ಒಂದೆಲಗ
ಒಂದೆಲಗ | |
---|---|
Scientific classification | |
ಸಾಮ್ರಾಜ್ಯ: | plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಕುಲ: | |
ಪ್ರಜಾತಿ: | C. asiatica
|
Binomial name | |
Centella asiatica | |
Synonyms[೧] | |
ಒಂದೆಲಗ ಅಥವಾ (ಬ್ರಾಹ್ಮಿ) ಸರಸ್ವತೀ ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಕರಾವಳಿ ಪರಿಸರದಲ್ಲಿ ಭತ್ತದ ಗದ್ದೆಗಳ ಬದಿಯ ಜೌಗು ಪ್ರದೇಶದಲ್ಲಿ, ಅಡಿಕೆತೋಟಗಳಲ್ಲೂ ಹೇರಳವಾಗಿ ಬೆಳೆಯುತ್ತದೆ. ಕಾಂಡವು ನೆಲದ ಮೇಲೆ ಬಳ್ಳಿಯಂತೆ ಹರಡಿಕೊಂಡು ೩,೪ ಅಂಗುಲ ಎತ್ತರಕ್ಕೆ ಬೆಳೆಯುತ್ತದೆ.ಎಲೆಗಳು ಹಸಿರು ಬಣ್ಣದಿಂದ ಕೂಡಿ ದುಂಡಗಾಗಿರುತ್ತವೆ. ಬ್ರಾಹ್ಮಿಯಲ್ಲಿ ಇನ್ನೊಂದು ಬಗೆ ಇದೆ. ಅದು-ಬ್ರಾಹ್ಮಿ, ಅದಕ್ಕೆ ಗೋಳಿಸೊಪ್ಪು ಎನ್ನುವರು. ಅಡಿಗೆಗೆ ಉಪಯೋಗಿಸಿ ಸಾಸು, ಪಲ್ಯೆ ಮಾಡುವರು; ಒಂದೆಲಗಕ್ಕೆ ಹಿಂದಿ ಮತ್ತು ಸಂಸ್ಕೃತದಲ್ಲಿ ಮಂಡೂಕ ಪರ್ಣಿ- ಎಂದು ಕರೆಯುವರು.
ಸುಶ್ರುತ ಸಂಹಿತೆಯಲ್ಲಿಯೂ ಬ್ರಾಹ್ಮೀಯ ಉಲ್ಲೇಖವಿದೆ, ಏಷ್ಯಾ ಇದರ ಮೂಲಸ್ಥಾನವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಚೀನಾ ಹಾಗೂ ಆಫ್ರಿಕಾಗಳಲ್ಲಿ ಕೂಡಾ ಇದು ಪಾರಂಪರಿಕ ಔಷಧಿಯಾಗಿ ಬಳಕೆಯಲ್ಲಿದೆ.ಇದರ ವೈಜ್ಞಾನಿಕ ಹೆಸರು ಸೆಂಟಿಲ್ಲಾ ಏಸಿಯಾಟಿಕ (centella asiatica) ಎಂದು. ಕನ್ನಡದಲ್ಲಿ ಒಂದೆಲಗ. ಆಡು ಭಾಷೆಯಲ್ಲಿ ಉರಗೆ, ತುಳುವಿನಲ್ಲಿ "ತಿಮರೆ" ಕೊಂಕಣಿ-ಮರಾಠಿಗಳಲ್ಲಿ "ಕರಾನ್ನೊ" ಸಂಸ್ಕೃತ/ಹಿಂದಿಯಲ್ಲಿ "ಬ್ರಾಹ್ಮಿ" ಎಂದೂ ಕರೆಯಲ್ಪಡುತ್ತದೆ.ಈ ಸಸ್ಯ ಪ್ರಾಚೀನ ಕಾಲದಿಂದಲೂ ಔಷಧೀಯ ಗುಣವಿರುವುದೆಂದು ಗುರ್ತಿಸಿಕೊಂಡಿದೆ. ಇದರ ಎಲ್ಲಾ ಭಾಗಗಳು ಆರೋಗ್ಯ ರಕ್ಷಕ ಗುಣಗಳನ್ನು ಔಷಧೀಯ ಗುಣಗಳನ್ನು ಹೊಂದಿದೆ.ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.ಒಂದೆಲಗದ ವಿಶಿಷ್ಟ ರಾಸಾಯನಿಕ ಅಂಶಗಳು ಬೆಕೊಸೈಡ್ ಎ ಮತ್ತು ಬಿ ಈ ರಾಸಾಯನಿಕಗಳು ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಆಧಾರವಾಗಿವೆ . ನರರೋಗಗಳಿಗೆ ಇದು ದಿವ್ಯೌಷಧಿಯೆಂದು ಆಯುರ್ವೇದದಲ್ಲಿ ಪರಿಗಣಿಸಿದ್ದಾರೆ .
ಚಿಕಿತ್ಸೆ
[ಬದಲಾಯಿಸಿ]ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ.ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ.ಇದನ್ನು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.ಮಲ ಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ.
ವಿವರ
[ಬದಲಾಯಿಸಿ]- ಬ್ರಾಹ್ಮಿ ದ್ವಯಗಳು
- [[:en:Bacopa monnieri| ಬ್ರಾಹ್ಮಿ]]
- ಉತ್ತಮ ಆರೋಗ್ಯದೊಂದಿಗೆ ದೀರ್ಘವಾಗಿ ಬಾಳುವುದಕ್ಕೆ ಆಯುರ್ವೇದದಲ್ಲಿ ಅನೇಕ ಮಾರ್ಗೋಪಾಯಗಳನ್ನು ಸೂಚಿಸಲಾಗಿದೆ.
- ಉತ್ತಮ ಆರೋಗ್ಯದೊಂದಿಗೆ ದೀರ್ಘವಾಗಿ ಬಾಳುವುದಕ್ಕೆ ಆಯುರ್ವೇದದಲ್ಲಿ ಅನೇಕ ಮಾರ್ಗೋಪಾಯಗಳನ್ನು ಸೂಚಿಸಲಾಗಿದೆ. ಸಸ್ಯಶಾಸ್ತ್ರದ ಪ್ರಕಾರ ಬಕೊಪ ಮೊನಿಯೆರಿ (ನೀರು ಬ್ರಾಹ್ಮಿ) ಮತ್ತು ಸೆಂಟೆಲ್ಲಾ ಏಷಿಯಾಟಿಕಾ (ಮಂಡೂಕಪರ್ಣಿ/ ಒಂದೆಲಗ) ಎಂಬ ಎರಡು ಪ್ರಬೇಧಗಳನ್ನು ‘ಬ್ರಾಹ್ಮಿ’ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.ಬ್ರಾಹ್ಮಿ ಎಂಬ ದಿವ್ಯೌಷಧದ ಉಲ್ಲೇಖ ವೇದಗಳಲ್ಲಿಯೂ ಕಾಣಸಿಗುತ್ತದೆ. ಆಯುರ್ವೇದದಲ್ಲಿ 2000ಕ್ಕೂ ಹೆಚ್ಚು ವರ್ಷಗಳಿಗೆ ಮುನ್ನವೇ ಬ್ರಾಹ್ಮಿಯನ್ನು ಔಷಧವಾಗಿ ಬಳಸುತ್ತಿದ್ದರು. ಹಿಂದಿನ ಋಷಿಮುನಿಗಳು ಬ್ರಾಹ್ಮಿಯ ಚಿಕಿತ್ಸಾ ಉಪಯುಕ್ತತೆಯನ್ನು ಹಲವು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ ಬ್ರಾಹ್ಮಿ ಮೇಧ್ಯ (ಬುದ್ಧಿಮತ್ತೆ ಹೆಚ್ಚಿಸುವ ಗುಣ), ಸ್ಮೃತಿಪ್ರದ (ನೆನಪಿನ ಶಕ್ತಿವರ್ಧಕ), ಆಯುಷ್ಯ (ಆಯುಸ್ಸು ವರ್ಧಿಸುವ), ರಸಾಯನ (ಪುನರುಜ್ಜೀವನ ಸಾಮರ್ಥ್ಯವಿರುವ), ಪ್ರಜ್ಞಾ ವರ್ಧನ (ಬೌದ್ಧಿಕ ಸಾಮರ್ಥ್ಯ), ಬಲ್ಯ (ಬಲಪ್ರದ, ವಿಶೇಷವಾಗಿ ಮೆದುಳಿನ ಶಕ್ತಿಯನ್ನು ವರ್ಧಿಸುವ), ಜೀವನಿಯ (ಜೀವಸಾಮರ್ಥ್ಯ ತುಂಬುವ), ಸ್ವರ ವರ್ಣಪ್ರದ (ಸ್ವರ ಮತ್ತು ದೇಹಕಾಂತಿ ವೃದ್ಧಿಸುವ) ಗುಣಗಳನ್ನು ಹೊಂದಿರುವ ದಿವ್ಯೌಷಧ.
- ವಯೋವೃದ್ಧರ ಬುದ್ಧಿಮಾದ್ಯಂತೆ
- ಬಹುತೇಕ ಮಂದಿ ಮೆದುಳಿನ ವಿಶೀರ್ಣ (ನ್ಯುರೋಡೀಜನರೇಷನ್) ಮತ್ತು ವಯೋವೃದ್ಧರ ಬುದ್ಧಿಮಾದ್ಯಂತೆ (ಡಿಮೇನ್ಷಿಯ) ಸಮಸ್ಯೆ ಪೀಡಿತರಾಗಿರುತ್ತಾರೆ. ವೃದ್ಧಾಪ್ಯದ ಈ ಕಾಯಿಲೆಗಳು (ನ್ಯೂರೋ ಡೀಜನರೇಟಿವ್ ಡಿಸೀಸಸ್, ಪಾರ್ಕಿನ್ಸನ್, ಡಿಮೇನ್ಷಿಯ, ಅಲ್ಜೈಮರ್) ಆರ್ಥಿಕ ವ್ಯವಸ್ಥೆಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದ್ದು, ವರ್ಷಕ್ಕೆ ಸುಮಾರು 604 ಶತಕೋಟಿ ಡಾಲರ್ ನಷ್ಟಕ್ಕೆ ಕಾರಣವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನೂ ಆತಂಕದ ವಿಷಯವೆಂದರೆ ಪ್ರತಿ ನಾಲ್ಕು ಸೆಕಂಡಿಗೆ ಡಿಮೇನ್ಷಿಯದ ಒಬ್ಬ ಹೊಸ ರೊಗಿ ಪತ್ತೆಯಾಗುತ್ತಿದ್ದಾನೆ.
- ಕೇವಲ ಸಾಂಪ್ರದಾಯಿಕ ವೈದ್ಯರು ಮಾತ್ರವಲ್ಲದೇ ಆಧುನಿಕ ನರರೋಗ ತಜ್ಞರೂ ಬ್ರಾಹ್ಮಿಯ ಮಹತ್ವವನ್ನು ಗುರುತಿಸಿದ್ದಾರೆ. ಕುಗ್ಗಿದ ನರತಂತುಗಳ ವಿಸ್ತರಣೆಗೆ ಬ್ರಾಹ್ಮಿ ಸಹಕಾರಿ ಎಂಬುದನ್ನು ಪ್ರಯೋಗಗಳು ರುಜುವಾತು ಮಾಡಿವೆ. ಬ್ರಾಹ್ಮಿ ಅನೇಕ ನರರೋಗಗಳಲ್ಲಿ ಅಂದರೆ ಮೂರ್ಛೆ (ಎಪಿಲೆಪ್ಸಿ), ಪಾರ್ಕಿನ್ಸನ್ ಮತ್ತು ಅಲ್ಜೈಮರ್‌ನಂಥ ನರಸಂಬಂಧಿ ಕಾಯಿಲೆಗಳಲ್ಲಿ ಉಪಯುಕ್ತಕಾರಿ ಎಂಬುದನ್ನು ಒಪ್ಪಿದ್ದಾರೆ. ನೀರು ಬ್ರಾಹ್ಮಿ ನರಕೋಶಗಳನ್ನು ಉತ್ತೇಜಿಸಿ ದೀರ್ಘ ಸ್ಮರಣ ಶಕ್ತಿಗೆ ನೆರವಾಗುತ್ತದೆ. ಆರಂಭದಲ್ಲಿಯೇ ನರಕೋಶಗಳ ಸಮಸ್ಯೆಗಳನ್ನು ಪತ್ತೆ ಹಚ್ಚಿದರೆ ಡಿಮೇನ್ಷಿಯ ಮತ್ತು ಅಲ್ಜೈಮರ್ ಕಾಯಿಲೆಗಳನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಆಯುರ್ವೇದ ನಮ್ಮ ದೈನಂದಿನ ಆಹಾರದಲ್ಲಿಯೇ ಬ್ರಾಹ್ಮಿಯ ಬಳಕೆಯನ್ನು ಶಿಫಾರಸು ಮಾಡುತ್ತದೆ.
- ಆಯುರ್ವೇದದಲ್ಲಿ ಒಂದೆಲಗವನ್ನು(ಬ್ರಾಹ್ಮಿ)ಮಕ್ಕಳು ಮತ್ತು ವೃದ್ಧರು ಹೀಗೆ ಎರಡೂ ವರ್ಗದವರ ಚಿಕಿತ್ಸೆಗೆ ಬಳಸುತ್ತಾರೆ. ಮಕ್ಕಳಲ್ಲಿ ಸ್ಮರಣಶಕ್ತಿಯ ವೃದ್ಧಿ ಮತ್ತು ಮಗುವಿನ ನರತಂತು ದೋಷಗಳ ನಿವಾರಣೆಗೆ ಬ್ರಾಹ್ಮಿಯನ್ನು ಬಳಸುತ್ತಾರೆ. ಹಿರಿಯರಲ್ಲಿ ನರ ಮತ್ತು ಮೆದುಳಿನ ವಿಶೀರ್ಣ ರೋಗಗಳಾದ ಡೀಮೆನ್ಷಿಯ, ಪಾರ್ಕಿನ್ಸನ್ಸ್, ಅಲ್ಜೈಮರ್ ಇತ್ಯಾದಿ ಕಾಯಿಲೆಗಳಿಗೆ ಬ್ರಾಹ್ಮಿಯನ್ನು ಉಪಯೋಗಿಸುತ್ತಾರೆ. ವೈದ್ಯರು ಬ್ರಾಹ್ಮಿಯನ್ನು ಹಲವಾರು ರೂಪದಲ್ಲಿ ಬಳಸುತ್ತಾರೆ: ಬ್ರಾಹ್ಮಿ ಸ್ವರದ, ಬ್ರಾಹ್ಮಿ ಚೂರ್ಣ, ಬ್ರಾಹ್ಮಿ ವಟಿ, ಬ್ರಾಹ್ಮಿ ಘೃತ ಇತ್ಯಾದಿ. ದಿನನಿತ್ಯದ ಆಹಾರದಲ್ಲಿ ಬ್ರಾಹ್ಮಿಯನ್ನು ಹಲವು ಬಗೆಯ ತಿನಿಸುಗಳ ರೂಪದಲ್ಲಿ ಬಳಸಬಹುದು.[೨]