ವಿಷಯಕ್ಕೆ ಹೋಗು

ಕಂಬರ್ಲ್ಯಾಂಡ್, ರಿಚರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಬರ್ಲ್ಯಾಂಡ್, ರಿಚರ್ಡ್ : 1732-1811. ಗೋಲ್ಡ್‌ಸ್ಮಿತ್, ಪೆರಿಡನ್, ಗ್ಯಾರಿಕ್ರ ಸಮಕಾಲೀನ ಇಂಗ್ಲಿಷ್ ನಾಟಕಕಾರ, ಆ ಕಾಲಕ್ಕೆ ಬಹುಜನ ಪ್ರಿಯವಾದ ಭಾವನಾಶೀಲ ಕಾಮೆಡಿಗಳನ್ನು ಬರೆದ ಖ್ಯಾತಿ ಇವನದು.

ಬದುಕು

[ಬದಲಾಯಿಸಿ]

ಕೇಂಬ್ರಿಜ್ ಟ್ರಿನಿಟಿ ಕಾಲೇಜಿನಲ್ಲಿ ಪದವೀಧರನಾದ ಈತ ಕೆಲವು ಕಾಲ ಹ್ಯಾಲಿ ಫಾಕ್ಸ್‌ನ ಅರ್ಲ್ ಅವರ ಕಾರ್ಯದರ್ಶಿಯಾಗಿದ್ದ. ಅನಂತರ ವಾಣಿಜ್ಯ ಇಲಾಖೆಯಲ್ಲಿ ಕೆಲಸಮಾಡುತ್ತಿದ್ದು ನಿವೃತ್ತನಾದ.

ಸಾಹಿತ್ಯ

[ಬದಲಾಯಿಸಿ]

18ನೆಯ ಶತಕದಲ್ಲಿ ಯಾವ ರಂಗಮಂದಿರದಲ್ಲಿ ನೋಡಿದರೂ ಯಶಸ್ವಿಯಾಗಿ ಪ್ರದರ್ಶಿತವಾದ ನಾಟಕ ಎಂದರೆ ಇವರ ದಿ ವೆಸ್ಟ್‌ ಇಂಡಿಯನ್ (1771) ಎಂಬುದು, ಇವನ ಇನ್ನೊಂದು ಪ್ರಸಿದ್ಧ ನಾಟಕ ದಿ ಬ್ರದರ್ಸ್. 

ನಿವೃತ್ತನಾದ ಮೇಲೆ ಸಂಪುರ್ಣವಾಗಿ ಸಾಹಿತ್ಯಕ್ಕೆ ಸಮಯವನ್ನು ವಿನಿಯೋಗಿಸುತ್ತ ಕೆಲವು ಕಾದಂಬರಿಗಳನ್ನೂ ಧರ್ಮಬೋಧಕ ಕವನಗಳನ್ನೂ ಬರೆದ. ಆದರೆ ಅವು ಯಾವುದರಲ್ಲೂ ಮಹತ್ವದ ಗುಣ ಇಲ್ಲ. ಮೆಮಾಯರ್ಸ್‌ ಬರೆದ. ಆದರೆ ಅವು ಯಾವುದರಲ್ಲೂ ಮಹತ್ವ್ವದ ಗುಣ ಇಲ್ಲ. ಮೆಮಾಯರ್ಸ್‌ ಎಂಬ ಈತನ ಆತ್ಮಕಥಾನಕ ಗ್ರಂಥ ಚೆನ್ನಾಗಿದೆ. ಕಂಬರ್ಲ್ಯಾಂಡನ ವಿಶೇಷತೆ ಇರುವುದೆಲ್ಲ ಆತನ ಕಾಮೆಡಿಗಳಲ್ಲಿ. ಈತ ಬರೆದ ಕೆಲವು ರುದ್ರನಾಟಕಗಳಲ್ಲಿ ದಿ ಜ್ಯೂ ಎಂಬುದು ಚೆನ್ನಾಗಿದೆ.

ದಿ ಅಬ್ಸರ್ವರ್ ಎಂಬ ಪ್ರಬಂಧ ಸಂಕಲನದಲ್ಲಿ ತಾನು ನೋಡಿದ ಜನರ, ಸಮಾಜ ಜೀವನದ ಚಿತ್ರಗಳನ್ನು ಈತ ಕೊಡುತ್ತಾನೆ. ಈತನ ಸೂಕ್ಷ್ಮ ಅವಲೋಕನಶಕ್ತಿ ಮೆಚ್ಚುವಂಥದಾದರೂ ಅತಿ ಆತ್ಮನಿಷ್ಠವಾದ ಇಲ್ಲಿನ ಬರೆವಣಿಗೆ ಓದುಗರಿಗೆ ಹಿಡಿಸುವುದಿಲ್ಲ. ಷೆರಿಡನ್ ತನ್ನ ನಾಟಕದಲ್ಲಿ ಸರ್ ಫ್ರೆಟ್ಫುಲ್ ಎಂಬ ಪಾತ್ರವನ್ನು ಸೃಷ್ಟಿಸಿ ಕಂಬರ್ಲ್ಯಾಂಡನನ್ನು ಲೇವಡಿಮಾಡಿದ್ದಾನೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: