ವಿಷಯಕ್ಕೆ ಹೋಗು

ಕೇಶವರೆಡ್ಡಿ ಹಂದ್ರಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇಶವರೆಡ್ಡಿ ಹಂದ್ರಾಳ ಅವರು ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರು.

ಕೇಶವರೆಡ್ಡಿಯವರು 1957 ಜುಲೈ 22ರಂದು ಮಧುಗಿರಿ ತಾಲ್ಲೂಕಿನ ಹಂದ್ರಾಳದಲ್ಲಿ ಜನಿಸಿದರು.

ಶಿಕ್ಷಣ, ಹೋರಾಟ

[ಬದಲಾಯಿಸಿ]

ಕೇಶವರೆಡ್ಡಿಯವರು 7ನೇ ತರಗತಿಯಲ್ಲಿ ರ್‍ಯಾಂಕ್ ಪಡೆದರು. ನಂತರ ಬೆಂಗಳೂರಿನ ಚಿಕ್ಕಪೇಟೆಯಲ್ಲಿದ್ದ ಭಾರತೀಯ ವಿದ್ಯಾಶಾಲೆಗೆ ಸೇರಿದರು. ವಾಟಾಳ್ ನಾಗರಾಜ್ ಅವರ ಪರಿಚಯವಾಗಿ ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಆನಂದರಾವ್ ಸರ್ಕಲ್‍ನಲ್ಲಿದ್ದ ಎಸ್.ಜೆ.ಆರ್.ಸಿ.ಯಲ್ಲಿ ಪಿ.ಯು.ಸಿ.ಗೆ ಸೇರಿಕೊಂಡರು. ಆ ಸಮಯದಲ್ಲಿ ಜೆ.ಪಿ. ಚಳವಳಿಯಲ್ಲಿ ಭಾಗವಹಿಸಿದರು. ದಲಿತ, ರೈತ ಚಳವಳಿ ಹಾಗೂ ಗೋಕಾಕ್ ಚಳವಳಿಯಲ್ಲೂ ಭಾಗವಹಿಸಿದರು. 1981ರಲ್ಲಿ ಪ್ರಥಮ ದರ್ಜೆಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪಾಸಾದರು.

ವೃತ್ತಿಜೀವನ

[ಬದಲಾಯಿಸಿ]

ಕೇಶವರೆಡ್ಡಿಯವರು ಆರು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದರು. 1987ರಲ್ಲಿ ಕೆ.ಎ.ಎಸ್. ಪಾಸು ಮಾಢಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹಾಗೂ ಉಪ ಆಯುಕ್ತರಾಗಿ ಕೆಲಸ ಮಾಡಿದರು.

ಸಾಂಸಾರಿಕ ಜೀವನ

[ಬದಲಾಯಿಸಿ]

ಕೇಶವರೆಡ್ಡಿಯವರು ಮದ್ದೂರಿನ ಚಂದ್ರಕಲಾ ಅವರನ್ನು ಪ್ರೀತಿಸಿ ಸರಳ ವಿವಾಹ ಮಾಡಿಕೊಂಡರು. ಅವರಿಗೆ ಕ್ರಾಂತಿ, ಸಿರಿವೆನ್ನೆಲು ಎಂಬ ಇಬ್ಬರು ಮಕ್ಕಳಿದ್ದಾರೆ.

ಕೃತಿಗಳು

[ಬದಲಾಯಿಸಿ]

ಸಣ್ಣಕಥೆಗಳು

[ಬದಲಾಯಿಸಿ]

ಕೇಶವರೆಡ್ಡಿಯವರು ಸುಮಾರು 500 ಕಥೆಗಳನ್ನು ಬರೆದಿದ್ದಾರೆ.

ಕವನಸಂಕಲನ

[ಬದಲಾಯಿಸಿ]
  1. ನನ್ನ ಕ್ರಾಂತಿಯ ಹುಡುಗಿ

ಪ್ರಬಂಧ ಸಂಕಲನಗಳು

[ಬದಲಾಯಿಸಿ]
  1. ಒಕ್ಕಲ ಒನಪು
  2. ರಾಜಧಾನಿಯ ರಸ್ತೆಗಳಲ್ಲಿ
  3. ಮರೆತ ಭಾರತ
  4. ನೆಲದ ಕಣ್ಣು

ಪ್ರಶಸ್ತಿಗಳು

[ಬದಲಾಯಿಸಿ]
  1. ಮಾಸ್ತಿ ಕಥಾ ಪುರಸ್ಕಾರ
  2. ಪುಸ್ತಕ ಸೊಗಸು
  3. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2005, 2006)