ವಿಷಯಕ್ಕೆ ಹೋಗು

ಡೊರಾಯಾಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೊರಾಯಾಕಿಯ ಒಳಭಾಗ

ಡೊರಾಯಾಕಿ (どら焼き, どらやき, 銅鑼焼き, ドラ焼き) ಒಂದು ಬಗೆಯ ಜಾಪಾನೀ ಮಿಠಾಯಿಯಾಗಿದ್ದು ಕೆಂಪು ಅವರೆಯ ಪ್ಯಾನ್‍ಕೇಕ್ ಆಗಿದೆ. ಇದು ಕ್ಯಾಸ್ಟೆಲಾದಿಂದ ತಯಾರಿಸಲಾದ ಎರಡು ಚಿಕ್ಕ ಪ್ಯಾನ್‍ಕೇಕ್‍ನಂತಹ ಪ್ಯಾಟಿಗಳನ್ನು ಹೊಂದಿದ್ದು ನಡುವೆ ಸಿಹಿ ಅಜ಼ೂಕಿ ಅವರೆಯ ಪೇಸ್ಟ್‌ನ ಹೂರಣವನ್ನು ಹೊಂದಿರುತ್ತದೆ.[][].

ಕಾನ್ಸಾಯ್ ಪ್ರದೇಶದಲ್ಲಿ ಈ ಸಿಹಿ ತಿನಿಸನ್ನು ಹಲವುವೇಳೆ ಮಿಕಾಸಾ (三笠) ಎಂದು ಕರೆಯಲಾಗುತ್ತದೆ. ಜಪಾನ್‍ನ ನಾರಾದಲ್ಲಿ, ಸುಮಾರು ೩೦ ಸೆ.ಮಿ. ವ್ಯಾಸದ ಹೆಚ್ಚು ದೊಡ್ಡ ಮಿಕಾಸಾವನ್ನು ತಯಾರಿಸಲಾಗುತ್ತದೆ.[]

ಒಂದು ಜಾಪಾನೀ ಮಂಗಾ ಮತ್ತು ಆ್ಯನಮೆ ಪಾತ್ರವಾದ ಡೊರೇಮಾನ್ ಡೊರಾಯಾಕಿಯನ್ನು ಇಷ್ಟಪಡುತ್ತದೆ ಮತ್ತು ಹಾಗಾಗಿ ಇದನ್ನು ಅವನ ಅಚ್ಚುಮೆಚ್ಚಿನ ಆಹಾರವಾಗಿ ಚಿತ್ರಿಸಲಾಗಿದೆ. ಅದು ಆ ಸರಣಿಯಾದ್ಯಂತ ಹಲವು ಬಾರಿ ಕಥಾವಸ್ತುವಿನ ಸಾಧನವಾಗಿದೆ. ಡೊರೇಮಾನ್ ಡೊರಾಯಾಕಿಯ ವ್ಯಸನಿಯಾಗಿದ್ದು ಅವುಗಳನ್ನು ಒಳಗೊಂಡ ಯಾವುದೇ ಬಲೆಗೆ ಮರುಳಾಗುತ್ತಾನೆ.

ಉಲ್ಲೇಖಗಳು

[ಬದಲಾಯಿಸಿ]
  1. "Dori-yaki: Bon Appetit!". NIPPONIA No. 40. Web Japan.
  2. Yoshizuka, Setsuko. "Dorayaki". About.com Japanese Food. About.com. Archived from the original on 12 ಜುಲೈ 2014. Retrieved 24 February 2012.
  3. Blankestijn, Ad. "Monaka & Dorayaki". Japanese Food Dictionary. Retrieved 24 February 2012.

ಹೊರಗಿನ ಕೊಂಡಿಗಳು

[ಬದಲಾಯಿಸಿ]