ವಿಷಯಕ್ಕೆ ಹೋಗು

ತೀರ್ಥಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Thirthahalli
ತೀರ್ಥಹಳ್ಳಿ
Theertharajapura
Taluk
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಶಿವಮೊಗ್ಗ
ಸರ್ಕಾರ
 • MLAಆರಗ ಜ್ಞಾನೇಂದ್ರ[]
Area
 • Total೫.೯೧ km (೨.೨೮ sq mi)
Elevation
೫೯೧ m (೧,೯೩೯ ft)
Population
 (2011[])
 • Total೧೪,೩೫೭
 • ಸಾಂದ್ರತೆ೨,೪೦೦/km (೬,೩೦೦/sq mi)
ಭಾಷೆಗಳು
 • ಅಧಿಕೃತಕನ್ನಡ
ಸಮಯದ ವಲಯ
ಸಮಯ ವಲಯಯುಟಿಸಿ 5:30 (IST)
PIN
577 432
Telephone code08181
ವಾಹನ ನೋಂದಣಿKA-14
ಜಾಲತಾಣwww.thirthahallitown.gov.in
Thirthahalli
Thirthahalli ನಗರದ ಪಕ್ಷಿನೋಟ
Thirthahalli ನಗರದ ಪಕ್ಷಿನೋಟ
Bridge across the river Tunga at Thirthahalliಈ ಸೇತುವೆಯನ್ನು ಸರ್ ಎಮ್. ವಿಶ್ವೇಶರಯ್ಯನವರು ಕಟ್ಟಿಸಿದರು

Thirthahalli
ರಾಜ್ಯ
 - ಜಿಲ್ಲೆ
ಕರ್ನಾಟಕ
 - Shimoga
ನಿರ್ದೇಶಾಂಕಗಳು 13.7° N 75.23° E
ವಿಸ್ತಾರ
 - ಎತ್ತರ
5.91 km²
 - 591 ಮೀ.
ಸಮಯ ವಲಯ IST (UTC 5:30)
ಜನಸಂಖ್ಯೆ (2001)
 - ಸಾಂದ್ರತೆ
14806
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577 432
 -  08181
 - KA-14
ಅಂತರ್ಜಾಲ ತಾಣ: www.thirthahallitown.gov.in
ಕುಪ್ಪಳ್ಳಿಯ ಕವಿಶೈಲ

ತೀರ್ಥಹಳ್ಳಿ - ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತಾಲ್ಲೂಕುಗಳಲ್ಲಿ ಒಂದು ಹಾಗೂ ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ.

ಶಿವಮೊಗ್ಗ ಜಿಲ್ಲೆಯ ನೈಋತ್ಯ ತುದಿಯಲ್ಲಿದೆ ತೀರ್ಥಹಳ್ಳಿ, ಅಗ್ರಹಾರ, ಆಗುಂಬೆ, ಮುತ್ತೂರು, ಮಂಡಗದ್ದೆ ಇವು ತಾಲ್ಲೂಕಿನ ಹೋಬಳಿಗಳು. ತಾಲ್ಲೂಕಿನಲ್ಲಿ ಒಟ್ಟು 247 ಗ್ರಾಮಗಳಿವೆ. 1,247 ಚ.ಕಿಮೀ. ಜನಸಂಖ್ಯೆ 1,43,209 (2001).

ತುಂಗಾ ನದಿಯ ತೀರದಲ್ಲಿರುವ ತೀರ್ಥಹಳ್ಳಿ ಪಟ್ಟಣವು ಶಿವಮೊಗ್ಗದಿಂದ ೬೧ ಕಿಮಿ ದೂರದಲ್ಲಿದೆ. ಸಂಪೂರ್ಣವಾಗಿ ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿ ತಾಲೂಕು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು

ತೀರ್ಥಹಳ್ಳಿ ತಾಲ್ಲೂಕಿನಾದ್ಯಂತ ಸಹ್ಯಾದ್ರಿಯ ನಿತ್ಯಹರಿದ್ವರ್ಣ ದಟ್ಟ ಕಾಡು ಇದೆ. ಅಡಿಕೆ ಇಲ್ಲಿನ ಮುಖ್ಯ ಬೆಳೆಗಳಲ್ಲೊಂದು. ಅಡಿಕೆ ತೋಟಗಳಲ್ಲಿ ಉಪಬೆಳೆಗಳಾಗಿ ಏಲಕ್ಕಿ, ಕಾಳುಮೆಣಸು ಮತ್ತು ಬಾಳೆಯನ್ನು ಬೆಳೆಯುತ್ತಾರೆ.

ಭೌಗೋಳಿಕ ಮಾಹಿತಿ

[ಬದಲಾಯಿಸಿ]

ತಾಲ್ಲೂಕಿನ ಪಶ್ಚಿಮ ಭಾಗ ಪಶ್ಚಿಮ ಘಟ್ಟದ ಪ್ರದೇಶ. ಕವಲೇದುರ್ಗ (969 ಮೀ.), ಕಬ್ಬಿಣದ ಗುಡ್ಡ ಮತ್ತು ಕುಂದರಗುಡ್ಡ ಇಲ್ಲಿಯ ಬೆಟ್ಟಗಳು. ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ಆಗುಂಬೆ ಘಾಟು ಇರುವುದು ತಾಲ್ಲೂಕಿನ ನೈಋತ್ಯ ಭಾಗದಲ್ಲಿ. ಕಬ್ಬಿಣದ ಗುಡ್ಡದ ಕಬ್ಬಿಣ ಅದಿರು ಉತ್ತಮ ದರ್ಜೆಯದು. ತಾಲ್ಲೂಕು ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ. ತುಂಗಾ ಈ ತಾಲ್ಲೂಕಿನ ಪ್ರಧಾನ ನದಿ. ಮಾಲತಿ ಮುಂತಾದ ಹಳ್ಳಗಳು ಇದನ್ನು ಸೇರುತ್ತವೆ. ಪಶ್ಚಿಮ ಭಾಗದ ದಟ್ಟ ಕಾಡು ಇತ್ತೀಚೆಗೆ ಕಡಮೆಯಾಗುತ್ತಿದೆ. ಅಡಕೆ ತೋಟ ಮತ್ತು ಎಲೆಗೊಬ್ಬರಕ್ಕಾಗಿ ಕಾಡನ್ನು ಸವರುವುದು ಹೆಚ್ಚಾಗಿದೆ. ಇಲ್ಲಿಯ ಕಾಡಿನಲ್ಲಿ ಕರಿಮರ, ಹೊನ್ನೆ, ತೇಗ, ಗಂಧ, ನಂದಿ ಮುಂತಾದ ಬೆಲೆಬಾಳುವ ಮರಗಳು ಬೆಳೆಯುತ್ತವೆ. ಕಾಡುಕೋಣ, ಹಂದಿ, ಹುಲಿ, ಚಿರತೆ, ಕರಡಿ ಇತ್ಯಾದಿ ಪ್ರಾಣಿಗಳಿವೆ. ಬೆಟ್ಟ ಪ್ರದೇಶದಲ್ಲಿ ಜೇಡಿಮಣ್ಣು ಇದ್ದರೆ, ಉತ್ತರ ಭಾಗದ ಬಯಲಿನಲ್ಲಿ ಕರಿಮಣ್ಣು ಹೆಚ್ಚು. ಪ್ರದೇಶಕ್ಕನುಗುಣವಾಗಿ ಮಳೆ ವ್ಯತ್ಯಾಸವಾಗುತ್ತದೆ. ಆಗುಂಬೆಯಲ್ಲಿ ವಾರ್ಷಿಕ ಮಳೆ ಸು. 8,051 ಮಿಮೀ. ತೀರ್ಥಹಳ್ಳಿಯಲ್ಲಿ ಸು. 2,979 ಮಿಮೀ. ಪೂರ್ವಕ್ಕೆ ಹೋದಂತೆ ಮಳೆ ಇನ್ನೂ ಕಡಿಮೆ.

ತೀರ್ಥಹಳ್ಳಿಯಲ್ಲಿ ಬಹುತೇಕರು ಕನ್ನಡ ಭಾಷೆ ಮಾತನಾಡುತ್ತಾರೆ.ಜತೆಗೆ ತುಳು ಭಾಷಿಗರು ಸಹ ಬಹಳಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ..

ಕೃಷಿ ಮತ್ತು ಜೇನುಸಾಕಣೆ

[ಬದಲಾಯಿಸಿ]

ಬತ್ತ, ಅಡಕೆ, ಏಲಕ್ಕಿ, ಮೆಣಸು ಇಲ್ಲಿಯ ಮುಖ್ಯ ಬೆಳೆಗಳು. ತಾಲ್ಲೂಕಿನ ಬೇರೆ ಬೇರೆ ಭಾಗಗಳಲ್ಲಿ ಭೂಮಿ ಮತ್ತು ನೀರಾವರಿ ಸೌಲಭ್ಯವನ್ನನುಸರಿಸಿ ರಾಗಿ, ಜೋಳ, ತೊಗರಿ, ಕಬ್ಬು, ಮೆಣಸಿನ ಕಾಯಿಗಳನ್ನು ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ಜೇನುಸಾಕಣೆ ತುಂಬ ಜನಪ್ರಿಯವಾಗಿದೆ. ತೀರ್ಥಹಳ್ಳಿಯಲ್ಲಿರುವ ಜೇನು ಸಾಕಣೆದಾರರ ಸಹಕಾರ ಸಂಘ ಇಡೀ ಜಿಲ್ಲೆಯಲ್ಲಿ ಮಾತ್ರವಲ್ಲದೆ ಪಕ್ಕದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ ಹಾಗೂ ಶೃಂಗೇರಿ ತಾಲ್ಲೂಕುಗಳಲ್ಲೂ ತನ್ನ ಕ್ಷೇತ್ರವನ್ನು ವಿಸ್ತರಿಸಿದೆ. ಈ ಸಂಘ 1971-72 ಮತ್ತು 1973-74ರ ಅವಧಿಯಲ್ಲಿ 13,215 ಕೆಜಿ. ಜೇನನ್ನು ಉತ್ಪಾದಿಸಿತ್ತು.

ಸಾರಿಗೆ-ಸಂಪರ್ಕ

[ಬದಲಾಯಿಸಿ]

ತಾಲ್ಲೂಕಿನಲ್ಲಿ ರೈಲು ಮಾರ್ಗ ಇಲ್ಲ. ಆದರೆ ಮುಖ್ಯ ಊರುಗಳಿಗ ಒಳ್ಳೆಯ ರಸ್ತೆ ಸಂಪರ್ಕ ಇದೆ. ತೀರ್ಥಹಳ್ಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವ ಆಗುಂಬೆ ಘಾಟಿನ ರಸ್ತೆ ಒಂದು ಮುಖ್ಯ ಮಾರ್ಗ. ತೀರ್ಥಹಳ್ಳಿಯಿಂದ ಬೇರೆ ಕಡೆ ಹೋಗುವ ಇತರ ರಸ್ತೆಗಳೂ ಇವೆ.

ತಾಲ್ಲೂಕಿನ ಮುಖ್ಯ ಸ್ಥಳಗಳು.

[ಬದಲಾಯಿಸಿ]

ಅರಗ (ಜ.ಸಂ. 709), ಅಗ್ರಹಾರ, ಕವಲೇದುರ್ಗ, ಮಂಡಗದ್ದೆ, ಮುತ್ತೂರು, ಮೇಗರವಳ್ಳಿ (2,417) ಮುಂತಾದುವು ತಾಲ್ಲೂಕು ಮುಖ್ಯ ಸ್ಥಳಗಳು. ಆಗುಂಬೆ ಘಾಟು ಪ್ರಕೃತಿ ಸೌಂದರ್ಯದ ಬೀಡು. ಇಲ್ಲಿಯ ಸೂರ್ಯಾಸ್ತದ ಸೊಬಗನ್ನು ಸವಿಯಲು ಬರುವ ಪ್ರವಾಸಿಗರು ಅನೇಕ. ಅರಗ ಅಲ್ಲಿರುವ ದೇವಾಲಯಗಳಿಗಾಗಿ ಪ್ರಸಿದ್ಧ. ಅದು ಐತಿಹಾಸಿಕ ಸ್ಥಳವೂ ಹೌದು. ಕವಲೇದುರ್ಗ ಪಾಂಡವರಿದ್ದ ಕಾಮ್ಯಕವನವೆಂದು ಪ್ರತೀತಿ. ಇದನ್ನು ಭುವನಗಿರಿದುರ್ಗವೆಂದೂ ಕರೆಯುತ್ತಾರೆ. 1882ರವರೆಗೆ ಇದು ತಾಲ್ಲೂಕಿನ ಕೇಂದ್ರವಾಗಿತ್ತು. ಇಲ್ಲಿ ವಿರೂಪಾಕ್ಷ, ವಿಜಯವಿಠಲ, ವೀರಭದ್ರ ಮತ್ತು ಭುವನೇಶ್ವರಿ ದೇವಾಲಯಗಳಿವೆ. ಇದು ಕೆಳದಿ ನಾಯಕರ ಬೀಡಾಗಿತ್ತು. ಇದು ಬಳಪದ ಕಲ್ಲಿನ ವಸ್ತುಗಳ ತಯಾರಿಕೆಗೆ ಪ್ರಸಿದ್ಧವಾಗಿದೆ. ಮಂಡಗದ್ದೆ ಇನ್ನೊಂದು ಮುಖ್ಯ ಸ್ಥಳ. ಊರಿನ ಸಮೀಪದಲ್ಲಿ ತುಂಗಾನದಿಯ ದಡದಲ್ಲಿ ಒಂದು ಪಕ್ಷಿಧಾಮವಿದೆ. ಕೋಣಂದೂರು (2,690) ಈ ತಾಲ್ಲೂಕಿನ ಇನ್ನೊಂದು ದೊಡ್ಡ ಸ್ಥಳ.

ತೀರ್ಥಹಳ್ಳಿ ಪಟ್ಟಣ

[ಬದಲಾಯಿಸಿ]

ತಾಲ್ಲೂಕಿನ ಆಡಳಿತ ಕೇಂದ್ರ ತೀರ್ಥಹಳ್ಳಿ. ಜನಸಂಖ್ಯೆ 14,809 (2001). ಮಲೆನಾಡಿನ ಪ್ರಸಿದ್ಧ ಊರಾದ ಇದು 610 ಮೀ. ಎತ್ತರದಲ್ಲಿದೆ. ತುಂಗಾನದಿಯ ಎಡದಂಡೆಯ ಮೇಲಿರುವ ಈ ಪಟ್ಟಣ ಶಿವಮೊಗ್ಗದ ನೈಋತ್ಯಕ್ಕೆ ಸು. 65 ಕಿಮೀ. ದೂರದಲ್ಲಿದೆ. ಇಲ್ಲಿರುವ ಅನೇಕ ತೀರ್ಥಗಳಿಂದ ಇದಕ್ಕೆ ತೀರ್ಥಹಳ್ಳಿ ಎಂಬ ಹೆಸರು ಬಂದಿದೆ. ಪರಶುರಾಮ ತನ್ನ ರಕ್ತಕೊಡಲಿಯನ್ನು ಇಲ್ಲಿಯೇ ತೊಳೆದನೆಂದು ಪ್ರತೀತಿ. ಇಲ್ಲೊಂದು ರಾಮೇಶ್ವರ ದೇವಾಲಯವಿದೆ. ಇಲ್ಲಿರುವ ರಾಮಚಂದ್ರಪುರ ಮಠ ಮತ್ತು ಪುತ್ತಿಗೆ ಮಠಗಳು ಸಾಕಷ್ಟು ಪ್ರಸಿದ್ಧವಾದವು. ಊರಿನ ಸುತ್ತ ಅನೇಕ ಅಡಕೆ ತೋಟಗಳಿವೆ. ಇದು ತಾಲ್ಲೂಕಿನ ವ್ಯಾಪಾರ ಕೇಂದ್ರ. ಅಡಕೆ, ಏಲಕ್ಕಿ, ಬತ್ತ ಇವು ಹೆಚ್ಚಾಗಿ ವ್ಯಾಪಾರವಾಗುತ್ತದೆ. ಪಟ್ಟಣದಲ್ಲಿ ಅನೇಕ ಗಿರಣಿಗಳೂ ಮರ ಕೊಯ್ಯುವ ಕಾರ್ಖಾನೆಗಳೂ ಇವೆ. ರಾಮೇಶ್ವರ ಜಾತ್ರೆಯಲ್ಲಿ ದನಗಳ ವ್ಯಾಪಾರ ಹೆಚ್ಚು. ಬೆಳ್ಳಿ ವಸ್ತುಗಳ ತಯಾರಿಕೆಗೆ ಇದು ಮೊದಲಿನಿಂದಲೂ ಪ್ರಸಿದ್ಧ ಸ್ಥಳ. ಇಲ್ಲಿ ಚರ್ಮ, ರಬ್ಬರ್ ವಸ್ತುಗಳೂ ತಯಾರಾಗುತ್ತವೆ. ಈ ಪಟ್ಟಣದಲ್ಲಿ ಒಂದು ಅಡಕೆ ಸಂಶೋಧನ ಸಂಸ್ಥೆ ಇದೆ. ತೀರ್ಥಹಳ್ಳಿಯಲ್ಲಿ ಸರ್ಕಾರಿ ಕಚೇರಿಗಳೂ ಶಾಲಾ ಕಾಲೇಜುಗಳೂ ಅಂಚೆ, ವಿದ್ಯುತ್ತು ಮುಂತಾದ ಸೌಲಭ್ಯಗಳೂ ಇವೆ. ಬಹು ವೇಗವಾಗಿ ಬೆಳೆಯುತ್ತಿರುವ ಈ ಪಟ್ಟಣ ಈಗ ತುಂಗಾ ನದಿಯ ಎರಡು ದಂಡೆಗಳಲ್ಲೂ ಹರಡಿಕೊಂಡಿದೆ.

ಕನ್ನಡದ ಪ್ರಮುಖ ಲೇಖಕರು

[ಬದಲಾಯಿಸಿ]

ಕನ್ನಡ ಸಿನಿಮಾ ನಟರು

[ಬದಲಾಯಿಸಿ]

ಪ್ರಸಿದ್ಧ ಕನ್ನಡ ಸಿನಿಮಾ ನಟ ದಿಗ೦ತ್ ಹಾಗು ಸಿನಿಮಾ ಸಾಹಿತಿ ಕವಿರಾಜ್ ಸಹ ತೀರ್ಥಹಳ್ಳಿ ತಾಲ್ಲೂಕಿನವರು. ದಿಗ೦ತ್ ಅವರನ್ನು ಸಿನಿಮಾ ಜಗತ್ತಿಗೆ ಪರಿಚಯಿಸಿದ ಕೂಡ್ಲು ರಾಮಕೃಷ್ಣ ಅವರೂ ತೀರ್ಥಹಳ್ಳಿಯವರು. ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಈ ಪ್ರದೇಶದ ಜನರು ಯಾವುಗಲು ಮುಂದು. ಕೃಷಿ ಋಷಿ ಪುರೋಷತ್ತಮ ರಾವ್ ಅವರು ಮಾಡಿದ ಸಾಧನೆ ಒಂದು ಬೆಳ್ಳಿ ಚುಕ್ಕಿ.

ವಿಶೇಷಗಳು

[ಬದಲಾಯಿಸಿ]
  • ವೀಕ್ಷಣೆಗಾಗಿ ಕವಲೇ ದುರ್ಗ (೧೮ ಕಿ.ಮೀ.), ಕುಂದಾದ್ರಿ ಪರ್ವತ (೨೪ ಕಿ.ಮೀ), ಕುಪ್ಪಳ್ಳಿ(೧೭ ಕಿ.ಮೀ.), ಆಗುಂಬೆ(೩೨ ಕಿ.ಮೀ.), ಬರ್ಕಣ ಜಲಪಾತ(೩೫ ಕಿ. ಮೀ.), ಶರವಾತಿ ನದಿಯ ಉಗಮ ಸ್ಥಾನ - ಅಂಬುತೀರ್ಥ(೧೮ಕಿ. ಮೀ.) ಮಂಡಗದ್ದೆ(೩೦ಕಿ.ಮೀ) ಹಾಗು ಚಿಬ್ಬಲಗುಡ್ಡೆ(೧೦ ಕಿ.ಮೀ) ಈ ಜಾಗಗಳನ್ನು ನೋಡಬಹುದು. ತೀರ್ಥಹಳ್ಳಿ ಪೌರಾಣಿಕ ಮಹತ್ವವನ್ನು ಹೊಂದಿರುವ ಪುಣ್ಯಕ್ಷೇತ್ರವಾಗಿದೆ.
  • ಇಲ್ಲಿಯ ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವಾಲಯ ಪವಿತ್ರ ತುಂಗಾ ನದಿ ದಂಡೆಯ ಮೇಲ್ಭಾಗದಲ್ಲಿದೆ. ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸ್ವತಃ ಮಹಾಮುನಿ ಶ್ರೀಪರಶುರಾಮರವರೇ ಪ್ರತಿಷ್ಠಾಪಿಸಿದರೆಂಬ ಪ್ರತೀತಿಯಿದೆ. ಗರ್ಭಗುಡಿಯ ಹೊರಭಾಗದಲ್ಲಿ ದುರ್ಗಿ ಹಾಗೂ ಗಣಪತಿಯ ವಿಗ್ರಹಗಳಿವೆ.ಇದು ತಾಲ್ಲೂಕಿನ ಪ್ರಮುಖ ಮುಜುರಾಹಿ ದೇಗುಲವಾಗಿದೆ.ಪರಶುರಾಮ ತನ್ನ ಕೊಡಲಿಯನ್ನು ಪವಿತ್ರ ತುಂಗಾ ನದಿಯ ನೀರಿನಿಂದ ತೊಳೆದ ಕಾರಣ ಈ ಸ್ಥಳಕ್ಕೆ 'ತೀರ್ಥ'ಹಳ್ಳಿ ಎಂದು ಹೆಸರು ಬಂದಿದೆ ಎಂಬ ಪ್ರತೀತಿ ಇದೆ.

ವಿದ್ಯಾಸಂಸ್ಥೆಗಳು

[ಬದಲಾಯಿಸಿ]

ಮಾಧ್ಯಮಗಳು

[ಬದಲಾಯಿಸಿ]

ತೀರ್ಥಹಳ್ಳಿ ಬಂಧು

ಸಹ್ಯಾದ್ರಿ ವಾರ್ತೆ

ನಮ್ಮೂರ್ ಎಕ್ಸಪ್ರೇಸ್ ತೀರ್ಥಹಳ್ಳಿ

ಛಲಗಾರ

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: