ವಿಷಯಕ್ಕೆ ಹೋಗು

ಅಶೋಕ ಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಶೋಕ ಗಿಡ

[ಬದಲಾಯಿಸಿ]

ವರ್ಣನೆ

[ಬದಲಾಯಿಸಿ]

ಮಧ್ಯಮ ಗಾತ್ರದ ಮರ, 20ರಿಂದ 30 ಅಡಿ ಎತ್ತರ ಬೆಳೆಯುವುದು. ಎಲೆಗಳು ಹಸಿರಾಗಿರುತ್ತವೆ ಮತ್ತು ಕವಲುಗಳು ಒತ್ತಾಗಿ ಬೆಳೆದು ಸುತ್ತಲೂ ಹರಡಿಕೊಂಡಿರುತ್ತವೆ. ಎಳೆ ಎಲೆಗಳು ತಾಮ್ರದ ವರ್ಣವನ್ನು ಹೊಂದಿರುತ್ತದೆ. ಹೂಗಳು ಹೊಳೆಯುವ, ಪ್ರಕಾಶಮಾನವುಳ್ಳ ಕಿತ್ತಳೆ ಹಣ್ಣಿನ ಬಣ್ಣ ಹೊಂದಿರುತ್ತವೆ ಮತ್ತು ಪರಿಮಳಯುಕ್ತವಾಗಿರುತ್ತದೆ. ಸೌಂದರ್ಯಕ್ಕಾಗಿ ಉದ್ಯಾನವನಗಳಲ್ಲಿ ಬೆಳೆಸುತ್ತಾರೆ. ಕಾಯಿ ಸುಮಾರು 20 ಸೆಂ.ಮೀ. ಉದ್ದವಿದ್ದು, ಹಲವಾರು ಬೀಜಗಳಿಂದ ತುಂಬಿರುತ್ತದೆ.

ಸರಳ ಚಿಕಿತ್ಸೆಗಳು

[ಬದಲಾಯಿಸಿ]

ಸ್ತ್ರೀಯರ ಮಾಸಿಕ ಅತಿಸ್ರಾವ

[ಬದಲಾಯಿಸಿ]

20 ಗ್ರಾಂ ಅಶೋಕ ಮರದ ಚಕ್ಕೆಯನ್ನು ಚೆನ್ನಾಗಿ ಜಜ್ಜಿ 250 ಮಿ.ಲೀ ಹಾಲಿನಲ್ಲಿ ಹಾಕಿ ಅಷ್ಟೇ ನೀರು ಹಾಕಿ, ಕಷಾಯ ಮಾಡುವುದು. ತಣ್ಣಗಾದ ಮೇಲೆ ಕಷಾಯವನ್ನು ಶೋಧಿಸಿ, ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿ, ವೇಳೆಗೆ ನಾಲ್ಕು ಟೀ ಚಮಚ ಸೇವಿಸುವುದು.

ಸಂತಾನ ಪ್ರಾಪ್ತಿಗಾಗಿ

[ಬದಲಾಯಿಸಿ]

ಸ್ತ್ರೀಯರ ಋತುಚಕ್ರ ಸರಿಯಿದ್ದು, ನಿರ್ಮಲ ಮನಸ್ಸಿನಿಂದ ಭಗವಂತನನ್ನು ನೆನೆಯುತ್ತಾ, ಆಶೋಕ ಮರದ ಎಲೆಗಳನ್ನು ಒಂದು ವಾರ ಸೇವಿಸಿದರೆ, ಸಂತಾನ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯುಂಟು.

ಮುಟ್ಟಿನ ಶೂಲೆ ಮತ್ತು ಗರ್ಭಸ್ರಾವ

[ಬದಲಾಯಿಸಿ]

5ಗ್ರಾಂ ಅತೀ ಮಧುರ, 20ಗ್ರಾಂ ಅಶೋಕ ಮರದ ಚಕ್ಕೆಯನ್ನು ನುಣ್ಣ ಮಾಡಿ, ಎರಡು ಲೋಟ ನೀರು ಹಾಕಿ, ಕಾಯಿಸಿ, ಕಾಲು ಭಾಗ ಉಳಿಯುವಂತೆ ಕಷಾಯ ಮಾಡುವುದು. ತಣ್ಣಗಾದ ಮೇಲೆ ಈ ಕಷಾಯಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಸೇರಿಸಿ, ದಿವಸಕ್ಕೆ 2 ಬಾರಿ 2 ಟೀ ಚಮಚ ಸೇವಿಸಿವುದು. ಲಘ ಅಹಾರ ಸೇವನೆ ಮತ್ತು ನಿರ್ಮಲಚಿತ್ತ, ಶೀಘ್ರ ಗುಣಪಡಿಸಲು ಸಹಕಾರಿಯಾಗುವುವು.

ಶ್ವೇತ ಪದರ ಮತ್ತು ರಕ್ತಪದರ

[ಬದಲಾಯಿಸಿ]

10 ಗ್ರಾಂ ಅಶೋಕ ಚೆಕ್ಕೆಯನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ಕಷಾಯಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಸೇವಿಸುವುದು. ಪ್ರತಿನಿತ್ಯ ಎರಡು ವೇಳೆ ಸೇವಿಸಬೇಕು. ಅಥವಾ ಅತಿ ಮಧುರದ ಚೂರ್ಣ, ಬೂದುಗುಂಬಳದ ಬೇರಿನ ಚೂರ್ಣ, ಶುದ್ದಿ ಮಾಡಿದ ಅಶ್ವಗಂಧಿಯ ಚೂರ್ಣ, ಮತು ಉದ್ದಿನ ಹಿಟ್ಟು ಸಮ ತೂಕದಲ್ಲಿ ತೆಗೆದುಕೊಂಡು ಮಿಶ್ರಣ ಮಾಡುವುದು. 5ಗ್ರಾಂ ಚೂರ್ಣವನ್ನು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಾಲಿನಲ್ಲಿ ದಿವಸಕ್ಕೆ ಎರಡು ಬಾರಿ ತೆಗೆದುಕೊಳ್ಳುವುದು.

ರಕ್ತಪಿತ್ತದಲ್ಲಿ

[ಬದಲಾಯಿಸಿ]

ಅರ್ಧಟೀ ಚಮಚ ನುಣ್ಣಗಿರುವ ಜೀರಿಗೆ ಪುಡಿಗೆ ಒಂದು ಟೀ ಚಮಚ ಅಶೋಕ ಚೆಕ್ಕೆಯ ಚೂರ್ಣ ಮತ್ತು ಸ್ವಲ್ಪ ಕಲ್ಲು ಸಕ್ಕರೆ ಪುಡಿ ಸೇರಿಸಿ, ನೀರಿನೊಂದಿಗೆ ಸೇವಿಸುವುದು.

ಉಲ್ಲೇಖ

[ಬದಲಾಯಿಸಿ]

ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು

ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್

ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು