ಆಂಟೋನಿಯೊ ಮೊಸ್ಚೆನಿ
ಆಂಟೋನಿಯೊ ಮೊಸ್ಚೆನಿ ( ೧೬ ಜನವರಿ ೧೮೫೪ , ಸ್ಟೆಝಾನೊ , ಪ್ರಾವಿನ್ಸ್ ಬೆರ್ಗ್ಯಾಮೊ , ಇಟಲಿ - ೧೫ ನವೆಂಬರ್ ೧೯೦೫, ಕೊಚ್ಚಿನ್ , ಕೇರಳ, ಭಾರತ) ಒಂದು ಜೆಸ್ಯೂಟ್ ಸಹೋದರ ಮತ್ತು ವರ್ಣಚಿತ್ರಕಾರ ,ಈತನು ತನ್ನ ವಿಸ್ತಾರವಾದ ಫ್ರೆಸ್ಕೊ ಅಲಂಕಾರ ಚಿತ್ರಗಳಿಗೆ ಹೆಸರುವಾಸಿಯಾಗಿದ್ದನು.ಸೇಂಟ್ ಅಲೋಶಿಯಸ್ ಕಾಲೇಜ(ಮಂಗಳೂರು)ಚರ್ಚ್ ನ ಒಳಾಂಗಣ ಚಿತ್ರಗಳಿಗೆ ಇವನೆ ಕಾರಣಕಾರರಾಗಿರುವನು.
ಜೀವನಚರಿತ್ರೆ
[ಬದಲಾಯಿಸಿ]ಮೊಸ್ಚೆನಿಯ ಕಲಾತ್ಮಕ ಪ್ರತಿಭೆಯನ್ನು ಆರಂಭದಲ್ಲೆ ಪತ್ತೆ ಹಚ್ಚಲಾಯಿತು, ಮತ್ತು ಅವರನ್ನು ಬೆರ್ಗ್ಯಾಮೊದಲ್ಲಿರುವ ಅಕಾಡೆಮಿಯ ಕರ್ರಾರ(Accademia Carrara)ಗೆ ಚಿತ್ರಕಲೆ ಅಧ್ಯಯನ ಮಾಡಲೆಂದು ಕಳುಹಿಸಲಾಯಿತು.ನಂತರ ವ್ಯಾಟಿಕನ್ ಮೇರುಕೃತಿಗಳ ಅಧ್ಯಯನ ಮಾಡಲು ರೋಮ್ ಗೆ ತೆರಳಿದರು.ಫ್ರೆಸ್ಕೊ ಚಿತ್ರಕಲೆ ಅವನ ಹವ್ಯಾಸವಾಗಿ ಬೆಳೆಯಿತು, ಮತ್ತು ಬೆರ್ಗ್ಯಾಮೊ ಪ್ರದೇಶದ ಅನೇಕ ಚರ್ಚ್ಗಳಲ್ಲಿ ಇವನ ಚಿತ್ರಕಲೆಗಳನ್ನು ಕಾಣಬಹುದಾಗಿದೆ. ೧೮೮೯ ರಲ್ಲಿ, ೩೫ ನೇ ವಯಸ್ಸಿನಲ್ಲಿ ಮೊಸ್ಚೆನಿ ಲೌಕಿಕ ವೃತ್ತಿಜೀವನ ತ್ಯಜಿಸಿ ಸೊಸೈಟಿ ಅಪ್ ಜೀಸಸ್ ಸೇರಿದರು. ಎರಡು ವರ್ಷಗಳ ಸಾಮಾನ್ಯ ದೀಕ್ಷಾ ತರಬೇತಿ ಅವಧಿಯ ನಂತರ,ಅವರ ಪ್ರತಿಭೆಯನ್ನು ಗಮನಿಸಿದ ,ಮೇಲಾಧಿಕಾರಿಗಳು ಅವರನ್ನು ಕ್ರೊಯೇಷಿಯಾ, ಅಲ್ಬೇನಿಯಾ ಹಾಗೂ ಅವನ ತಾಯ್ನಾಡಿನಲ್ಲಿರುವ ಚರ್ಚುಗಳನ್ನು ಅಲಂಕರಿಸಲು ಕಳುಹಿಸಲಾಯಿತು. ೧೮೯೮ರಲ್ಲಿ ಮೊಸ್ಚೆನಿ ಭಾರತಕ್ಕೆ ನೇಮಕಗೊಂಡರು ಹಾಗೂ ಇಟಾಲಿಯನ್ ಜೆಸೂಯಿಟರು ಸ್ಥಾಪಿಸಿದ ಸೇಂಟ್ ಅಲೋಶಿಯಸ್ ಕಾಲೇಜ್ ಚಾಪೆಲ್ ನಲ್ಲಿ ಚಿತ್ರಕಲೆ ಮಾಡುವ ನಿರ್ದಿಷ್ಟ ಉದ್ದೇಶದೊಂದಿಗೆ ಮಂಗಳೂರಿಗೆ ಕಳುಹಿಸಲಾಯಿತು.