್ಕಿಸುತ್ತದೆ.[೩]ಇದನ್ನು ಬಜಪೆ ಅಂತಲೂ ಕರೆಯುತ್ತಾರೆ. ಬಜ್ಪೆ ಸುತ್ತಮುತ್ತ ಹಲವಾರು ಹಳ್ಳಿಗಳಿವೆ, ಇದು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಬಜ್ಪೆ ಕೇಂದ್ರವಾಗಿ ಕಾರ್ಯನಿರ್ವಹಿಸುವ ಹತ್ತಿರದ ಹಳ್ಳಿಗಳೆಂದರೆ ಪೆರ್ಮುದೆ , ಕಾಳಮುಂಡ್ಕೂರು ಮತ್ತು ಕಟೀಲು . ಬಜ್ಪೆಯು ಬೀಜದ ಅಪ್ಪೆ(ಬೀಜಗಳ ತಾಯಿ) ಎಂಬ ತುಳು ಪದದಿಂದ ಉತ್ಪತ್ತಿಯಾಗಿದೆ. ಹಿಂದೆ ಬಜ್ಪೆಯು ಒಂದು ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಾಗಿದ್ದರಿಂದ ಈ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ.
ಜನಸಂಖ್ಯೆ
[ಬದಲಾಯಿಸಿ]೨೦೦೧ ರ ಜನಗಣತಿಯ ಪ್ರಕಾರ, ಬಜ್ಪೆ ಯು ೧೭,೦೩೨ ಜನಸಂಖ್ಯೆಯನ್ನು ಹೊಂದಿದ್ದು. ಪುರುಷರು ೪೮% ಮತ್ತು ಮಹಿಳೆಯರು ೫೨% ಇದ್ದಾರೆ. ಬಜ್ಪೆ ೯೨% ರಷ್ಟು ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಹೆಚ್ಚಾಗಿದೆ; ಗಂಡು ಮತ್ತು ಹೆಣ್ಣು ಸಾಕ್ಷರತಾ ಪ್ರಮಾಣವು ಸಮಾನವಾಗಿರುತ್ತದೆ. ಜನಸಂಖ್ಯೆಯ ೧% ರಷ್ಟು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು.As of 2001[update]
ಶಿಕ್ಷಣ
[ಬದಲಾಯಿಸಿ]ಬಜ್ಪೆ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ನೆಲೆಯಾಗಿದೆ. ಈ ಊರಿನಲ್ಲಿರುವ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳು :
- ಸಂತ ಜೋಸೆಫರ ಪದವಿ ಪೂರ್ವ ಕಾಲೇಜು (ಹೈ ಸ್ಕೂಲ್ ಮತ್ತು ಪ್ರಿ ಯೂನಿವರ್ಸಿಟಿ)
- ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಸಂಸ್ಥೆಗಳು,ಸುಂಕದಕಟ್ಟೆ
- ಮಾರ್ನಿಂಗ್ ಸ್ಟಾರ್ (ವಿಮಾನ ನಿಲ್ದಾಣ ಹತ್ತಿರ) ಶಾಲೆ
- ಪರೋಕಿಯಲ್ ಹಿರಿಯ ಪ್ರಾಥಮಿಕ ಶಾಲೆ
- ಲಿಟ್ಲ್ ಫ್ಲವರ್ ಗರ್ಲ್ಸ್ ಹೈಸ್ಕೂಲ್
- ಪಾಪ್ಯುಲರ್ ಆಂಗ್ಲ ಮಾಧ್ಯಮ ಶಾಲೆ
- ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ
- ವಿಮಾನ ನಿಲ್ದಾಣ ಆಂಗ್ಲ ಮಾಧ್ಯಮ ಶಾಲೆ
- ಹೋಲಿ ಫ್ಯಾಮಿಲಿ ಶಾಲೆ
ಉಲ್ಲೇಖಗಳು
[ಬದಲಾಯಿಸಿ]- ↑ "Indian Trade Journal, Volume 241, Part 2". Department of Commercial Intelligence and Statistics., 1967 - India: 613. 1967.
- ↑ "Debates; Official Report". Mysore (India : State). Legislature. Legislative Assembly. 1970: 446. 1970.
- ↑ "Wiki- Kannada".
- Pages with non-numeric formatnum arguments
- Pages using the JsonConfig extension
- Short description is different from Wikidata
- Pages using infobox settlement with bad settlement type
- Pages using infobox settlement with no coordinates
- Articles containing potentially dated statements from 2001
- Articles with invalid date parameter in template
- All articles containing potentially dated statements
- ಪಟ್ಟಣ
- ಮಂಗಳೂರು ತಾಲ್ಲೂಕು
- ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು