ವಿಷಯಕ್ಕೆ ಹೋಗು

ಕವಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರವಾಹ (ಫ್ಲೋ) ನಿಯಂತ್ರಣ ಸಾಧನ (ವಾಲ್ವ್‌). ಯಾವುದೇ ನಾಳದ ಮುಖಾಂತರ ಹರಿಯುವ ದ್ರವವನ್ನು ಒಂದು ದಿಕ್ಕಿನಲ್ಲಿ ಮಾತ್ರ ಹರಿಯುವಂತೆ ಮಾಡುವ ಸಾಧನ. ತರಲಗಳು (ಫ್ಲೋಯಿಡ್ಸ್‌), ದ್ರವಗಳು, ಅನಿಲಗಳು ಎಲ್ಲವೂ ಪ್ರವಾಹಿಗಳೇ. ಆದ್ದರಿಂದ ಚಾಲ್ತಿಯಲ್ಲಿರುವ ಎಲ್ಲ ವಿಧದ ಯಂತ್ರೋಪಕರಣಗಳಲ್ಲಿಯೂ ಕವಾಟಗಳು ಅವಿಭಾಜ್ಯ ಅಂಗಗಳು. ಬಾಗಿಲು ಎಂಬ ಪದವನ್ನು ಇದಕ್ಕೆ ಸಮಾನಾರ್ಥವಾಗಿ ಬಳಸುವುದಿದೆ.

ನೀರಾವರಿ ಕಾರ್ಯಗಳಲ್ಲಿ ನಾಲೆಗಳಲ್ಲಿ ನೀರಿನ ಪ್ರವಾಹವನ್ನು ನಿಯಂತ್ರಿಸಲು ಬಾಗಿಲುಗಳ ಉಪಯೋಗ ತೀರ ಅವಶ್ಯ. ಈ ಬಾಗಿಲುಗಳ ರಚನೆ, ವಿನ್ಯಾಸ ಮೊದಲಾದ ವಿವರಗಳು ಆಯಾ ಸಂದರ್ಭದ ಪರಿಸ್ಥಿತಿಗಳನ್ನು ಅನುಸರಿಸಿ ಇವೆ. ಉದಾಹರಣೆಗೆ ಒಂದು ದೊಡ್ಡ ಕಟ್ಟೆಯ ಜಲಾಶಯದಲ್ಲಿ ಸಂಗ್ರಹವಾದ ನೀರಿನ ಮೊತ್ತ ಸಾಕಷ್ಟು ಇರುವಾಗ ಅದರ ಒತ್ತಡ ಅಧಿಕವಾಗಿರುತ್ತದೆ. ಇಂಥಲ್ಲಿ ಬಾಗಿಲುಗಳು ಸುಭದ್ರವಾಗಿರಬೇಕು; ಮತ್ತು ಅವುಗಳ ಕಾರ್ಯಚರಣೆ ಸಲೀಸಾಗಿ ಆಗುವಂತಿರಬೇಕು. ಇಲ್ಲಿ ಲೋಹರಚಿತ ಬಾಗಿಲುಗಳನ್ನು ಬಳಸುತ್ತಾರೆ; ಅವುಗಳ ಚಲನೆಯನ್ನು ಯಾಂತ್ರಿಕವಾಗಿ ನಿಯಂತ್ರಿಸುತ್ತಾರೆ.

"https://kn.wikipedia.org/w/index.php?title=ಕವಾಟ&oldid=615561" ಇಂದ ಪಡೆಯಲ್ಪಟ್ಟಿದೆ