ವಿಷಯಕ್ಕೆ ಹೋಗು

ಎಥಿಲೀನ್ ಡೈಕ್ಲೋರೈಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಥಿಲೀನ್ ಡೈಕ್ಲೋರೈಡ್‍ನ ರಚನೆ

ಎಥಿಲೀನ್ ಡೈಕ್ಲೋರೈಡ್ ಒಂದು ಸಾವಯವ ಸಂಯುಕ್ತ. ಇದರ ರಚನಾ ಸೂತ್ರ CICH2-CH2CI. ಇದಕ್ಕೆ ಎಥಿಲೀನ್ ಕ್ಲೋರೈಡ್ ಎಂಬ ಹೆಸರೂ ಇದೆ.

ತಯಾರಿಕೆ

[ಬದಲಾಯಿಸಿ]

ಎಥಿಲೀನ್ ಮತ್ತು ಕ್ಲೋರಿನುಗಳ ನೇರ ಸಂಯೋಗದಿಂದ ಇದನ್ನು ತಯಾರಿಸುತ್ತಾರೆ. ಎರಡು ಅನಿಲಗಳನ್ನೂ ಸರಿಯಾದ ಪ್ರಮಾಣದಲ್ಲಿ ಬೆರೆಸಿ, ಮಿಶ್ರಣವನ್ನು ೮೦-೧೦೦ ಸೆಂ. ಗ್ರೇ. ಉಷ್ಣತೆಗೆ ಕಾಯಿಸಿದ ತಾಮ್ರಕಬ್ಬಿಣ ಅಥವಾ ಜಲರಹಿತ ಕ್ಯಾಲ್ಸಿಯಂ ಕ್ಲೋರೈಡಿನ ಮೇಲೆ ಹಾಯಿಸಿದರೆ ಎಥಿಲೀನ್ ಡೈಕ್ಲೋರೈಡ್ ಉತ್ಪತ್ತಿಯಾಗುತ್ತದೆ.

C2H4 CI2 → C2H4CI2

ಸೂಕ್ತವಾದ ಕ್ಲೋರಿನೀಕರಿಸಿದ ಒಂದು ಹೈಡ್ರೊಕಾರ್ಬನ್ನನ್ನು ದ್ರಾವಕವಾಗಿ ಉಪಯೋಗಿಸುವುದಾದರೆ ದ್ರಾವಣದಲ್ಲಿ ೪೦ ಸೆಂ. ಗ್ರೇ. ಉಷ್ಣತೆಯಲ್ಲಿಯೇ ಈ ಕ್ರಿಯೆಯನ್ನು ಆಗಮಾಡಬಹುದು.

ಗುಣಗಳು

[ಬದಲಾಯಿಸಿ]

ಎಥಿಲೀನ್ ಡೈಕ್ಲೋರೈಡ್ ಬಣ್ಣವಿಲ್ಲದ ದ್ರವಪದಾರ್ಥ. ಇದರ ಕುದಿಬಿಂದು ೮೪ ಸೆಂ. ಗ್ರೇ. ಇದು ಒಳ್ಳೆಯ ದ್ರಾವಕ (ಸಾಲ್ವೆಂಟ್).

ಉಪಯೋಗಗಳು

[ಬದಲಾಯಿಸಿ]

ಒಣ ಒಗೆತಕ್ಕೆ ಅಂದರೆ ಜಲರಹಿತಮಾರ್ಜನಕ್ಕೆ (ಡ್ರೈಕ್ಲೀನಿಂಗ್) ಇದನ್ನು ಬಳಸುತ್ತಾರೆ. ಮೋಟಾರು ವಾಹನಗಳ ಎಂಜಿನ್ನುಗಳಲ್ಲಿ ಆಗುವ ಕುಕ್ಕಾಟವನ್ನು (ನಾಕಿಂಗ್) ತಪ್ಪಿಸುವುದಕ್ಕಾಗಿ ಪೆಟ್ರೋಲಿಗೆ ಬೆರೆಸುವ ಈಥೈಲ್ ಫ್ಲೂಯ್ಡಿನಲ್ಲಿ ಸಾಮಾನ್ಯವಾಗಿ ೧೦% ಎಥಿಲೀನ್ ಡೈಕ್ಲೋರೈಡ್ ಇರುತ್ತದೆ.[] ಅಲ್ಲದೆ ಪ್ಲಾಸ್ಟಿಕ್ಕುಗಳ ತಯಾರಿಕೆಯಲ್ಲಿ ಬಳಸುವ ವೀನೈಲ್ ಕ್ಲೋರೈಡ್ (CH2-CHCI),[] ಥಯೊಕಾಲ್-ಎ ಎಂಬ ಕೃತಕ ರಬ್ಬರ್, ಎಥಿಲೀನ್ ಡಯಮೀನ್ (H2N.CH2-CH2.NH2) ಇವನ್ನು ಎಥಿಲೀನ್ ಡೈಕ್ಲೋರೈಡಿನಿಂದ ತಯಾರಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Seyferth, D. (2003). "The Rise and Fall of Tetraethyllead. 2". Organometallics. 22 (25): 5154–5178. doi:10.1021/om030621b.
  2. "Toxic Substances – 1,2-Dichloroethane". ATSDR. Archived from the original on 2016-03-04. Retrieved 2015-09-23.

ಹೊರಗಿನ ಕೊಂಡಿಗಳು

[ಬದಲಾಯಿಸಿ]